ಹಳೇ ವಿದ್ಯಾಥರ್ಿಗಳಿಂದ ತೋಂಟದ ಸಿದ್ಧರಾಮ ಮಹಾಸ್ವಾಮಿಗಳಿಗೆ ಗುರು ವಂದನೆ

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ 13:ತಾಲೂಕಿನ ಬಾಚಿಗೊಂಡನಹಳ್ಳಿಯ ಕೌದಿಮಹಾಂತೇಶ್ವರ ಪ್ರೌಢಶಾಲೆಯ ಹಳೇ ವಿದ್ಯಾಥರ್ಿಗಳು ಹಮ್ಮಿಕೊಂಡಿದ್ದ ಸ್ನೇಹ ಪರ್ವದಲ್ಲಿ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಡಂಬಳದ ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿಗಳಿಗೆ ಗುರು ವಂದನೆ ಸಲ್ಲಿಸಿದರು.

ಶ್ರೀಗಳು ಪೀಠಾಧಿಪತಿಗಳಾದ ನಂತರ ಪ್ರಥಮ ಬಾರಿಗೆ ಗ್ರಾಮದ ಪರ್ವ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಗುರುವಂದನೆ ಸ್ವೀಕರಿಸಿ ತೋಂಟದ ಸಿದ್ದರಾಮ ಶ್ರೀಗಳು ಆಶರ್ೀವಚನ ನೀಡಿ ಮಾತನಾಡಿ, ಜಾತ್ಯಾತೀತ ತತ್ವಗಳ ನೆಲೆಗಟ್ಟಿನಲ್ಲಿ ಜನ ಮಾನಸದಲ್ಲಿ ಮಠ ಮಾನ್ಯಗಳೆಂದರೆ ಹೇಗಿರಬೇಕು ಎಂಬುದನ್ನು ನಮ್ಮ ಲಿಂಗೈಕ್ಯ ಸಿದ್ಧಲಿಂಗ ಮಹಾಸ್ವಾಮಿಗಳು ದೇಶಕ್ಕೆ ಸಾರಿದ್ದಾರೆ. ಮಠಗಳಲ್ಲಿ ಯಾವುದೇ ಜಾತಿಯನ್ನು ಎತ್ತಿಹಿಡಿಯ ಬಾರದು, ಮಧ್ಯ ಕನರ್ಾಟಕದ ಪ್ರತಿ ಗ್ರಾಮಗಳಲ್ಲಿ ಸಂಚರಿಸಿ ಜನರ ಕಷ್ಟ-ನಷ್ಟಗಳಿ ದ್ವನಿಯಾಗಿ, ಸ್ವತಃ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ಕಾಳಜಿಯನ್ನು ಮೆರೆದಿದ್ದಾರೆ. ಶ್ರೀಗಳು ಹಾಕಿ ಕೊಟ್ಟರುವ ಪರಂಪರೆಯನ್ನು ಕೌದಿ ಮಹಾಂತೇಶ್ವರ ಶಾಲೆಯ ಹಳೆ ವಿದ್ಯಾಥರ್ಿಗಳು ಉಳಿಸಿಕೊಂಡು ಬರುತ್ತಿದ್ದು, ಮುಂದೆಯೂ ನಮ್ಮ ನೇತೃತ್ವದಲ್ಲಿ ಉತ್ತಮ ಕಾರ್ಯಗಳು ಶ್ರೀ ಮಠದಿಂದ ಜರುಗಲು ಸಾರ್ವಜನಿಕವಾಗಿ ಸಹಕಾರವಿರಲಿ ಎಂದರು. 

ನಿವೃತ್ತ ಪ್ರಾಚಾರ್ಯ ಡಾ.ಶಿವಾನಂದ ಉಪನ್ಯಾಸ ನೀಡಿ ಸಿದ್ಧಲಿಂಗ ಶ್ರೀಗಳು ಸೂಕ್ಷ್ಮಗ್ರಹಿಯಾಗಿ, ಹಸನ್ಮುಖಿಯಾದ ಶ್ರೀಗಳು ಅಪಾರ ಜ್ಞಾನವನ್ನು ಹೊಂದಿದ್ದರು. ಭಕ್ತರ ನೆರವಿನಿಂದ ಮಠ ಮಾನ್ಯಗಳು ಉದ್ಧಾರವಾಗಿವೆ. ನಾವು ನೆಪ ಮಾತ್ರ ಎಂದು ನಿಸ್ವಾರ್ಥ ಸೇವೆಯನ್ನು ಹಲವು ದಶಕಗಳ ಕಾಲ ನಮ್ಮ ನಾಡಿಗೆ ನೀಡಿದ್ದಾರೆ. 44 ವರ್ಷಗಳಲ್ಲಿ 120ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಸ್ಥಾಪಿಸಿ ಶೈಕ್ಷಣಿಕ ವಿಭಾಗದಲ್ಲಿ ಸಾವಿರಾರು ವಿದ್ಯಾಥರ್ಿಗಳಿಗೆ ಪ್ರತಿ ವರ್ಷ ಶಿಕ್ಷಣ ದಾನ ನೀಡಿದ ಕೀತರ್ಿ ಅವರಿಗೆ ಸಲ್ಲುತ್ತದೆ. ಅಲ್ಲದೇ ಪ್ರತಿ ವರ್ಷ ಒಬ್ಬೊಬ್ಬ ದಲಿತ, ಲಿಂಗಾಯತ, ಮುಸ್ಲಿಂರನ್ನು ಜಗದ್ಗುರುಗಳನ್ನಾಗಿ ಮಾಡಿದ್ದಾರೆ. ಲಿಂಗಾಯತ ಧರ್ಮದ ಹೋರಾಟಕ್ಕೆ ಅವರ ಕಾಣಿಕೆ ಅಪಾರವಾಗಿದೆ ಎಂದರು.

ಈ ವೇಳೆ ತೋಂಟದ ಜಗದ್ಗುರು ಡಾ.ಸಿದ್ಧಲಿಂಗ ಶ್ರೀಗಳಿಗೆ ಪುಣ್ಯಸ್ಮರಣೆ ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿದ ದಿ.ಹೀರೇಮಠ್ ಕುಟುಂಬಸ್ಥರನ್ನು ಅಕ್ಷಾಲಿ ಕುಟುಂಬಸ್ಥರು ಹಾಗೂ ಶಿಕ್ಷಕರಾದ ದೈವಜ್ಞ, ಬಿ.ಅಂಗಡಿ, ಎ.ಪಿ.ಮಾನ್ಯ, ಪಕ್ಕೀರಯ್ಯ, ಆಡಳಿತ ಮಂಡಳಿಯ ಕಾರ್ಯದಶರ್ಿ ಎಸ್.ಎಸ್.ಪಟ್ಟಣ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕೊತಬಾಳದ ಜಾನಪದ ಕಲಾ ತಂಡದಿಂದ ಆಕರ್ಷಕ ಜಾನಪದ ನೃತ್ಯೋತ್ಸವ ನಡೆಸಿದರು. ಸಾನಿಧ್ಯವನ್ನು ನಂದೀಪುರದ ಮಹೇಶ್ವರ ಸ್ವಾಮಿಗಳು ವಹಿಸಿದ್ದರು. ಶಾಲೆಯ ಆಡಳಿತ ಮಂಡಳಿಯ ಸ್ಥಾನಿಕ ಅಧ್ಯಕ್ಷರಾದ ಹ.ಮ.ಕೊಟ್ರಬಸಯ್ಯ, ಹಿರಿಯ ಸಾಹಿತಿ ಎನ್.ಎಂ.ಕೊಟ್ರೇಶ, ಈಶ್ವರಗೌಡ, ಕೆ.ರೋಹಿತ್ ಮತ್ತಿತರರಿದ್ದರು. ಶಿವರಾಮ್, ಪ್ರವೀಣ್, ಗುರುಪ್ರಸಾದ್, ಕೊಟ್ರೇಶ ನಿರೂಪಿಸಿದರು.