ಗ್ಯಾರಂಟಿ ಉತ್ಸವ ಎಂಬುದು ಮಹಿಳಾ ಸಂಭ್ರಮ : ಪುಷ್ಪಾ ಅಮರನಾಥ
Guarantee Festival is a celebration of women: Pushpa Amarnath
ಕಾರವಾರ 11 : ಗ್ಯಾರಂಟಿ ಉತ್ಸವ ಎಂಬುದು ಮಹಿಳಾ ಸಂಭ್ರಮ ಎಂದು ಮೈಸೂರು ವಿಭಾಗದ ರಾಜ್ಯ ಗ್ಯಾರಂಟಿ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ ಅಭಿಪ್ರಾಯಪಟ್ಟರು. ಗುಣವಂತೆಯಲ್ಲಿ ಅವರು ಗ್ಯಾರಂಟಿ ಕಾರ್ಯಾಗಾರದಲ್ಲಿ ಅತಿಥಿಯಾಗಿ ಮಾತನಾಡಿದರು. ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರಣವಾಗಿ ರಾಜ್ಯ ಸುತ್ತಿದೆವು. ಮಹಿಳೆಯರು ಸಬಲೀಕರಣದ ದಿನಗಳು ಇವು. ಗ್ಯಾರಂಟಿ ಅನುಷ್ಠಾನದಲ್ಲಿ ಅಧಿಕಾರಿಗಳ ಪಾತ್ರ ದೊಡ್ಡದು ಎಂದರು. ಜನರಿಗೆ ಸ್ವಾಭಿಮಾನದ ಬದುಕು ಕಟ್ಟಲು ಗ್ಯಾರಂಟಿಗಳು ಸಹಾಯವಾದವು. ಅವು ನಮ್ಮ ಹಕ್ಕಗಳು ಎಂದರು.
ಇಡೀ ದೇಶದಲ್ಲಿ ಇವತ್ತು ಇರುವುದು ಕರ್ನಾಟಕ ಮಾಡೆಲ್ ಇದೆ. ಕರ್ನಾಟಕದ ಯೋಜನೆಗಳನ್ನು ಇತರೆ ರಾಜ್ಯ ಗಳು ಅನುಸರಿಸುತ್ತಿವೆ .ಮಹಿಳೆಯರು ಸ್ವಾತಂತ್ರ್ಯ ಜೀವನ ಕಲಿಸಿವೆ.ಗ್ಯಾರಂಟಿಗಳೇ ಜೀವನದ ಭರವಸೆಯಾಗಿವೆ. ಗ್ಯಾರಂಟಿ ಯಾಕೆ ಕೊಡಬೇಕು ಅನ್ನುವವರಿಗೆ ಒಂದು ಪ್ರಶ್ನೆ. ಸಂವಿಧಾನ ಕಾರಣವಾಗಿ ನಾನು ನಿಂತು ಮಾತಾಡುತ್ತಿದ್ದೇವೆ. ಸರ್ವರಿಗೂ ಸಮಪಾಲು ಸಮಬಾಳು ಎಂಬುದು ಗ್ಯಾರಂಟಿ ಯಿಂದ ಸಾಧ್ಯವಾಗಿದೆ ಎಂದು ಪುಷ್ಪಾ ಅಮರನಾಥ ಅಭಿಪ್ರಾಯಪಟ್ಟರು.ಅಧ್ಯಕ್ಷತೆವಹಿಸಿ ಮಾತನಾಡಿದ ಗ್ಯಾರಂಟಿ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರು ಗ್ಯಾರಂಟಿಗೆ ಅನುಷ್ಠಾನ ಸಮಿತಿ ಇತ್ತು. ಅಧಿಕಾರಿಗಳ ಜೊತೆ ಸಮನ್ವಯ ದಿಂದ ಕೆಲಸ ಮಾಡಿತು. ಅತ್ಯಂತ ಯಶಸ್ವಿಯಾಗಿ ಗ್ಯಾರಂಟಿ ಅನುಷ್ಠಾನ ಆಗಿವೆ.ಇವು ಜನರ ಬದುಕಿನ ಜೊತೆಗೆ ಇದ್ದು, ಜನರ ಜೀವನ ಕಟ್ಟಿವೆ ಎಂದರು.
ಕೆಲವರು ಜನರ ಭಾವನೆ ಕೆರಳಿಸಿ ಮತ ರಾಜಕೀಯ ಮಾಡ್ತಾರೆ. ನಾವು ಜನರಿಗೆ ಅನುಕೂಲ ಮಾಡಿ ಮತ ಕೇಳ್ತಿವಿ. ದೇವರಾಜು ಅರಸು ಕಾಲದ ರಾಜಕಾರಣಿ .ಅವರು 20 ಅಂಶಗಳನ್ನು ಜಾರಿಗೆ ತಂದರು. ಆ ಯೋಜನೆಗಳು ಇಂದಿಗೂ ಜಾರಿಯಲ್ಲಿವೆ. ವೃದ್ಧಾಪ್ಯ ವೇತನ, ವಿಧಾವಾ ವೇತನ, ಭೂಮಿ ಹಕ್ಕು, ಮನೆ ಇಲ್ಲದವರಿಗೆ ಮನೆ ನೀಡಿದರು.ಗುಂಡೂರಾಯರು ಸ್ಟೈಫಂಡ್ ಕೊಟ್ಟರು . ಬಂಗಾರ್ಪ ರೈತರಿಗೆ ಉಚಿತ ವಿದ್ಯುತ್ ನೀಡಿದರು. ಆರಾಧನ ಯೋಜನೆ ತಂದರು ಎಂದು ನೆನಪಿಸಿದರು. ಸಿದ್ದರಾಮಯ್ಯ ಗ್ಯಾರಂಟಿ ಮೂಲಕ ಭಾಗ್ಯಗಳ ರಾಜ ಎಂದು ಹೆಸರಾದರು ಎಂದು ಹೇಳಿದರು. ಬಜೆಟ್ ಗಾತ್ರ 2 ಲಕ್ಷಕೋಟಿಯಿಂದ 4 ಲಕ್ಷ ಕೋಟಿಗೆ ಹೆಚ್ಚಿಸಿದ ಕೀರ್ತಿ ಸಿದ್ದರಾಮಯ್ಯ ಅವರದ್ದು. ತಲಾ ಆದಾಯ ಹೆಚ್ಚಿಸಿದರು . ಸಿದ್ದರಾಮಯ್ಯ ಅತ್ಯಂತ ಬುದ್ದಿವಂತ ಆರ್ಥಿಕ ತಜ್ಞ ಸಹ ಹೌದು ಎಂದು ಎಚ್ .ಎಂ. ರೇವಣ್ಣ ಬಣ್ಣಿಸಿದರು. ವೇದಿಕೆಯಲ್ಲಿ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಎಸ್.ಆರ್ .ಪಾಟೀಲ್ ,ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ , ಸಿಇಒ ದೀಲೀಶ್ ಶಶಿ, ಗ್ಯಾರಂಟಿ ಸಮತಿ ಜಿಲ್ಲಾಧ್ಯಕ್ಷ ಸತೀಶ್ ನಾಯ್ಕ, ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳ ಗ್ಯಾರಂಟಿ ಸಮಿತಿ ಅಧ್ಯಕ್ಷರು,.....
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 