ನೂತನ ತಹಶೀಲ್ದಾರ್‌ರಾಗಿ ಗುಂಡಪ್ಪಗೋಳ ಅಧಿಕಾರ ಸ್ವೀಕಾರ

Gundappagola assumed power as the new Tehsildar

ಯರಗಟ್ಟಿ 07: ತಾಲ್ಲೂಕಿಗೆ ವರ್ಗಾವಣೆಯಾದ ನೂತನ ತಹಶೀಲ್ದಾರ್ ಎಂ. ವಿ. ಗುಂಡಪ್ಪಗೋಳ ಶುಕ್ರವಾರ ತಾಲ್ಲೂಕು ಆಡಳಿತ ಭವನದಲ್ಲಿ ಅಧಿಕಾರ ಸ್ವೀಕರಿಸಿದರು. 

ಪ್ರಬಾರಿ ತಹಶೀಲ್ದಾರ್ ಎಂ. ಎನ್‌. ಮಠದ ಅಧಿಕಾರ ವಹಿಸಿಕೊಟ್ಟರು. ಎಂ. ಎನ್ ಮಠದ ಅವರು ಸವದತ್ತಿಗೆ ಗ್ರೇಡ್‌-2 ತಹಶೀಲ್ದಾರ್ ಆಗಿ ವರ್ಗಾವಣೆಗೊಂಡರು. 

ಅಧಿಕಾರಿಗಳ ಸಭೆ ನಡೆಸಿ ಕಚೇರಿಯ ಸಂಪೂರ್ಣ ಮಾಹಿತಿ ಪಡೆಯಲಾಗುವುದು. ನಂತರ ಆಡಳಿತಕ್ಕೆ ಚುರುಕು ನೀಡಲಾಗುತ್ತದೆ. ಆಡಳಿತಾತ್ಮಕ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದರು.  

ತಾಲ್ಲೂಕು ಕಚೇರಿಯ ಪ್ರತಿಯೊಂದು ಕೆಲಸಗಳನ್ನು ನಿರ್ದಿಷ್ಟ ಅವಧಿಯಲ್ಲಿ ನೀಡಬೇಕು. ಸಾರ್ವಜನಿಕರು ಮತ್ತು ರೈತರನ್ನು ಅನಗತ್ಯವಾಗಿ ಕಚೇರಿಗೆ ಅಲೆಯುವುದಕ್ಕೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.