ಮುಧೋಳ22: ಮಕ್ಕಳಿಗೆ ಓದುವದರ ಜೊತೆಗೆ ಸಂಸ್ಕಾರ ಬೇಳಿಸುವದು ಮಹತ್ವದಾಗಿದೆ, ಇಂದಿನ ಆಧುನಿಕ ಜಗತ್ತಿನಲ್ಲಿ ಪಾಲಕರೆ ಸಂಸ್ಕಾರವನ್ನು ಮರೆತು ಹೋಸತವನ್ನು ರೂಡಿಸಿಕ್ಕೂಳುವಾಗ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಆಗುವದು ಸಹಜವೆ ಈ ಗುರುಕುಲವು ಇಂತಹದರ ಮಧ್ಯದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಜೊತೆಗೆ ಸಂಸ್ಕಾರಕ್ಕೂ ಮಹತ್ವ ನೀಡಿ ಮಕ್ಕಳಿಗೆ ಪರಿಪೂರ್ಣ ಶಿಕ್ಷಣ ಕೊಡುತ್ತಿರುವದು ಶ್ಲ್ಯಾಘನೀಯ ಸಂಗತಿ ಎಂದು ಲೋಕಾಪೂರ ಹಿರೇಮಠದ ಚಂದ್ರಶೇಖರ ಸ್ವಾಮಿಜಿ ಹೇಳಿದರು.
ನಗರದ ಹೌಸಿಂಗ ಕಾಲನಿಯ ಗುರುಕುಲ ಶಿಕ್ಷಣ ಸಂಸ್ಥೆಯು ಆಯೋಜಿಸಿದ ಗುರುಕುಲ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ ಧುರಿಣ ಸತೀಶ ಬಂಡಿವಡ್ಡರ, ಮಹಾದೇವಯ್ಯ ವಸ್ತ್ರದ, ಡಾ.ಪುಷ್ಪಾ ಅರುಣ ಕಾರಜೋಳ,ಮುಖ್ಯ ಗುರುಮಾತೆ ಸುಮಾ ಕೊರಡ್ಡಿ, ವಾಗ್ದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಲ್.ಕೆ.ಕಾಮಾ, ಎಲ್.ಕೆ. ಹಾದಿಮನಿ, ಎ.ಎಸ್.ಅಂಗಡಿ, ಜಿ.ಆರ್.ಯಡಹಳ್ಳಿ, ವ್ಹ್ಹಿ.ಎಸ್.ಅಮ್ಮಲಝರಿ, ಎಮ್ ಆರ್.ಕಳ್ಳಿ, ಸಂಸ್ಥೆಯ ಅಧ್ಯಕ್ಷ ಯಲ್ಲಪ್ಪ ದೊಡಮನಿ ಸೇರಿದಂತೆ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಹಾಗೂ ಶಿಕ್ಷಕ ಶಿಕ್ಷಕೀಯರು, ಪಾಲಕರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ನಿತ್ಯಾನಂದಿನಿ ಬಿ. ಹುಲಕುಂದ ಸ್ವಾಗತಿಸಿ,ನಿರೂಪಿಸಿದರೆ,ಸುಪ್ರೀಯಾ ಕೊರಡ್ಡಿ ವಂದಿಸಿದರು.