ಜರ್ಮನಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 12 ಸಾವಿರಕ್ಕೆ ಏರಿಕೆ

ಬರ್ಲಿನ್, ಮಾರ್ಚ್ 19:- ಜರ್ಮನಿಯಲ್ಲಿ ಕರೋನ ಸೋಂಕಿನ ದೃಡ ಪ್ರಕಕರಣಗಳ ಸಂಖ್ಯೆ 12ಸಾವಿರ ದಾಟಿದೆ. ಈವರೆಗೆ ಮಾರಕ ಕರೋನಸೋಂಕಿನಿಂದ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ ಎಂದು ಫೋಕಸ್ ನ್ಯೂಸ್ ಮ್ಯಾಗಜೀನ್ ವರದಿ ಮಾಡಿದೆ. ಪ್ರಾದೇಶಿಕ ಅಧಿಕಾರಿಗಳು.ಜರ್ಮನ್ ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್ ಸಂಗ್ರಹಿಸಿದ ಅಧಿಕೃತ ಮಾಹಿತಿಯು ಇದಕ್ಕೆ ವಿರುದ್ದವಾಗಿದೆ ಈವರೆಗೆ ಸೋಂಕಿಗೆ 8,200 ಒಳಗಾಗಿದ್ದು 12 ಸಾವಿನ ಪ್ರಕರಣ ಗಳು ಮಾತ್ರ ವರದಿಯಾಗಿದೆ ಎಂದು ಹೇಳಿದೆ. ಇದೇ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -19 ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು . ಪ್ರಪಂಚದ 160 ದೇಶಗಳಲ್ಲಿ 1ಲಕ್ಷದ 91,ಸಾವಿರಕ್ಕೂ ಹೆಚ್ಚು ಜನರು ಮಾರಕ ಸೋಂಕಿಗೆ ಒಳಗಾಗಿದ್ದಾರೆ. ಜಗತ್ತಿನಾದ್ಯಂತ 8ಸಾವಿರ ಜನ ಇದಕ್ಕೆ ಬಲಿಯಾಗಿದ್ದಾರೆ .