ಗುಟ್ಕಾ ಸೇವಿಸಿ ಕ್ಯಾನ್ಸ್ರ್, ಹೃದಯ ಸಂಬಂಧಿಸಿದ ಖಾಯಿಲೆಗೆ ತುತ್ತಾಗದಿರಿ: ಸಿವಿಲ್ ನ್ಯಾಯಾಧಿಶರು ಶ್ರೀನಿವಾಸ್

ಕೊಪ್ಪಳ 31: ಗುಟ್ಕಾ ಸೇವನೆಯಿಂದ ಕ್ಯಾನ್ಸ್ರ್ ಹಾಗೂ ಹೃದಯ ಸಂಬಂಧಿಸಿದ ಖಾಯಿಲೆಗೆ ತುತ್ತಾಗದಿರಿ ಎಂದು ಹಿರಿಯ ಸಿವಿಲ್ ನ್ಯಾಯಾಧಿಶರು ಹಾಗೂ ಜಿಲ್ಲಾ ಕಾನೂನು ಸೇವಾಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ  ಟಿ. ಶ್ರೀನಿವಾಸ ಅವರು ಕರೆ ನೀಡಿದರು.    

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸವರ್ೇಕ್ಷಣಾ ಘಟಕ ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶ ಕೊಪ್ಪಳ, ಪೋಲಿಸ್ ಇಲಾಖೆ, ಶಿಕ್ಷಣ ಇಲಾಖೆ, ನಗರ ಸಭೆ, ಕೆ.ಎಸ್.ಆರ್.ಟಿ.ಸಿ ಇಲಾಖೆ, ವೈದ್ಯಕೀಯ ಮಹಾವಿದ್ಯಾಲಯ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಹಳೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲಾದ ಜನ ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಜಾಲನೆ ನೀಡಿ ಅವರು ಮಾತನಾಡಿದರು.  

ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಹಿಂದಿನ ಕಾಲದಲ್ಲಿ ಗ್ರಾಮಿಣ ಮಟ್ಟದಲ್ಲಿ ಇರುವಂತ ಜನರು ತಂಬಾಕು, ಬೀಡಿ, ಸಿಗರೇಟ್, ಗುಟ್ಕಾ ಇತರ ಚಟಗಳಿಗೆ ದಾಸರಾಗಿದ್ದರು.  ಹಾಗೂ ಕಾಲೇಜು ಮಟ್ಟದಲ್ಲಿ ಯುವಕರು ಬಸ್ಗಳಲ್ಲಿ ಪ್ರಯಾಣ ಮಾಡುವ ಸಂದಂರ್ಭದಲ್ಲಿ ಗುಟ್ಕಾ ತಿಂದು ಉಗುಳುವುದನ್ನು ಸಾಮಾನ್ಯವಾಗಿ ನೋಡುತ್ತೇವೆ.  ತಂಬಾಕು ಸೇವನೆಯಿಂದ ವಿಶ್ವದಾದ್ಯಂತ ಅನೇಕ ಖಾಯಿಲೆ ಮತ್ತು ಮರಣಗಳಿಗೆ ಉದಾಹಣೆ ಕ್ಯಾನ್ಸ್ರ್, ಹೃದಯ ಸಂಬಂಧಿ ಖಾಯಿಲೆಗಳು ಶ್ವಶಾಕೋಶ ಕಾಯಿಲೆಗಳಿಗೆ ಪ್ರಮುಕ ಕಾರಣವಾಗಿದೆ.  ಪ್ರತಿ ವರ್ಷ ವಿಶ್ವದಾದ್ಯಂತ 60 ಲಕ್ಷಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದುಂಟಾಗುವ ಖಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ.  ತಂಬಾಕು ಸೇವನೆ ಮಾಡುವವರು ತಂಬಾಕು ಸೇವನೆಯಿಂದ ವಯಸ್ಸಿನಲ್ಲಿ ಸುಮಾರು 10ವರ್ಷ ಹೆಚು ವಯಸ್ಸಾದವರಂತೆ ಕಾಣುತ್ತಾರೆ.  ಪ್ರತಿ 6 ಸೆಂಕೆಂಡಿಗೊಮ್ಮೆ ಒಬ್ಬ ತಂಬಾಕು ಸೇವನೆಯಿಂದ ಉಂಟಾಗುವ ಖಾಲೆಗಳಿಂದ ಸಾವನ್ನಪ್ಪುತ್ತಿದ್ದಾನೆ.  ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳಾದ ಅಸ್ತಮಾ, ದಂತ ಕ್ಷಯ, ವಸಡಿನ ಖಾಯಿಲೆಗಳ ಉಸಿರಾಟದ ತೊಂದರೆ, ದುವರ್ಾಸನೆಯುಕ್ತ ಉಸಿರಾಟ ತೊಂದರೆಯಾಗುತ್ತದೆ.  ತಂಬಾಕು ನಿಯಂತ್ರಣ ಕಾನೂನು ಕೊಟ್ಪಾ-2003  ಸೆಕ್ಷನ್4: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನéಿಷೇಧ ಸೆಕ್ಷನ್:5 ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹಿರಾತು, ಉತ್ತೇಜನ ಪ್ರಯೋಜಕತೆ ಹಿಗೆ ಎಲ್ಲಾ ಸೆಕ್ಷನ್ಗಳ ಬಗ್ಗೆ ಸಾರ್ವಜನಿಕರಿಗೆ ಆರೋಗ್ಯ ಹಕ್ಕುಗಳನ್ನು ನೀಡುವಂತೆ ತಿಳಿಸಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧಿಶರು ಹಾಗೂ ಜಿಲ್ಲಾ ಕಾನೂನು ಸೇವಾಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಟಿ. ಶ್ರೀನಿವಾಸ ಅವರು ಹೇಳಿದರು.  

ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗೂ ಸಹಾಯಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಎನ್.ಸಿ.ಡಿ ಸಿಬ್ಬಂದಿಗಳ ಸಹಯೋಗದಲ್ಲಿ ಬಾಯಿ ಕ್ಯಾನ್ಸ್ರ್ ಶಿಭಿರ ಮತ್ತು ಅಸಾಂಕ್ರಾಮಿಕ ರೋಗಗಳ ಉಚಿತ ತಪಾಸಣೆ ಶಿಭಿರ ಮಾಡಲಾಗಿದೆ.  

ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಟಿ. ಲಿಂಗರಾಜು, ಎಂ.ಜಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಮಹೇಶ, ಜಿಲ್ಲಾ ಸವರ್ೇಕ್ಷಣಾಧಿಕಾರಿ ಡಾ. ಟಿ.ಲಿಂಗರಾಜು,  ಕೊಪ್ಪಳ ತಾಲ್ಲೂಕಾ ಆರೋಗ್ಯ ಅಧಿಕಾರಿ ಡಾ. ರಾಮಂಜನಯ್ಯ, ಆಡಳಿತ ವೈದ್ಯಾಧಿಕಾರಿ ಡಾ.ವೆಂಕಟೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ, ಕೊಪ್ಪಳ ಜಿಲ್ಲಾ ಸಲಹೆಗಾರರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮೆಹಬೂಬ ಅಲಿ, ಸಮಾಜ ಕಾರ್ಯಕರ್ತರು ಜ್ಯೋತಿ ಕಿತ್ತೂರು, ಶಾಂತಮ್ಮ ಕಟ್ಟಿಮನಿ, ಆಪ್ತ ಸಮಾಲೋಚಕರು ಜಿಲ್ಲಾ ಡಾ. ಜಯಶ್ರೀ ಹಾಗೂ ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಎನ್.ಸಿ.ಡಿ ಘಟಕ, ಬಸಪ್ಪ ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಯು.ಹೆಚ್.ಸಿ  ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.