ಫಲಾನುಭವಿಗಳಿಗೆ ಗ್ಯಾರಂಟಿಗ ಗ್ಯಾರಂಟಿ ಯೋಜನೆಗಳು ಸಮರ್ಕವಾಗಿ ಕೆಲಸ ಮಾಡುತ್ತಿಲ್ಲ - ಅರುಣಕುಮಾರ್
ರಾಣೇಬೆನ್ನೂರ 20 ; ಆಡಳಿತರೂಢ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಾ ಬಂದರೂ ಸಹ ಅಭಿವೃದ್ಧಿಗೆ ಏನು ಗ್ಯಾರಂಟಿ ನೀಡಿಲ್ಲ. ಆದರೆ ಗ್ಯಾರೆಂಟಿಗಳನ್ನು ಅನುಷ್ಠಾನ ಮಾಡಿದರು ಈವರೆಗೂ ಫಲಾನುಭವಿಗಳಿಗೆ ಗ್ಯಾರಂಟಿಗಳು ಸಮರ್ಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಮಾಜಿ ಶಾಸಕ ಅರುಣಕುಮಾರ್ ಪೂಜಾರ ಆರೋಪಿಸಿದರು. ಬುಧವಾರದಂದು ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಏರಿ್ಡಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಗ್ಯಾರಂಟಿಗಳನ್ನು ಹೇಳಿ ಜನರಿಗೆ ವಂಚಿಸಿ ಮತವನ್ನು ಪಡೆದು ಅಭಿವೃದ್ಧಿಯನ್ನೇ ಮರೆತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಯ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಎಸ್ ಸಿಪಿ, ಟಿಎಸ್ಪಿಯ 24,000 ಕೋಟಿ ದಲಿತರ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಿರುವುದು ನೋವಿನ ಸಂಗತಿ.
ರೈತರ, ಕಾರ್ಮಿಕರ, ದಲಿತರ, ಸಾರ್ವಜನಿಕರ ವಿರೋಧಿಯಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದಲ್ಲಿ ಜನಮನ್ನಣೆ ದೊರೆಯುತ್ತಿಲ್ಲ ಎಂದು ಆಪಾದಿಸಿದರು. 16 ಬಾರಿ ರಾಜ್ಯದ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮುಖ್ಯಮಂತ್ರಿಗಳು ಹಾವೇರಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಬಜೆಟ್ ನಲ್ಲಿ ಏನು ಸಹ ನೀಡದಿರುವುದು ವಿಷಾಧಕರ ಸಂಗತಿಯಾಗಿದೆ. ನೀರಾವರಿ ಯೋಜನೆಗಳನ್ನು ಕಡೆಗಣಿಸಲಾಗಿದೆ ಎಂದರು. ಬಿಜೆಪಿ ಸರ್ಕಾರವಿದ್ದಾಗ ಬರಗಾಲ ಘೋಷಣೆಯಾಗಿ ಇದೀಗ ಬರ ಪರಿಹಾರವೂ ಸಹ ರೈತರಿಗೆ ದೊರೆತಿಲ್ಲ. ತುಮ್ಮಿನಕಟ್ಟೆಯಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕಾಗಿ 20 ಎಕರೆ ಜಾಗ ನಿರ್ಮಿಸಿದ್ದು, ಈವರೆಗೂ ಏನು ಕಾರ್ಯಕರ್ತವಾಗಿಲ್ಲ.
ಮುಸ್ಲಿಮರ ಓಲೈಕೆಗಾಗಿ ಮೀಸಲಾತಿ ಮಾಡಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು. ವಿಧಾನಸಭಾ ಚುನಾವಣೆಗೂ ಮುನ್ನ ಫಸಲ್ ಭೀಮಾ ಯೋಜನೆಯ ಹಣವನ್ನು ರೈತರಿಗೆ ನೀಡಿದ್ದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರುತ್ತಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ. ಆದರೆ ಕಾಂಗ್ರೆಸ್ ನವರು ರಾಜ್ಯದ ಮೂರು ಉಪಚುನಾವಣೆಯಲ್ಲಿ ಗೃಹಲಕ್ಷ್ಮಿ ಹಣವನ್ನು ಬಿಡುಗಡೆಗೊಳಿಸಿ ರಾಜಕೀಯ ಮಾಡಿದರು ಎಂದರು. ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು, ಕುಂಠಿತಗೊಂಡಿವೆ. ಶ್ರೀಸಾಮಾನ್ಯರ ಅಹವಾಲುಗಳನ್ನು ಕೇಳುವವರು ಇಲ್ಲವಾಗಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಸಮರ್ಕವಾಗಿ ಅನುಷ್ಠಾನಗೊಳಿಸಲಿ. ಗ್ಯಾರಂಟಿ ಪರವಾಗಿ ಬಿಜೆಪಿ ಇದೆ. ಗ್ಯಾರಂಟಿಗಳನ್ನು ಬಂದ್ ಮಾಡಿದರೆ ಹೋರಾಟ ಮಾಡುವುದಾಗಿ ಅರುಣಕುಮಾರ್ ಎಚ್ಚರಿಸಿದರು. ನಗರಸಭೆ ಉಪಾಧ್ಯಕ್ಷ ನಾಗರಾಜ್ ಪವಾರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿದ್ದಣ್ಣ ಚಿಕ್ಕಬಿದರಿ, ಪ್ರಕಾಶ್ ಪೂಜಾರ್, ಮಲ್ಲಿಕಾರ್ಜುನ್ ಅಂಗಡಿ, ಬಸವರಾಜ್ ಚಳಗೇರಿ, ಕುಬೇರ್ಪ ಕೊಂಡಜ್ಜಿ, ನಿಂಗರಾಜ್ ಕೋಡಿಹಳ್ಳಿ ಮಾಳಪ್ಪ ಪೂಜಾರ, ರಾಯಣ್ಣ ಮಾಕನೂರ, ರಾಜು ಬಣಕಾರ, ಅಮೋಘ ಬಾದಾಮಿ,ಪವನ ಮಲ್ಲಾಡದ ಮತ್ತಿತರರು ಇದ್ದರು.