ಮಾ. 15 ಹಾಗೂ 16 ರಂದು ಗುರುವಂದನೆ ಹಾಗೂ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮ
ಬ್ಯಾಡಗಿ 09: ತಾಲೂಕಿನ ಕೆರವಡಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ. 15 ಹಾಗೂ 16 ರಂದು ಶಾಲೆಯ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ಕೋಟಿ ತಿಳಿಸಿದರು.ರವಿವಾರ ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಶಾಲೆಯಲ್ಲಿ ಕಾರ್ಯಕ್ರಮದ ನಿಮಿತ್ಯ ಶಾಲಾ ಕೊಠಡಿಗಳಿಗೆ ಸುಣ್ಣ ಬಣ್ಣದಿಂದ ಶಾಲೆಯನ್ನು ಅಲಂಕರಿಸಲಾಗಿದೆ. ಗ್ರಾಮಸ್ಥರು ಶತಮಾನೋತ್ಸವ ಸಮಿತಿಯನ್ನು ರಚಿಸಿಕೊಂಡು ವಿಜೃಂಭಣೆಯಿಂದ ಕಾರ್ಯಕ್ರಮ ರೂಪಿಸಲು ಶ್ರಮಿಸುತ್ತಿದ್ದಾರೆ. ಶತಮಾನೋತ್ಸವ ಕಾರ್ಯಕ್ರಮದ ಜೊತೆಗೆ ಗುರುವಂದನೆ ಹಾಗೂ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಲಿದೆ ಎಂದರು.ಶಾಲಾ ಪ್ರಧಾನ ಶಿಕ್ಷಕ ಕೆ.ಯು.ಶಿವಪೂಜಿ ಮಾತನಾಡಿ ಮಾ. 15 ರಂದು ಬೆಳಗ್ಗೆ 7-30 ಘಂಟೆಗೆ ನಿವೃತ್ತ ಶಿಕ್ಷಕ ಎಚ್.ಜಿ.ಕಡೇಮನಿ ಅವರಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. 10 ಘಂಟೆಗೆ ಶತಮಾನೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರಟ್ಟಿ ಹಳ್ಳಿಯ ಕಬ್ಬಿಣಕಂತಿ ಇದುಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ವಹಿಸಲಿದ್ದಾರೆ. ಶಾಸಕ ಬಸವರಾಜ ಶಿವಣ್ಣನವರ ಅಧ್ಯಕ್ಷೆತೆ ವಹಿಸಲಿದ್ದು,ಶಿಕ್ಷಣ ಮಂತ್ರಿ ಮಧು ಬಂಗಾರ್ಪ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ, ಉಪಸಭಾಪತಿ ರುದ್ರ್ಪ ಲಮಾಣಿ, ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಶ್ರೀನಿವಾಸ ಮಾನೆ, ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಯಾಸಿರಖಾನ ಪಠಾಣ, ಶಾಲಾ ಭೂದಾನಿ ರುದ್ರ್ಪ ಮಲ್ಲಾಡದ ಸೇರಿದಂತೆ ಮಾಜಿ ಶಾಸಕರು ಗಣ್ಯ ನಾಗರಿಕರು ಆಗಮಿಸಲಿದ್ದಾರೆಂದರು. ಮಧ್ಯಾಹ್ನ 3 ಘಂಟೆಗೆ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಎಸ್.ಸಿ.ಕುಂಚೂರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಡಿಡಿಪಿಐ ಸುರೇಶ ಹುಗ್ಗಿ, ಜೀವರಾಜ್ ಛತ್ರದ, ನಾಗಪ್ಪ ದೊಡ್ಡಮನಿ, ವೀರಭದ್ರ್ಪ ಬುರುಂಡಿ ಕಟ್ಟಿ, ಟಿ.ಆರ್.ಮೂಡಿ, ಎಂ.ಎಂ.ಕಂಬಳಿ, ಚಂದ್ರು ಸಣ್ಣಗೌಡ್ರ, ಅಶ್ವಿನಿ ಬಿದರಿ, ಬಿ.ಸುಭಾಸ, ಮಂಜಪ್ಪ ಯಾಲಕ್ಕಿ ಆಗಮಿಸಲಿದ್ದಾರೆಂದು. ಸಂಜೆ 6 ಘಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹೇಮಪ್ಪ ಬ್ಯಾಡಗಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗೀರೀಶ ಪದಕಿ, ಪ್ರಕಾಶ ಮನ್ನಂಗಿ, ನಾಗರಾಜ್ ಹರವಿ, ಎಂ.ಎಫ್.ಹುಲ್ಯಾಳ, ಷಣ್ಮುಖಪ್ಪ ಬಾಳಿಕಾಯಿ,ಮಲ್ಲಯ್ಯ ಬಿಸಿಲಹಳ್ಳಿ ಆಗಮಿಸಲಿದ್ದಾರೆ.ಮಾ. 16 ರಂದು ಬೆಳಿಗ್ಗೆ 10 ಘಂಟೆಗೆ ಸ್ನೇಹ ಸಂಭ್ರಮ ಕಾರ್ಯಕ್ರಮ ಗದಿಗೆಯ್ಯ ಹಿರೇಮಠ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಲಕ್ಷ್ಮಣರಾವ್ ಕುಲಕರ್ಣಿ, ಎಚ್.ಜೆ.ಕಡೇಮನಿ, ಪಿ.ಟಿ.ಲಕ್ಕಣ್ಣನವರ, ರಾಜು ಶಿಡೇನೂರ ಭಾಗವಹಿಸಲಿದ್ದಾರೆಂದರು.ಈ ಸಂದರ್ಭದಲ್ಲಿ ರುದ್ರ್ಪ ಮಲ್ಲಾಡದ, ಶೇಖಪ್ಪ ಮತ್ತೂರು, ಷಣ್ಮುಖಪ್ಪ ಕುಂಚೂರ, ಹೇಮಪ್ಪ ಬ್ಯಾಡಗಿ, ಕುಮಾರ ಗುತ್ತಲ, ಷಣ್ಮುಖಪ್ಪ ಬ್ಯಾಡಗಿ, ಮಹೇಶ ನಾಯಕ, ಕೆ.ಯು.ಶಿವಪೂಜಿ, ವೀರನಗೌಡ ಪಾಟೀಲ ಇದ್ದರು.