ಕನಕಗುರುಪೀಠದಲ್ಲಿ ಜರುಗಿದ ಗುರು ಪೂಣರ್ಿಮಾ ಕಾರ್ಯಕ್ರಮ


ಲೋಕದರ್ಶನ ವರದಿ

ಬ್ಯಾಡಗಿ28: ಪ್ರಜಾಪ್ರಭುತ್ವ ವ್ಯವಸ್ಥೆ ಸರಿಯಾಗಿ ನಡೆಯಬೇಕೆಂದಾದಲ್ಲಿ ಪ್ರಸ್ತುತ ದಿನಗಳಲ್ಲಿ ಕಲುಷಿತವಾಗಿರುವ ಸಮಾಜ ಆಧ್ಯಾತ್ಮಿಕವಾಗಿ, ನೈತಿಕವಾಗಿ ಗಟ್ಟಿಗೊಳ್ಳಬೇಕಾದಲ್ಲಿ ಗುರುವಿನ ಮಾರ್ಗದರ್ಶನ ಅತ್ಯವಶ್ಯಕ ಎಂದು ಕನಕಗುರುಪೀಠದ ನಿರಂಜನಾನಂದಶ್ರೀ ಅಭಿಪ್ರಾಯ ವ್ಯಕ್ತಪಡಿಸಿದರು.

 ತಾಲೂಕಿನ ಕಾಗಿನೆಲೆ ಗ್ರಾಮದ ಕನಕಗುರುಪೀಠದಲ್ಲಿ ಜರುಗಿದ ಗುರು ಪೂಣರ್ಿಮಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕೇವಲ ಅಧಿಕಾರದಲ್ಲಿದ್ದವರನ್ನು ನೆನೆಸಿಕೊಳ್ಳುತ್ತಿರುವ ಸಮಾಜ ದಾರ್ಶನಿಕರು, ಶರಣರು, ಗುರುಗಳು ಸೇರಿದಂತೆ ಸಮಾಜದ ಒಳಿತಿಗಾಗಿ ಶ್ರಮಿಸಿದವರನ್ನು ಮರೆಯತ್ತಿದೆ, ಅದರಲ್ಲೂ ಗುರುಗಳನ್ನು ಬೇರೆ ರೀತಿಯಲ್ಲಿ ಸಮೀಕರಿಸುತ್ತಿದ್ದು ಅವರು ಆಲೋಚನೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಟಾನಗೊಳ್ಳುತ್ತಿಲ್ಲ ಎಂದರು ಖೇದ ವ್ಯಕ್ತಪಡಿಸಿದರು.

ಮನುಕುಲದ ಉದ್ಧಾರಕ್ಕೆ ಗುರುವಿನ ಸಂದೇಶ:ಗುರುವಿನ ಚಿಂತನೆಗಳು ಮೇಲು ಕೀಳೆಂಬ ಸಮಾಜದ ಸ್ಥರಗಳಲ್ಲಿರುವ ಅಂತರವನ್ನು ಕಡಿಮೆ ಮಾಡು ವಲ್ಲಿ ಯಶಸ್ಸು ಕಂಡಿವೆ, ಅನಿಷ್ಟ ಹಾಗೂ ಅನಾಚಾರ ಪದ್ಧತಿಗಳು ದೂರವಾಗಬೇಕಾಗಿದೆ, ಮನುಕುಲದ ಉದ್ಧಾರಕ್ಕಾಗಿ ಗುರುವಿನ ಸಂದೇಶಗಳು ಅವಶ್ಯವಿದೆ, ಮಾನವೀಯ ಮೌಲ್ಯದ ತಿರಳನ್ನು ಹೊಂದಿರುವ ಇಂತಹ ಸಂದೇಶಗಳು ಸಮಾಜದಲ್ಲಿ ಹೆಚ್ಚು ಬೆಳಕು ಚೆಲ್ಲುತ್ತವೆ, ಸಮಾಜ ಮುನ್ನಡೆಯಬೇಕಾದರೆ ದಾರ್ಶನಿಕರ ಸನ್ಮಾರ್ಗಗಳು ಅವಶ್ಯಕ ಸಾಮಾಜಿಕ ಸಾಂಸ್ಕೃತಿಕ, ಪಾರಮಾಥರ್ಿಕ ಹಾಗೂ ಸ್ವತಂತ್ರ ಮನೋಧರ್ಮಗಳು ಕೂಡ ಗುರುವಿನ ಬೆಳಕಿನಿಂದ ಹೊರ ಬಂದಿವೆ ಎಂದರು. 

