ಖೇಲೋ ಇಂಡಿಯಾಗೆ ಗುವಾಹಟಿ ಸಜ್ಜು

ಗುವಾಹಟಿ, ಜ 10, ಅಸ್ಸಾಂನ ಗುವಾಹಟಿಯಲ್ಲಿ ಮೂರನೇ ಆವೃತ್ತಿಯ ಖೇಲೋ ಇಂಡಿಯಾ ಯುವ ಕ್ರೀಡಾಕೂಟ ಇಂದಿನಿಂದ ಆರಂಭಗೊಳ್ಳಲಿದೆ.  ವಿವಿಧ ೨೦ ವಿಭಾಗಗಳ ಕ್ರೀಡೆಗಳಲ್ಲಿ ೬ ಸಾವಿರದ ೫೦೦ಕ್ಕೂ ಹೆಚ್ಚು ಅಥ್ಲೆಟ್ಗಳು ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟದ ಮುಖ್ಯ ಕಾರ್ಯಕಾರಿ ಅಧಿಕಾರಿ ಅವಿನಾಶ್ ಜೋಷಿ ಮಾತನಾಡಿ, ಉದ್ಘಾಟನಾ ಸಮಾರಂಭಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಇಡೀ ದೇಶದ ಕ್ರೀಡಾ ವಲಯ ಈ ಕ್ರೀಡಾಕೂಟದ ಬಗ್ಗೆ ವಿಶೇಷ ಗಮನ ಹರಿಸಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸರ್ಬಾನಂದ್ ಸೋನೊವಾಲ್, ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹಾಗೂ ಹಲವು ಪ್ರಮುಖ ಕ್ರೀಡಾಪಟುಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.