ವಾಯು ಚಂಡಮಾರುತದ ಅಪಾಯದಿಂದ ಗುಜರಾತ್ ಪಾರು: ಸಿಎಂ ರೂಪಾನಿ

  ಗಾಂಧಿನಗರ, ಜೂನ್ 14 :  ತೀವ್ರ ಆತಂಕಕ್ಕೆ ಕಾರಣವಾಗಿದ್ದ ವಾಯು ಚಂಡಮಾರುತದ ಅಪಾಯದಿಂದ ಗುಜರಾತ್ ಪಾರಾಗಿದೆ ಎಂದು ಮುಖ್ಯಮಂತ್ರಿ ವಿಜಯ್ ರೂಪಾನಿ ತಿಳಿಸಿದ್ದಾರೆ. 

  ಶುಕ್ರವಾರ ಉನ್ನತ ಮಟ್ಟದ ಸಮಿತಿಯು ಪರಿಸ್ಥಿತಿಯ ಅವಲೋಕನದ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಾಯು ಮಾರುತದಿಂದ ಸಂಭವಿಸಬಹುದಾಗಿದ್ದ ಅಪಾಯದಿಂದ ರಾಜ್ಯ ಪಾರಾಗಿದ್ದು, ಸಹಜ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದಿದ್ದಾರೆ. 

  ಕರಾವಳಿಯ ತಗ್ಗು ಪ್ರದೇಶಗಳಿಂದ ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದ 2 ಲಕ್ಷದ 75 ಸಾವಿರ ಜನರು ತಮ್ಮ ನೆಲೆಗಳಿಗೆ ಮರಳುತ್ತಿದ್ದಾರೆ.  

  ವಾಯು ಚಂಡಮಾರುತ ಪರಿಣಾಮ ಬೀರಬಹುದಾದ ಪ್ರದೇಶಗಳಿಗೆ ನಿಯೋಜಿಸಿದ್ದ ಅಧಿಕಾರಿಗಳು ಹಾಗೂ ಸಚಿವರು ತಮ್ಮ ಕೆಲಸಗಳಿಗೆ ವಾಪಸಾಗಿದ್ದಾರೆ.  ಸಾರಿಗೆ ಸಂಚಾರ ಯಥಾಸ್ಥಿತಿಯಲ್ಲಿದೆ ಎಂದು ತಿಳಿಸಿದ್ದಾರೆ. 

  ವಾಯು ಮಾರುತದಿಂದ ಭಾರಿ ಗಾಳಿ, ಮಳೆ ಸಂಭವಿಸುವ ಮುನ್ಸೂಚನೆಯಿದ್ದ ಕಾರಣ, 2 ದಿನಗಳಿಂದ ನಿಷೇಧಿಸಿದ್ದ ಸೋಮನಾಥ ದೇವಾಲಯಕ್ಕೆ ಪ್ರವಾಸಿಗರ ಪ್ರವೇಶವನ್ನು ತೆರವುಗೊಳಿಸಲಾಗಿದೆ.