ಲೋಕದರ್ಶವರದಿ
ಶಿಗ್ಗಾವಿ : ಪಟ್ಟಣದ ಕುಂಬಾರ ಓಣಿಯಲ್ಲಿರುವ ಶ್ರೀ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 348 ನೇಯ ಆರಾಧನಾ ಮಹೋತ್ಸವದ ಅಂಗವಾಗಿ ಭಕ್ತರು ಭಕ್ತ ಭಾವದಿಂದ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಪೂವರ್ಾರಾಧನೆ ನಿಮಿತ್ಯ ಬೆಳಿಗ್ಗೆ ಸುಪ್ರಭಾತ, ಅಷ್ಟೋತ್ತರ ನಂತರ ಪಂಚಾಮೃತ ಅಭಿಷೇಕವನ್ನು ನೆರವೇರಿಸಲಾಯಿತು.ಮಧ್ಯಾಹ್ನ 12ಕ್ಕೆ ಮಹಾಪೂಜೆ ಮತ್ತು ಹಸ್ತೋದಕ ನಂತರ ನೆರೆದಿದ್ದ ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಯಿತು.
ರಾಯರ ವೃಂದಾವನಕ್ಕೆ ವಿಶೇಷ ಪುಪ್ಷಾಂಲಂಕಾರವನ್ನು ಆಚಾರ್ಯರು ನೇರವೇರಿಸಿದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಅನೇಕ ಭಕ್ತರು ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ರಾಯರ ದರ್ಶನ ಪಡೆಯುತ್ತಿದ್ದದ್ದು ವಿಶೇಷವಾಗಿತ್ತು.
ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಪ್ರತಿದಿನವೂ ಸಹಿತ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಮಹಾಪೂಜೆ, ಹಸ್ತೋದಕ, ತೀರ್ಥಪ್ರಸಾದ, ರಾಯರ ಜುರಿತಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು, ಭಜನೆ ಕಾರ್ಯಕ್ರಮ, ಮಕ್ಕಳಿಂದ ಭರತ ನಾಟ್ಯ ಕಾರ್ಯಕ್ರಮ ನಂತರ ಮಹಾಮಂಗಳಾರತಿ ನಡೆಯುತ್ತಿದ್ದವು.
ಜಯಣ್ಣಾ ಮಾಸ್ತರ ಕುಲಕಣರ್ಿ ಮಾತನಾಡಿ ಭಕ್ತಿಯಿಂದ ರಾಯರ ಸೇವೆಯನ್ನು ಗೈದರೆ ಅನೇಕ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಿ ಕೊಳ್ಳಬಹುದು ಅಲ್ಲದೇ ಮಾನಸಿಕವಾಗಿ ಸದೃಢರಾಗುತ್ತೇವೆ ಜೊತೆಗೆ ಈಗಿನ ನೆರೆ ಸಂತ್ರಸ್ತರಿಗೆ ಆ ಭಗವಂತ ಒಳ್ಳೆಯದು ಮಾಡಲಿ ಎಂದು ದೇವರಲ್ಲಿ ಪ್ರಾಥರ್ಿಸಿದರು.
ಬೋದಣ್ಣ ಬೆಳಗಲಿ ಮಾತನಾಡಿ ಸುಮಾರು 40 ವರ್ಷಗಳಿಂದ ರಾಯರ ಸೇವೆಯನ್ನು ನಿಷ್ಠೆಯಿಂದ ಪ್ರಾಮಾಣಿಕವಾಗಿ ಪ್ರತಿ ವರ್ಷ ರಾಯರ ಪ್ರತಿಯೊಂದು ವಿಧಿ ವಿಧಾನಗಳನ್ನು ಮಾಡಿಕೊಂಡು ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಂಪ್ರದಾಯವನ್ನು ಪಾಲಿಸುತ್ತಿದೇವೆ ಎಂದರು.
ವಿಕ್ರಮ ದೇಸಾಯಿ ಮಾತನಾಡಿ ಪ್ರತಿವರ್ಷದಂತೆ ಸಹಿತ ರಾಯರ ಆರಾದನೆಯನ್ನ ನೆರೆ ಬಂದು ಅನೇಕ ಜಿಲ್ಲೆಗಳಲ್ಲಿ ಹಾನಿ ಸಂಭವಿಸಿರುವುದರಿಂದ ವಿಜೃಂಭ್ರಣೆಯಿಂದ ಮಾಡದೇ ಸಂಕ್ಷಿಪ್ತವಾಗಿ ಎಲ್ಲ ಪೂಜಾ ವಿಧಿ ವಿಧಾನಗಳನ್ನು ಹಾಗೂ ಎಲ್ಲ ರೂಪ ರೇಷ್ಮೆಗಳನ್ನು ನಮ್ಮ ತಾಲೂಕಿನ ಜನರ ತನು ಮನ ಧನ ಸಹಾಯ ಸಹಕಾರದಿಂದ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ.ವಿ.ಪಂ. ಸದಸ್ಯ ಸೋಮಣ್ಣ ಬೇವಿನಮರದ, ನರಹರಿ ಕಟ್ಟಿ, ಬೆಳಗಲಿ ಪೋಸ್ಟ್ ಮಾಸ್ತರ, ಎಮ್.ಎಲ್. ದೇಶಪಾಂಡೆ, ತಮಣ್ಣಾ ಜೋಷಿ, ರಾಘವೇಂದ್ರ ಕೌಜಲಗಿ, ಪವನ ಚಿಮ್ಮಲಗಿ, ಸಂತೋಷ ಹತ್ತಿಮತ್ತೂರ, ವೆಂಕಣ್ಣ ಪೂಜಾರ, ಶಸಿ ದೇಶಪಾಂಡೆ, ಸಂದ್ಯಾ ಬೆಳಗಲಿ, ಸುಧಾ ಬೆಳಗಲಿ ಮತ್ತಿತ್ತರ ಭಕ್ತರು ಉಪಸ್ಥಿತರಿದ್ದರು.