ನಾಳೆ ಗುರು ನಮನ, ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ

Guru Namana tomorrow, a gathering of friends

ನಾಳೆ ಗುರು ನಮನ, ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ

ಕೊಪ್ಪಳ: ನಗರದ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢ ಶಾಲೆಯ 2001-02 ನೇ ಸಾಲಿನ ವಿದ್ಯಾರ್ಥಿಗಳಿಂದ ಗುರು ನಮನ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ನಾಳೆ ಭಾನುವಾರ ಬೆಳಿಗ್ಗೆ 10 ಗಂಟೆಗೆ  ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿರುವುದಾಗಿ 2001-02 ಸಾಲಿನ ಎಸ್‌ಎಸ್ ಎಲ್ ಸಿ ವಿದ್ಯಾರ್ಥಿಗಳು ತಿಳಿಸಿದರು.  ಅವರು ಶುಕ್ರವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು,ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಅಮರೇಶ ಕರಡಿ ವಹಿಸಲಿದ್ದಾರೆ. ಇನ್ನುಳಿದಂತೆ 30 ಕ್ಕೂ ಹೆಚ್ಚು ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಶಿಕ್ಷಣ ಕ್ರಾಂತಿ ಮಾಡಿರುವ ಕೊಪ್ಪಳದ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆಯ 2001-02 ನೇ ಸಾಲಿನವರೆಗಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು,ತಾಯಿಯ, ಗುರುವಿನ ಋಣ ತಿರಿಸಲು ಸಾಧ್ಯವೇ ಇಲ್ಲ ಎನ್ನುವ ಮಾತಿದೆ. ಆದರೂ ಗುರುಗಳಿಗೆ ಸತ್ಕರಿಸುವುದು ಶಿಷ್ಯರಾದ ನಮ್ಮ ಕರ್ತವ್ಯ.  ಈ ಹಿನ್ನಲೆಯಲ್ಲಿ ನಮಗೆ ವಿದ್ಯೆ, ಬುದ್ದಿ ಕಲಿಸಿದ ತಮ್ಮೆಲ್ಲರನ್ನು ಗೌರವಿಸುವ ಹಾಗೂ ನಮ್ಮ ಜೊತೆಗೆ ಓದಿದ ಸಹಪಾಠಿಗಳೊಂದಿಗೆ 24 ವರ್ಷಗಳ ನಂತರ ಸೇರಿ ಸಮಯ ಕಳೆಯುವ ಸಂದರ್ಭ ಇದೀಗ ಒದಗಿ ಬಂದಿದೆ.ಆದ ಕಾರಣ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ 2001-02 ಸಾಲಿನ ಎಸ್‌ಎಸ್ ಎಲ್ ಸಿ ವಿದ್ಯಾರ್ಥಿಗಳಾದ ಬಸವರಾಜ್ ಕೊಪ್ಪಳ, ದೊಡ್ಡೇಶ್ ಎಲಿಗಾರ್, ಹುಲುಗಪ್ಪ ಕಟ್ಟಿಮನಿ, ರುದ್ರಯ್ಯ ಹಲಗಲಗಿ, ಹನುಮಂತಪ್ಪ, ರಾಜೇಶ್ ವಾಲಿ, ಮೊಹಮ್ಮದ್ ಗೌಸ್ ಪಟೇಲ್ ಉಪಸ್ಥಿತರಿದ್ದರು.