ಬೀಜಿಂಗ್ ನಲ್ಲಿ 21 ಆಮದು ಕರೋನ ದೃಡಪ್ರಕರಣ ದಾಖಲುHEALTH-CHINA-COVID-19 CASES
Lokadrshan Daily
1/10/25, 8:38 PM ಪ್ರಕಟಿಸಲಾಗಿದೆ
ಬೀಜಿಂಗ್ ನಲ್ಲಿ 21 ಆಮದು ಕರೋನ ದೃಡಪ್ರಕರಣ ದಾಖಲು
ಬೀಜಿಂಗ್, ಮಾರ್ಚ್ 19 (ಕ್ಸಿನ್ಹುವಾ) ವಿಶ್ವವನ್ನೆ ನಡುಗಿಸಿರುವ ಕರೋನ ಸೋಂಕು ಚೀನಾವನ್ನು ಬಿಡದೆ ಕಾಡುತ್ತಿದೆ ಈಗ ಇತರ ದೇಶಗಳಿಂದ ಬಂದವರಿಂದ ಹೊಸದಾಗಿ 21 ಕರೋನ ಸೋಂಕಿನ ಖಚಿತ ಪ್ರಕರಣ ದಾಖಲಾಗಿದೆ ಎಂದು ಪುರಸಭೆಯ ಆರೋಗ್ಯ ಆಯೋಗ ಗುರುವಾರ ತಿಳಿಸಿದೆ.
ಹೊರಗಿನಿಂದ ಬಂದ ಸೋಂಕಿನ ಪ್ರಕರಣಗಳ ಪೈಕಿ 7 ಅಮೆರಿಕ ,7 ಸ್ಪೇನ್, ಹಂಗೇರಿಯಿಂದ ಮೂರು, ಆಸ್ಟ್ರಿಯಾದಿಂದ ಎರಡು, ಬ್ರೆಜಿಲ್‌ನಿಂದ ಒಂದು ಮತ್ತು ಲಕ್ಸೆಂಬರ್ಗ್‌ನಿಂದ ಬಂದಿವೆ ಬುಧವಾರದ ಅಂತ್ಯದ ವೇಳೆಗೆ ನಗರಕ್ಕೆ ಕಾಲಿಟ್ಟ ಆಮದು ಸೋಂಕಿನ ಪ್ರಕರಣಗಳ ಸಂಖ್ಯೆ 64 ಕ್ಕೆ ಏರಿಕೆಯಾಗಿದೆ.
ಬೀಜಿಂಗ್‌ನಲ್ಲಿ ಸತತ 12 ದಿನಗಳಿಂದ ಸ್ಥಳೀಯವಾಗಿ ಹರಡುವ ಕೊವಿಡ್ ಪ್ರಕರಣಗಳು ಹೊಸದಾಗಿ ವರದಿಯಾಗಿಲ್ಲ ಎಂಬುದು ಸಮಾಧಾನ ತಂದಿದೆ.
ಬುಧವಾರದ ಅಂತ್ಯದ ವೇಳೆಗೆ, ಬೀಜಿಂಗ್ ನಲ್ಲಿ ಒಟ್ಟು 479 ಪ್ರಕರಣಗಳನ್ನು ವರದಿಯಾಗಿದ್ದು , 379 ಜನರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಹೋಗಿದ್ದಾರೆ.