ಇಂಡಿ 03: ತಾಲೂಕು ಪಂಚಾಯತ ಸಭಾಭವನದಲ್ಲಿ ತಾಲೂಕು ಮಟ್ಟದ 05 ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆಯನ್ನು ಗ್ಯಾರಂಟಿ ಯೋಜನೆ ಇಂಡಿ ತಾಲೂಕು ಅಧ್ಯಕ್ಷರಾದ ಪ್ರಶಾಂತ ಕಾಳೆ ಇವರ ಅಧ್ಯಕ್ಷತೆಯಲ್ಲಿ ಮತ್ತು ಗ್ಯಾರಂಟಿ ಯೋಜನೆ ಸದಸ್ಯ ಕಾರ್ಯದರ್ಶಿ ಹಾಗೂ ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಂದೀಪ್ ರಾಠೋಡ ಅವರ ನೇತೃತ್ವದಲ್ಲಿ ಜರುಗಿತು.
05 ಗ್ಯಾರಂಟಿ ಯೋಜನೆಗಳಾದ ಗೃಹ ಲಕ್ಷ್ಮೀ ಯೋಜನೆ ಶಕ್ತಿ ಯೋಜನೆ,ಯುವ ನಿಧಿ ಯೋಜನೆ . ಅನ್ನ ಭಾಗ್ಯ ಯೋಜನೆ, ಉಚಿತ ವಿದ್ಯುತ್ ಯೋಜನೆಗಳ ಕುರಿತು ಪ್ರಗತಿ ಪರೀಶೀಲನೆ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಂದೀಪ ರಾಠೋಡ ಅವರು ಪಿಯು ವಿದ್ಯಾರ್ಥಿಗಳ ಪರೀಕ್ಷೆ ಪ್ರಾರಂಭವಾಗಿದ್ದು ವಿದ್ಯುತ್ ಹಾಗೂ ಬಸ್‌ಗಳ ಸಮಸ್ಯೆ ಆಗದೆ ಹಾಗೆ ಎಚ್ಚರಿಕೆ ವಹಿಸಬೇಕೆಂದು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು, ಸರ್ಕಾರದ ಎಲ್ಲ ಯೋಜನೆಗಳು ಪ್ರತಿ ಜನ ಪ್ರತಿನಿಧಿಗಳಿಗೆ ತಲುಪುವಂತಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಲ್ಲ ಗ್ಯಾರಂಟಿ ಯೋಜನೆ ನಿರ್ವಹಣಾ ಸಮಿತಿ ಸದಸ್ಯರು, ಸಂಬಂದಿಸಿದ ಇಲಾಖಾ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.