ಸ್ವಚ್ಚ ನಗರ ಪಟ್ಟಿಗೆ ಗುಳೇದಗುಡ್ಡ

ಗುಳೇದಗುಡ್ಡ: ಕೇಂದ್ರ ಸರ್ಕಾರದ  ಸ್ವಚ್ಚ ಭಾರತ ಯೋಜನೆಯಡಿ 25 ಸಾವಿರದಿಂದ 50 ಸಾವಿರ ಜನಸಂಖ್ಯೆ ಹೊಂದಿರುವ ನಗರಗಳ ಸ್ವಚ್ಚ ನಗರ ಪಟ್ಟಿಯಲ್ಲಿ ದಕ್ಷಿಣ ಭಾರತದಲ್ಲಿ ಗುಳೇದಗುಡ್ಡ  4 ನೇ ಸ್ಥಾನ ಪಡೆದಿದೆ. ಪ್ರಥಮಸ್ಥಾನ ಆಂದ್ರ ಪ್ರದೇಶದ ನಾಯ್ಡುಪೇಟೆ ಪಡೆದಿದೆ ಎಂದು ಪುರಸಭೆ ಮುಖ್ಯಾಧಿಕಾರಿ ರವೀಂದ್ರನಾಥ ಅಂಗಡಿ ತಿಳಿಸಿದ್ದಾರೆ.

   ಗುಳೇದಗುಡ್ಡ ನಗರ ಕಸವಿಲೇವಾರಿ, ಪ್ಲಾಸ್ಟಿಕ್ ಮುಕ್ತ ನಗರವಾಗಿಯೂ  ಉತ್ತಮ ಸಾಧನೆ ಮಾಡಿದೆ.  ಕೇಂದ್ರ ಸಕರ್ಾರದ ಸ್ವಚ್ಚ ಭಾರತ ಯೋಜನೆಯಡಿ ನಡೆಸಿದ ಆನ್ಲೈನ್ ಸಮೀಕ್ಷೆಯಲ್ಲಿ ದಕ್ಷಿಣ ಭಾರತದಲ್ಲೇ ನಾಲ್ಕನೇ ಸ್ಥಾನ ಪಡೆದಿದೆ. ಈ ಸಾಧನೆಗೆ ಸಾರ್ವಜನಿಕರ ಸಹಕಾರ, ಪುರಸಭೆ ಸಿಬ್ಬಂದಿಯ ಉತ್ಸಯಕತೆ ಹಾಗೂ  ಉತ್ತಮ ಸೇವೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.