ಲಬುಸ್ಚಗ್ನೆ ಅರ್ಧ ಶತಕ: ಬೃಹತ್ ಮುನ್ನಡೆಯತ್ತ ಆಸ್ಟ್ರೇಲಿಯಾ

ಲೀಡ್ಸ್, ಆ 24      ದ್ವಿತೀಯ ಇನಿಂಗ್ಸ್ನಲ್ಲಿ ಕಡಿಮೆ ಮೊತ್ತಕ್ಕೆ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಉರುಳಿದರೂ ಮಧ್ಯಮ ಕ್ರಮಾಂಕದ ಮಾರ್ನಸ್ ಲಬುಸ್ಚಗ್ನೆ (ಔಟಾಗದೆ 53 ರನ್)  ಅವರ ಅತ್ಯಮೂಲ್ಯ ಅರ್ಧ ಶತಕ ಬಲದಿಂದ ಆಸ್ಟ್ರೇಲಿಯಾ ತಂಡ ಮೂರನೇ ಆ್ಯಶಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ಗೆ ಸವಾಲಿನ ಗುರಿ ನೀಡುವತ್ತ ದಾಪುಗಾಲು ಇಟ್ಟಿದೆ. ಶುಕ್ರವಾರ ಹೇಜಲ್ವುಡ್ (30 ಕ್ಕೆ5) ಅವರ ಮಾರಕ ದಾಳಿಗೆ ತತ್ತರಿಸಿದ್ದ ಇಂಗ್ಲೆಂಡ್ ಕೇವಲ 67 ರನ್ಗಳಿಗೆ ಪ್ರಥಮ ಇನಿಂಗ್ಸ್ನಲ್ಲಿ ಆಲೌಟ್ ಆಗಿತ್ತು. ಆ ಮೂಲಕ 112 ರನ್ ಹಿನ್ನಡೆ ಅನುಭವಿಸಿತ್ತು.  ನಂತರ, ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಎರಡನೇ ದಿನದಾಟ ಮುಕ್ತಾಯಕ್ಕೆ 57 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 171 ರನ್ ದಾಖಲಿಸಿತು. ಆ ಮೂಲಕ 283 ರನ್ ಬೃಹತ್ ಮುನ್ನಡೆ ಕಾಯ್ದುಕೊಂಡಿತು. ಆಸೀಸ್ಗೆ ಲಬುಸ್ಚಗ್ನೆ ಆಸರೆ:  ಪ್ರಥಮ ಇನಿಂಗ್ಸ್ನಲ್ಲಿ ಅರ್ಧ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ಮಾರ್ನಸ್ ಲಬುಸ್ಚಗ್ನೆ ದ್ವಿತೀಯ ಇನಿಂಗ್ಸ್ನಲ್ಲೂ ತಂಡಕ್ಕೆ ಆಪತ್ಬಾಂದವರಾದರು. ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಬಹುಬೇಗ ಔಟ್ ಆದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಏಕಾಂಗಿಯಾಗಿ ಇಂಗ್ಲೆಂಡ್ ಮಾರಕ ದಾಳಿಯನ್ನು ಎದುರಿಸಿದ ಅವರು, 139 ಎಸೆತಗಳಲ್ಲಿ ಔಟಾಗದೆ 53 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರಿಗೆ ಕೆಲ ಕಾಲ ಹೆಗಲು ನೀಡಿದ್ದ ಟ್ರಾವಿಸ್ ಹೆಡ್ 25, ಉಸ್ಮಾನ್ ಖವಾಜ 23, ಮ್ಯಾಥ್ಯೂ ವೇಡ್ 33 ರನ್ ಗಳಿಸಿದರು.  ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್(0), ಮಾರ್ನಸ್ ಹ್ಯಾರಿಸ್ (19) ಬೇಗ ವಿಕೆಟ್ ಒಪ್ಪಿಸಿವ ಮೂಲಕ ನಿರಾಸೆ ಮೂಡಿಸಿದ್ದರು.  ಮೊದಲನೇ ಇನಿಂಗ್ಸ್ನಲ್ಲಿ 112 ರನ್ ಮುನ್ನಡೆ ಗಳಿಸಿದ್ದರ ಫಲವಾಗಿ ಆಸ್ಟ್ರೇಲಿಯಾ, ಇಂಗ್ಲೆಂಡ್ಗೆ ಸವಾಲಿನ ಗುರಿ ನೀಡುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಇಂಗ್ಲೆಂಡ್ ಪರ ಮಾರಕ ದಾಳಿ ನಡೆಸಿದ ಸ್ಟುವರ್ಟ್  ಬ್ರಾಡ್ ಹಾಗೂ ಬೆನ್ ಸ್ಟೋಕ್ಸ್ ತಲಾ ಎರಡು ವಿಕೆಟ್ ಪಡೆದರು. ಕ್ರಿಸ್ ವೋಕ್ಸ್ ಮತ್ತು ಜ್ಯಾಕ್ ಲೀಚ್ ತಲಾ ಒಂದು ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್ ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್: 179 ದ್ವಿತೀಯ ಇನಿಂಗ್ಸ್: 57 ಓವರ್ಗಳಲ್ಲಿ 171/6 (ಮಾರ್ನಸ್ ಲಬುಸ್ಚಗ್ನೆ ಔಟಾಗದೆ 53, ಮ್ಯಾಥ್ಯು ವೇಡ್ 33, ಟ್ರಾವಿಸ್ ಹೆಡ್ 25; ಸ್ಟುವರ್ಟ್ ಬ್ರಾಡ್ 34 ಕ್ಕೆ 2, ಬೆನ್ ಸ್ಟೋಕ್ಸ್ 33 ಕ್ಕೆ 20) ಇಂಗ್ಲೆಂಡ್ ಪ್ರಥಮ ಇನಿಂಗ್ಸ್: 67