ಅಮೆರಿಕದಲ್ಲಿ ಕರೋನ ಸೋಂಕು: 143 ಕ್ಕೂ ಹೆಚ್ಚು ಜನರ ಸಾವು

ವಾಷಿಂಗ್ಟನ್, ಮಾರ್ಚ್ 19 :ಅಮೆರಿಕದಲ್ಲಿ ಕರೋನ ಸೊಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ವರೆಗೆ ಇದಕ್ಕೆ 143ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ನಡುವೆ ಸೋಂಕಿತ ಪ್ರಕರಣಗಳ 8,ಸಾವಿರ ದಾಟಿದೆ ಎಂದೂ ಮಾಧ್ಯಮ ವರದಿ ಮಾಡಿದೆ . ಬುಧವಾರ, ಅಮೆರಿಕ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಸುಮಾರು 7,038 ಹೊಸ ಪ್ರಕರಣಗಳು ಮತ್ತು ಒಟ್ಟು 97 ಸಾವುನೋವಿನ ಪ್ರಕರಣಗಳನ್ನು ವರದಿ ಮಾಡಿದೆ. ಹೊಸ ಡೇಟಾವನ್ನು ದಿ ನ್ಯೂಯಾರ್ಕ್ ಟೈಮ್ಸ್ ಒದಗಿಸಿದ್ದು ಸಾವಿನ ಸರಣಿಯಲ್ಲಿ ರಾಜಧಾನಿ ಪ್ರದೇಶ ವಾಷಿಂಗ್ಟನ್ ಮೊದಲ ಸ್ಥಾನ ಪಡೆದುಕೊಂಡಿದೆ. ಇದೆ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೊವಿಡ್ ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿತ್ತು ಈ ನಡುವೆ ವಿಶ್ವದಾದ್ಯಂತ ಮಾರಕ ಕರೋನಕ್ಕೆ 2ಲಕ್ಷದ 15,ಸಾವಿರ ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು 8,ಸಾವಿರ ಕ್ಕೂ ಹೆಚ್ಚು ಸಾವು ಸಂಭವಿಸಿವೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.