ಲೋಕದರ್ಶನವರದಿ
ಗುಳೇದಗುಡ್ಡ: ಪಟ್ಟಣದ ಗುರುಸಿದ್ದೇಶ್ವರ ಮಠೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ನಾಡಿನಲ್ಲಿ ಹೆಸರಾಗಿದೆ. ಜಾತಿ, ಧರ್ಮ ಹಾಗೂ ಪಕ್ಷಾತೀತವಾಗಿ ಸರ್ವ ಜನಾಂಗದವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಮಠದ ಶ್ರೀಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳವರ ಕಾಯಕ ನಿಷ್ಠೆ ಮೆಚ್ಚುವಂತದ್ದು ಎಂದು ಬಾದಾಮಿಯ ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ ಹೇಳಿದರು.
ಶನಿವಾರ ಇಲ್ಲಿನ ಶ್ರೀಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮಿಗಳವರ 34ನೇ ವಾಷರ್ಿಕ ಪುಣ್ಯಾರಾಧನೆಯ ಶರಣಸಂಗಮ ಸಮಾರಂಭದಲ್ಲಿ ಮಾತನಾಡಿ, ಬಸವರಾಜ ಶ್ರೀಗಳು ಅನೇಕ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಿದ್ದಾರೆ. ಧಾಮರ್ಿಕ, ಸಾಮಾಜಿಕ ನ್ಯಾಯ, ಭಾವೈಕ್ಯತೆಗಾಗಿ ಧ್ವನಿ ಎತ್ತಿದ್ದಾರೆ. ಸಂಘಟನೆಯ ಮೂಲಕ ನೇಕಾರ ಸಮಾಜ ಜಾಗೃತವಾಗಿ ಬೆಳೆಯುವಂತೆ ಮಾಡಿದ್ದಾರೆ. ರಾಜ್ಯದಲ್ಲಿ ರೈತರಂತೆ ನೇಕಾರರು ಕೂಡಾ ಬಹುಸಂಖ್ಯಾತರೆಂದು ಗುರುತಿಸುವಲ್ಲಿ ನೇಕಾರ ಜನಾಂಗದ ಶ್ರೀಗಳಲ್ಲಿ ಬಸವರಾಜ ಪಟ್ಟದಾರ್ಯ ಶ್ರೀಗಳು ಅಗ್ರಗಣ್ಯರು. ಸಮಾಜದಲ್ಲಿ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು.
ಆ ಮೂಲಕ ಸಮಾಜದ ಸರ್ವತೋಮುಖ ಬೆಳವಣಿಗೆ ಆಗಬೇಕು. ಶ್ರೀಮಠವು ಒಂದೇ ಜಾತಿಗೆ ಸೀಮಿತವಾಗಿಲ್ಲ. ಸ್ವಾಸ್ಥ್ಯ ಸಮಾಜಕ್ಕೆ ಅದು ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಶ್ರೀಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು, ಷ.ಬ್ರ.ಸಿದ್ಧರಾಮೇಶ್ವರ ಶಿವಾಚಾರ್ಯರು, ಷ.ಬ್ರ.ಕಾಡಸಿದ್ಧೇಶ್ವರ ಶಿವಾಚಾರ್ಯರು, ಗುರುಬಸವದೇವರು, ಶಿವಶರಣದೇವರು, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಎಸ್.ಜಿ ನಂಜಯ್ಯನಮಠ, ಜಾನಪದ ಸಾಹಿತಿ ಸಿದ್ದು ದಿವಾನ, ಗಾನಯೋಗಿ ಪಂಚಾಕ್ಷರ ಸಂಗೀತ ಮಹಾವಿದ್ಯಾಲಯ ಪ್ರಾಚಾರ್ಯ ಅಖಂಡೇಶ್ವರ ಪತ್ತಾರ, ಜೀವನ ತುಪ್ಪದ, ಸಿಬಿಎಸ್ಸಿ ಪ್ರಾಚಾರ್ಯ ಅಶೋಕ ತುಪ್ಪದ, ಶರಣ ಸಂಗಮ ಸಮಿತಿ ಅಧ್ಯಕ್ಷ ಪ್ರಕಾಶ ರೋಜಿ, ಕಾರ್ಯದಶರ್ಿ ಮಂಜುನಾಥ ರಾಜನಾಳ, ಈರಣ್ಣ ಶೇಖಾ, ಸೋಮಶೇಖರ ಕಲಬುಗರ್ಿ, ವಿವೇಕಾನಂದ ಪರಗಿ, ಬಸವರಾಜ ತಾಂಡೂರ, ಗುರು ಕಾಳಿ, ಕೂಡ್ಲೆಪ್ಪ ಕಲ್ಯಾಣಿ, ದಾನಪ್ಪ ಕುಂದರಗಿ ಹಾಗೂ ಇತತರು ಇದ್ದರು.