ಕೇಂದ್ರ ಕಾರಾಗೃಹದಲ್ಲಿ ಎಚ್ಆಯ್ವಿ, ಟಿಬಿ ಮಾಹಿತಿ ಕಾರ್ಯಕ್ರಮ


ಲೋಕದರ್ಶನ ವರದಿ

ಧಾರವಾಡ 24:  ಕೇಂದ್ರ ಕಾರಾಗೃಹ ಧಾರವಾಡದಲ್ಲಿ ದಿ.21ರಂದು ಮುಂಜಾನೆ 10:00 ಘಂಟೆಗೆ ಸಂಸ್ಥೆಯ ಗಾಂಧೀ ಭವನದಲ್ಲಿ ಸಂಸ್ಥೆಯ ಸಿಬ್ಬಂದಿ ಹಾಗೂ ಬಂದಿಗಳಿಗಾಗಿ "ಎಚ್ಆಯ್ವಿ ಮತ್ತು ಟಿಬಿ'' ಕುರಿತಾದ ಮಾಹಿತಿ ಕಾಯರ್ಾಗಾರವನ್ನು ಏಖಂಕಖ, ಓಂಅಔ  ಹಾಗೂ ಖಂಂಖಿಊ ಸಂಸ್ಥೆಗಳ ಸಹಕಾರದೊಂದಿಗೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟಕರಾಗಿ ಚಿನ್ನಣ್ಣವರ ಆರ್. ಎಸ್., ಸದಸ್ಯ ಕಾರ್ಯದಶರ್ಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡರವರು, ಅಧ್ಯಕ್ಷತೆಯನ್ನು ಸಂಸ್ಥೆಯ ಅಧೀಕ್ಷಕರಾದ ಡಾ. ಅನಿತಾ ಆರ್. ರವರು, ಮುಖ್ಯ ಅತಿಥಿಗಳಾಗಿ ಡಿಮ್ಹಾನ್ಸ್ನ ವೈದ್ಯಕೀಯ ಅಧೀಕ್ಷಕ ಶ್ರೀನಿವಾಸ, ಜಿಲ್ಲಾ ಏಡ್ಸ್ ಪ್ರಿವೆನ್ಶನ್ ಯೂನಿಟ್ ಆಫೀಸರ್ ಡಾ. ತನುಜಾ, ಸಾಥಿ ಸಂಸ್ಥೆಯ ರಾಜ್ಯ ಸಂಯೋಜಕ ದೇವೇಂದ್ರಪ್ಪ, ಜಿಲ್ಲಾ ಸುಪರ್ವೈಸರ್ ಶಂಕರಗೌಡ ಪಾಟೀಲ ಹಾಗೂ ಜಿಲ್ಲಾ ಸಂಯೋಜಕರಾದ ವೀರಪ್ಪ ತೇಗೂರ ಹಾಜರಿದ್ದರು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ನಂತರ ಸಭೆಯಲ್ಲಿ ಉಪಸ್ಥಿತರಿದ್ದ ಸರ್ವರನ್ನು ಹೂಗುಚ್ಛದೊಂದಿಗೆ ಸ್ವಾಗತಿಸಲಾಯಿತು. ನಂತರ ಗೌ. ಚಿನ್ನಣ್ಣವರ ಆರ್. ಎಸ್., ಸದಸ್ಯ ಕಾರ್ಯದಶರ್ಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ಇವರು ದೀಪ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ತಮ್ಮ ಉದ್ಘಾಟನಾ ಮಾತುಗಳನ್ನಾಡುತ್ತಾ 'ಬಂದಿಗಳ ಆರೋಗ್ಯದ ಕುರಿತಾಗಿ ಕಾರಾಗೃಹದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈಗ ಎಚ್ಆಯ್ವಿ ಮತ್ತು ಟಿಬಿ ಕುರಿತಾಗಿ ಮಾಹಿತಿ ಹಾಗೂ ಚಿಕಿತ್ಸಾ ಕ್ರಮವನ್ನು ಹಮ್ಮಿಕೊಂಡಿದ್ದು, ಬಂದಿಗಳು ಯಾವುದೇ ಹಿಂಜರಿಕೆಗೆ ಒಳಗಾಗದೆ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಮಾಡಿಸಿಕೊಳ್ಲಲು ಕರೆ ನೀಡಿದರು. ನಂತರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯ ಅತಿಥಿಗಳು ಎಚ್ಆಯ್ವಿ ಏಡ್ಸ್ ಹರಡುವಿಕೆ ಹಾಗೂ ಚಿಕಿತ್ಸೆ ಮತ್ತು ಏಡ್ಸ್ ಹರಡದಂತೆ ತಡೆಕಟ್ಟುವಿಕೆಯ ಮುನ್ನೆಚ್ಚರಿಕೆ ಕ್ರಮಗಳ ಕುರಿತಾಗಿ ಸಮಗ್ರ ಮಾಹಿತಿಯನ್ನು ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧೀಕ್ಷಕಿ ಡಾ. ಅನಿತಾ ಆರ್. ರವರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಸಂಸ್ಥೆಯ ಬಂದಿಗಳು ಹಾಗೂ ಸಿಬ್ಬಂದಿಗಳಿಗಾಗಿ ಈಗ ಎಚ್ಆಯ್ವಿ ಮತ್ತು ಟಿಬಿ ಕುರಿತಾಗಿ ಮಾಹಿತಿ ಕಾರ್ಯಕ್ರಮ ಹಾಗೂ ಚಿಕಿತ್ಸೆಯನ್ನು 3 ವರ್ಷಗಳ ಅವಧಿಗಾಗಿ ಹಮ್ಮಿಕೊಂಡಿದ್ದು, ಕಾರಣ ಎಲ್ಲ ಸಿಬ್ಬಂದಿಗಳು ಹಾಗೂ ಬಂದಿಗಳ ತಪಾಸಣೆ ಮಾಡಿಸಿಕೊಳ್ಳಬೇಕು. ಯಾರಿಗೆ ಊಗಿ ಕಠಣತಜ ಕಂಡು ಬಂದಲ್ಲಿ ಅಂತಹವರ ಹೆಸರನ್ನು ಗೌಪ್ಯವಾಗಿರಿಸಲಾಗುವುದು ಹಾಗೂ ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗುವುದು. ಕಾರಣ ಎಲ್ಲಾ ಬಂದಿಗಳು ತಪಾಸಣೆಗೆ ಒಳಪಡಲು ಕರೆ ನೀಡಿದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ನಂತರ ಸ್ವಯಂ ಪ್ರೇರಿತವಾಗಿ ತಪಾಸಣೆಗೆ ಒಳಪಡಲು ಬಯಸಿದ ಸಿಬ್ಬಂದಿ ಹಾಗೂ ಬಂದಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಲಾಯಿತು.