ಜೀವನ ಸಾರ್ಥಕತೆಗೆ ಗುರುವಿನ ಮಾರ್ಗದರ್ಶನ ಅಗತ್ಯ: ರಾವ್

ಡಾ. ರಘುರಾಜ. ಕೆ. ರಾವ ಮಾತನಾಡುತ್ತಿರುವಾಗ ಅಶೋಕ ಪೊತದಾರ, ವಿಜೇಂದ್ರ ಗುಡಿ, ಮಾಧವ ಕಂಟೆ ಹಾಗೂ ಇತರರು.


ಬೆಳಗಾವಿ 27: ಪ್ರತಿಯೊಬ್ಬರ ಜೀವನದಲ್ಲಿ ಗುರಿಯ ಜೊತೆಗೆ ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇದೆ. ಗುರುವಿನ ಮಾರ್ಗದರ್ಶನದಿಂದ ಮಾತ್ರ ಜೀವನ ಸಾರ್ಥಕತೆ ಹೊಂದುವುದು ಎಂದು ಡಾ. ರಘುರಾಜ. ಕೆ. ರಾವ ಹೇಳಿದರು.

          ಬೆಳಗಾವಿ ಶಿಕ್ಷಣ ಸಂಸ್ಥೆಯ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 'ಗುರು ಪೂಣರ್ಿಮೆ' ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಉದ್ಘಾಟಿಸಿ, ಅವರು ಮಾತನಾಡುತ್ತಿದ್ದರು.

 ಡಾ. ರಘುರಾಜ. ಕೆ. ರಾವ 'ಗುರುವಿನ ಗುಲಾಮನಾಗುವತನಕ ಮುಕ್ತಿ ದೊರೆಯದು' ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಅಶೋಕ ಪೊತದಾರ ಅವರು ಪ್ರತಿಯೊಬ್ಬ ವಿದ್ಯಾಥರ್ಿಯ ಜೀವನದಲ್ಲಿ ಗುರುವಿನ ಬಗ್ಗೆ ಶ್ರದ್ಧೆ, ಗೌರವ ಹೊಂದುವುದರ ಮೂಲಕ ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ತಮ್ಮ ಜೀವನ ಪರಿಪೂರ್ಣಗೊಳ್ಳುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು. 

ಗೌರವ ಅತಿಥಿಗಳಾಗಿ ಮಾಧವ ಕುಂಟೆ, ವಿ. ಆರ್. ಗುಡಿ ಉಸ್ಥಿತರಿದ್ದರು.

         ವಿದ್ಯಾಥರ್ಿನಿಯರು "ದಾಸ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಗೀತೆಗಳನ್ನು ಪ್ರಸ್ತುತಪಡಿಸಿದರು. ಅಭಿಜಿತ ಅಂಕಲೆ, ಗುರುವರ್ಯ ಕುಂಠೆ, ಅಸಾವರಿ ಸಂತ, ಲೀನಾ ಅಷ್ಠೇಕರ, ಗಿರಿಜಾ ಗಣಪತಿ ಶಾಲದಾರ್, ವೃಂದಾ ಚಿಕ್ಕೆರುರ, ಎಸ್. ಎಸ್. ಕುಲಕಣರ್ಿ ಮುಂತಾದ ದಾನಿಗಳಿಂದ ನೀಡಲಾದ ವಿದ್ಯಾಥರ್ಿವೇತನವನ್ನು '17' ವಿದ್ಯಾಥರ್ಿನಿಯರಿಗೆ ವಿತರಿಸಲಾಯಿತು. 

ಮುಖ್ಯೋಪಾದ್ಯಾಯ ಎಮ. ಕೆ. ಮಾದಾರ ಪ್ರಾಸ್ತಾವಿಕ ಮಾತನಾಡಿ 'ಗುರು ಪೂಣರ್ಿಮೆ'ಯ ಮಹತ್ವ ತಿಳಿಸಿದರು. ಕಾರ್ಯಕ್ರಮದ ಸಂಚಾಲಿಕರಾದ ಲಕ್ಷ್ಮೀ ಯಳವಟಕರ ಹಾಗೂ ಇನ್ನಿತರ ಶಿಕ್ಷಕರು ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲಾ ಸಂಸತ್ತಿನ ಪ್ರಧಾನಮಂತ್ರಿ ಶ್ರಿದೇವಿ ಇಟಗಿಕರ ನಿರೂಪಿಸಿ, ಖುಷಿ ಗುಂಡಪ್ಪನವರ ಸ್ವಾಗತಿಸಿ, ವಿದ್ಯಾಥರ್ಿನಿ ಸೃಷ್ಠಿ ಪಾಖರೆ  ವಂದಿಸಿದರು.