ಧಾಮರ್ಿಕ ಅಪ್ರಭುದ್ದತೆ: ಧಾಮರ್ಿಕ ಅಪ್ರಭುದ್ಧತೆಯನ್ನು ತೋರುತ್ತಿರುವ ಸಮುದಾಯಗಳು ಪರಸ್ಪರ ದ್ವೇಷ ಅಸೂಯೆ ಪ್ರದಶರ್ಿಸುತ್ತಿರುವುದು ವಿಷಾದಕರ ಸಂಗತಿ, ಗುರುಗಳು ಎಂದಿಗೂ ತಮ್ಮ ಜೀವತದ ಅವಧಿಯಲ್ಲಿ ಯಾರ ವಿರುದ್ಧವೂ ತೊಡೆ ತಟ್ಟಲಿಲ್ಲ, ಬದಲಾಗಿ ಭಕ್ತಿಯ ಮಾರ್ಗದಲ್ಲಿ ಸಮಾಜದ ಜನರನ್ನು ಒಲಿಸಿಕೊಳ್ಳುವತ್ತ ಚಿಂತನೆ ನಡೆಸಿದ ಸಾಕಷ್ಟು ಉದಾಹರ ಣೆಗಳಿವೆ ಎಂದರು.

ಸಮಾಜಗಳು ವಿಘಟನೆಯತ್ತ ಸಾಗಿವೆ: ಗುರುಗಳ ಮಾರ್ಗದರ್ಶನದ ಕೊರತೆಯಿಂದ ಪ್ರಸ್ತುತ ಸಮಾಜ ನಮಗರವಿಲ್ಲದಂತೆ ವಿಘಟನೆಯತ್ತ ಸಾಗಿದೆ, ಹೀಗಾಗಿ ಸಾಮರಸ್ಯ, ಸಹಬಾಳ್ವೆಗೆ ನಮ್ಮ ತಪ್ಪು ವಿಚಾರಗಳಿಂದ ತಿಲಾಂಜಲಿ ಹೇಳುತ್ತಿದ್ದೇವೆ, ಅದಾಗ್ಯೂ ಸಹ ಗುರುವಿನ ಸಂದೇಶಗಳು ಸಾಮಾಜಿಕ ನ್ಯಾಯದಡಿ ಶೋಷಿತರ ವರ್ಗದ ಎಲ್ಲ ಜನರಿಗೂ ಸಮಾಜದಲ್ಲಿ ತಲೆ ಎತ್ತಿ ಬದುಕುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬೇಕಾಗಿದೆ ಎಂದರು.

  ಇದಕ್ಕೂ ಮುನ್ನ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮೈಸೂರಿನ ಶಿವಾನಂದಪುರಿಶ್ರೀ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಆರ್.ಶಂಕರ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಬಿ.ಸಿ.ಪಾಟೀಲ, ಎಸ್.ರಾಮಯ್ಯ ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಜಿ.ಪಂ.ಸದಸ್ಯ ಎಸ್.ಕೆ.ಕರಿಯಣ್ಣನವರ, ಪ್ರದೇಶ ಕುರುಬ ಸಮಾಜದ ಅಧ್ಯಕ್ಷ ಮಾರುತಿ ಹರಿಹರ, ರಾಜೇಂದ್ರ ಹಾವೇರಣ್ಣನವರ, ಶಂಕ್ರಣ್ಣ ಮಾತನವರ, ಎಸ್.ಎಫ್.ಎನ್.ಗಾಜಿಗೌಡ್ರ, ಪ್ರಕಾಶ ಬೆಳ್ಳೂಡಿ, ಮಾರುತಿ ಗೊರವರ ಇನ್ನಿತರರು ಉಪಸ್ಥಿತರಿದ್ದರು ಪ್ರಾಚಾರ್ಯ ಬೀರಪ್ಪ ಸ್ವಾಗತಿಸಿದರು, ರವಿ ಆನ್ವೇರಿ ವಂದಿಸಿದರು.