ಭಾಗ್ಯನಗರದಲ್ಲಿ ಗುರು ಪಂಚಾಕ್ಷರ ಸ್ವರ ಲಹರಿ ಕಾರ್ಯಕ್ರಮ

Guru Panchakshar Swara Lahari program in Bhagyanagar

ಭಾಗ್ಯನಗರ 05: ಸಂಗೀತ ಗುರು ಪರಂಪರೆಯನ್ನು ನಾಡಿನಲ್ಲಿ ಪಸರಿಸಿ ವಿಶೇಷವಾಗಿ ತಾವು ಅಂಧರಾಗಿದ್ದರೂ ಕೂಡ ಸಹಸ್ರ ಅಂಧ ಅನಾಥ ಮಕ್ಕಳ ಬಾಳಿನ ಬೆಳಕಾಗಿ, ಶಿಷ್ಯರ ಆಶಾ ಜ್ಯೋತಿಯಾಗಿ, ಭಕ್ತರ ಆರಾಧ್ಯ ದೈವವಾಗಿ ನಾಡಿನುದ್ದಗಲಕ್ಕೂ ಸಂಚರಿಸಿ ಕಲೆಯನ್ನು ಉಳಿಸಿ ಇಂದಿಗೂ ಕಾಪಾಡುತ್ತಿರುವ ವೀರೇಶ್ವರ ಪುಣ್ಯಾಶ್ರಮದ ಒಡೆಯ ಗುರು ಪಂಚಾಕ್ಷರ ಗವಾಯಿಗಳವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸರುವುದು ನಿಜಕ್ಕೂ ಸಾರ್ಥಕದ ಕಾರ್ಯವಾಗಿದೆ ಎಂದು ನಾಡಿನ ಹೆಸರಾಂತ ಗಾಯಕರಾದ ಸದಾಶಿವ ಪಾಟೀಲರು ಹೇಳಿದರು. 

ಅವರು ಗುರುಕುಲ ಸಂಗೀತ ಕಲಾ ಸಂಸ್ಥೆಯ ವತಿಯಿಂದ ಭಾಗ್ಯನಗರದ  ಮಾಕಂರ್ಡೇಶ್ವರ ವೃತ್ತದ ಬಯಲು ವೇದಿಕೆಯಲ್ಲಿ ಗುರು ಪಂಚಾಕ್ಷರ ಸ್ವರ ಲಹರಿ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರನ್ನು ನೆನೆಯುವ ಪುಣ್ಯ ಮತ್ತೊಂದಿಲ್ಲ ಎಂದರೆ ತಪ್ಪಾಗಲಾರದು ಎಂದರು.  

ಅಧ್ಯಕ್ಷತೆಯನ್ನು ವಹಿಸಿದ್ದ ಪರುಶುರಾಮ ನಾಯಕ ಮಾತನಾಡಿ ಗುರುಕುಲ ಸಂಸ್ಥೆಯವತಿಯಿಂದ ಪ್ರತಿ ವರ್ಷ ಅನೇಕ ವಿಶೇಷ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿರುತ್ತವೆ. ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಸಂಸ್ಥೆಗಳ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು ಎಂದರು. ಮುಖ್ಯ ಅತಿಥಿಗಳಾಗಿ ಭಾಷಾ ಹಿರೇಮನಿ, ವೀರ​‍್ಪ ಶ್ಯಾವಿ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಸದಾಶಿವ ಪಾಟೀಲರಿಂದ ಸುಗಮ ಸಂಗೀತ, ಭಾಷಾ ಹಿರೇಮನಿಯವರಿಂದ ಜನಪದ ಗೀತೆಗಳು, ರಾಮಚಂದ್ರ​‍್ಪ ಉಪ್ಪಾರರಿಂದ ಹಾರ್ಮೋನಿಯಂ ಸೋಲೋ, ವಿಜಯಲಕ್ಷ್ಮೀ ನಾಗರಾಜರಿಂದ ಭಾವಗೀತೆಗಳು, ಮಾರುತಿ ದೊಡ್ಡಮನಿಯವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ,  ಆರತಿ ಮೇಟಿ ಹಾಗೂ ಕೀರ್ತಿ ಮೇಟಿಯವರಿಂದ ವಚನ ಸಂಗೀತ ಹಾಗೂ ಅಭಿಷೇಕ ಚಿತ್ರಗಾರ, ಶಿವರಾಜಕುಮಾರ ಬಳೆಗಾರ, ಪುಟ್ಟರಾಜ ಬಣ್ಣದ, ಸಂದೀಪ, ಆತೀಶ, ವಿವೇಕರಿಂದ ಬಾನ್ಸೂರಿ ವಾದನ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿ ಬಂದವು. 

ವಾದ್ಯ ಸಹಕಾರದಲ್ಲಿ ಕೀಬೋರ್ಡ ರಾಮಚಂದ್ರ​‍್ಪ ಉಪ್ಪಾರ, ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲದಲ್ಲಿ ಮಾರುತಿ ದೊಡ್ಡಮನಿ, ರಿಧಮ ಪ್ಯಾಡನಲ್ಲಿ ಸಂಜನಾ ಬೆಲ್ಲದ, ತಳವಾದ್ಯದಲ್ಲಿ ಕೃಷ್ಣ ಸೊರಟೂರ ಮೆರುಗು ನೀಡಿದರು.