ಎಚ್. ಡಿ. ರೇವಣ್ಣ ಆಪ್ತನ ಮನೆ ಮೇಲೆ ಐಟಿ ದಾಳಿ: ವಿಚಾರಣೆಗೆ ಹಾಜರಾಗಲು ಸೂಚನೆ

ಹಾಸನ, ಫೆ. 12:     ಮಾಜಿ ಸಚಿವ ಎಚ್​​.ಡಿ. ರೇವಣ್ಣ ಅವರ ಆಪ್ತರೊಬ್ಬರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.ಎಚ್  ಡಿ ರೇವಣ್ಣ ಅವರ ಆಪ್ತ, ಜೆಡಿಎಸ್ ಕಾರ್ಯಕರ್ತ ಹಾಗೂ ಕ್ಲಾಸ್ ಒನ್ ಕಂಟ್ರಾಕ್ಟರ್  ಶಿವಕುಮಾರ್ ಮನೆ ಮೇಲೆ ಎಂಟು ಮಂದಿ ಅಧಿಕಾರಿಗಳ ತಂಡ ಮಂಗಳವಾರ ದಾಳಿ ಮಾಡಿ, ಶೋಧ ನಡೆಸಿದೆ.

ಹಾಸನ  ನಗರದ ಸಂಗಮೇಶ್ವರ ಬಡಾವಣೆಯಲ್ಲಿನ ಶಿವಕುಮಾರ್ ಮನೆಯಲ್ಲಿ ನಿನ್ನೆ ಬೆಳಗ್ಗೆ 8  ಗಂಟೆಯಿಂದ ಮಧ್ಯರಾತ್ರಿಯವರೆಗೂ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿ, ಕೆಲ ಮಹತ್ವದ  ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನದ ಬೇಲೂರು  ರಸ್ತೆಯಲ್ಲಿರುವಐಟಿ ಕಚೇರಿಗೆ ಇಂದು ಹಾಜರಾಗುವಂತೆ ಶಿವಕುಮಾರ್​ಗೆ ಅಧಿಕಾರಿಗಳು ಸೂಚಿಸಿದ್ದಾರೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಯೂ ರೇವಣ್ಣ ಅವರ ಆಪ್ತರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು.