ಗದಗ, ಫೆ.22 : ಪಾಕ್ತಿಸಾನ ಪರವಾಗಿ ಘೋಷಣೆ ಕೂಗಿರುವುದು ದುರದೃಷ್ಟಕರ. ಅದು ಕೂಡಾ ಫ್ರೀಡಂ ಪಾರ್ಕ್ನಂತಹ ಪವಿತ್ರ ಸ್ಥಳದಲ್ಲಿ ಕೂಗಲಾಗಿದೆ ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೂಲ್ಯಗೆ ಕಾರ್ಯಕ್ರಮ ಆಯೋಜಕರು ಆಹ್ವಾನ ನೀಡಿಲ್ಲ ಎಂದು ಹೇಳಿದ್ದಾರೆ. ಆದರೆ ಅವಳ ಕೈಯಲ್ಲಿ ಮೈಕ್ ಹೇಗೆ ಬಂತು ? ಎಂದು ಪ್ರಶ್ನಿಸಿದರು.ಇತ್ತಿಚಿನ ದಿನಗಳಲ್ಲಿ ಕೆಲವು ದೇಶದ್ರೋಹ ಸಂಘಟನೆಗಳ ಜೊತೆಗೆ ಯುವ ಜನಾಂಗ ಕೈ ಜೊಡಿಸುತ್ತಿರುವುದು ವಿಷಾದನೀಯ. ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ದೇಶದ್ರೂಹದ ಕಾನೂನು ಅಡಿಯಲ್ಲಿ ಅವಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ದೇಶ ಪ್ರೇಮದ ವಿಷಯದಲ್ಲಿ ಯಾವುದೇ ರಾಜೀ ಇಲ್ಲ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಪದೇ ಪದೇ ಇಂತಹ ಪ್ರಕರಣಗಳು ನಡೆಯುವುದನ್ನು ನೋಡಿದರೆ, ಇಂತಹ ವರ್ಗ ಯಾವುದಾದರೂ ಆಮಿಷಕ್ಕೆ ಒಳಗಾಗಿ ಮಾಡುತ್ತಿರುವ ಅನುಮಾನ ಕಾಡುತ್ತಿದೆ. ಪೊಲೀಸರ ತನಿಖೆಯಿಂದ ಎಲ್ಲಾ ಗೊತ್ತಾಗಬೇಕಾಗಿದೆ ಎಂದು ಸಚಿವರು ಹೇಳಿದರು.ಮಹದಾಯಿ, ಕಳಸಾ ಬಂಡೂರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯೋಜನೆ ಕುರಿತು ಕೇಂದ್ರದ ನಾಯಕರಿಗೆ ಸಾಕಷ್ಟು ಮನವ ಮನವರಿಕೆ ಮಾಡಿಕೊಡಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತಾ ಶಾ ಅವರು ಗೋವಾ ಹಾಗೂ ಮಹಾರಾಷ್ಟ್ರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. 13.46 ಟಿಎಂಸಿ ನೀರು ಸದ್ಬಳಕೆಗೆ ಕ್ರಮ ಕೈಗೊಳುತ್ತೇವೆ ಎಂದರು.ಈ ಯೋಜನೆ ಜಾರಿಗೆ ಬಜೆಟ್ನಲ್ಲಿ ಸಂಪನ್ಮೂಲ ಮೀಸಲಿಡಲು ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಮನವಿ ಮಾಡುತ್ತೇವೆ. ಈ ಬಜೆಟ್ ನಲ್ಲಿ ಯೋಜನೆ ಜಾರಿಗಾಗಿ ಕ್ರಮ ಕೈಗೊಳುತ್ತೇವೆ. ಕೇಂದ್ರಕ್ಕೆ ಒತ್ತಡ ಹೇರುವ ಅವಶ್ಯಕತೆ ಇಲ್ಲ. ಸ್ವಯಂಪ್ರೇರಿತವಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲಿದೆ ಎಂದು ಪಾಟೀಲ್ ಹೇಳಿದರು.