ಮುಂಬೈ, ಫೆ.17,ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಜೀವನಾಧಾರಿತ ಚಿತ್ರದಲ್ಲಿ ಬಾಲಿವುಡ್ ನಟ ಹರ್ಷವರ್ಧನ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನಿಲ್ ಕಪೂರ್ ಅವರ ಪುತ್ರ ಹರ್ಷವರ್ಧನ್ ಕಪೂರ್ ಅಭಿನವ್ ಬಿಂದ್ರಾ ಅವರ ಜೀವನಚರಿತ್ರೆಯ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಅನಿಲ್ ಕಪೂರ್ ಈ ಚಿತ್ರದಲ್ಲಿ ಬಿಂದ್ರಾ ತಂದೆಯಾಗಿ ನಟಿಸಲಿದ್ದಾರೆ. ಈ ಬಗ್ಗೆ ಅನಿಲ್ ಕಪೂರ್ ಟ್ವೀಟ್ ಮಾಡಿದ್ದಾರೆ.
ಈ ಚಿತ್ರವು ಬಿಂದ್ರಾ ಅವರ ಆತ್ಮಚರಿತ್ರೆ "ಎ ಶಾಟ್ ಅಟ್ ಹಿಸ್ಟರಿ: ಮೈ ಒಬ್ಸೆಸಿವ್ ಜರ್ನಿ ಟು ಒಲಿಂಪಿಕ್ಸ್ ಗೋಲ್ಡ್ ಅಂಡ್ ಬಿಯಾಂಡ್" ಅನ್ನು ಆಧರಿಸಿದೆ ಎಂದು ಹೇಳಲಾಗಿದೆ. ಈ ಚಿತ್ರದ ಬಗ್ಗೆ ಮಾತನಾಡಿರುವ ಹರ್ಷವರ್ಧನ್, "ಆರಂಭವು ತುಂಬಾ ವಿಶೇಷವಾಗಿದೆ. ವಿಶೇಷವಾಗಿ ನೀವು ವಿಶ್ವದಾದ್ಯಂತ ದೇಶಕ್ಕೆ ಕೀರ್ತಿ ತಂದುಕೊಟ್ಟ ಪಾತ್ರವನ್ನು ನಿರ್ವಹಿಸಲು ಬಂದಾಗ. ಅಭಿನವ್ ಬಿಂದ್ರಾ ಪಾತ್ರದಲ್ಲಿ ನಟಿಸಲು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ. ಈ ಪಾತ್ರಕ್ಕೆ ನ್ಯಾಯ ಒದಗಿಸಲು ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ” ಎಂದಿದ್ದಾರೆ.