ಲಂಡನ್, ಏ, 28, ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಕಠಿಣ ಸಮಯದಲ್ಲಿ ಬೇರೆಡೆ ಕೆಲಸ ಹುಡುಕಲು ಸಿಬ್ಬಂದಿಗೆ ಅಸಾಧ್ಯ ಎಂಬುದನ್ನು ಅರಿತುಕೊಂಡಿರುವ ಬ್ರಿಟಿಷ್ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಆದ ಎಚ್‌ಎಸ್‌ಬಿಸಿ, ಮಂಗಳವಾರ 35,000 ಉದ್ಯೋಗಗಳನ್ನು ಕಡಿತಗೊಳಿಸುವ ಯೋಜನೆಗೆ ಬ್ರೇಕ್ ಹಾಕಿದೆ.ಕಳೆದ ಫೆಬ್ರುವರಿಯಲ್ಲಿ, ಎಚ್‌ಎಸ್‌ಬಿಸಿ ಬ್ಯಾಂಕ್, ಮುಂದಿನ ಮೂರು ವರ್ಷಗಳಲ್ಲಿ ತನ್ನ 2,35,000 ಸಿಬ್ಬಂದಿ ಪ್ರಮಾಣವನ್ನು 2,00,000 ಕ್ಕೆ ಇಳಿಸಲಾಗುವ ಯೋಜನೆಯ ಬಗ್ಗೆ ಬಿಬಿಸಿ ವರದಿ ಮಾಡಿತ್ತು. ಇದರಿಂದ 35,000 ಬ್ಯಾಂಕ್‌ನ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಭೀತಿಗೆ ಒಳಗಾಗಿದ್ದರು. ಇದೀಗ ಕಂಪನಿ ನೀಡಿರುವ ಈ ಸುದ್ದಿಯಿಂದ ಎಲ್ಲಾ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
"ಕೊರೊನಾ ವೈರಸ್ ಕಠಿಣ ಸಮಯದಲ್ಲಿ ಈ ಹಿಂದೆ ತೆಗೆದುಕೊಂಡಿದ್ದ ಎಲ್ಲಾ ನಿರ್ಧಾರಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗುವುದು," ಎಂದು ಎಚ್‌ಎಸ್‌ಬಿಸಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೋಯೆಲ್ ಕ್ವಿನ್ ಅವರ ಇತ್ತೀಚಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ."ಕೋವಿಡ್-19 ಸಾಂಕ್ರಾಮಿಕ ರೋಗದ ಸನ್ನಿವೇಶದಲ್ಲಾಗುವ ಆರ್ಥಿಕ ಬದಲಾವಣೆಯಲ್ಲಿ ಗ್ರಾಹಕರೇ ನಮ್ಮ ಹಣಕಾಸಿನ ಕಾರ್ಯಕ್ಷಮತೆಯ ಬದಲಾವಣೆಯ ಪ್ರಮುಖ ಚಾಲಕರಾಗಿದ್ದಾರೆಂದು," ಎಂದು ಕ್ವಿನ್ ಉಲ್ಲೇಖಿಸಿರುವುದನ್ನು ಬಿಬಿಸಿ ವರದಿ ಮಾಡಿದೆ. ಉದ್ಯೋಗಿಗಳು ತಮ್ಮ ವೇತನದ ಕಾಲು ಭಾಗವನ್ನು ಮುಂದಿನ ಆರು ತಿಂಗಳವರೆಗೆ ಚಾರಿಟಿಗೆ ದಾನ ನೀಡಬೇಕೆಂದು ಈ ತಿಂಗಳ ಆರಂಭದಲ್ಲಿ ಸಿಇಒ ಕ್ವಿನ್ ಹೇಳಿದ್ದರು.