ಕ್ರೀಡಾಸಕ್ತಿಯ ಹಂಬಲ ಮಕ್ಕಳಲ್ಲಿ ಬೆಳೆಸಿ: ಪಾಟೀಲ

ಲೋಕದರ್ಶನವರದಿ

ಬಸವನ ಬಾಗೇವಾಡಿ14: ದೈಹಿಕ ಶಿಕ್ಷಣ ವಿದ್ಯಾಥರ್ಿಗಳ ಶೈಕ್ಷಣಿಕ ಪ್ರಗತಿಗೆ ಭೂಷಣವಾಗಿದೆ. ದೈಹಿಕ ವಿಕಸನಕ್ಕೆ ಪೂರಕವಾಗಿದ್ದು ಪಠ್ಯ ವಿಷಯದ ಜೊತೆಯಲ್ಲೇ ಪ್ರಖರ ಆಶಾಕಿರಣವಾಗಿ ಹೊರಹೊಮ್ಮಿದೆ. ದೇಶದ ಭರವಸೆಯೇ ಇಂದಿನ ಮಕ್ಕಳು. ಅವರನ್ನು ದೈಹಿಕ, ಮಾನಸಿಕ, ಬೌದ್ಧಿಕ, ಶಾರಿರೀಕವಾಗಿ ಉನ್ನತ್ತಿಕರಸಿಬೇಕಾಗಿದೆ. ಎಂದು ಬಸವನ ಬಾಗೇವಾಡಿ ತಾಲೂಕಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಘದ ಅಧ್ಯಕ್ಷ ಬಿ.ಎಂ.ಪಾಟೀಲ ನುಡಿದರು.

ಇವಣಗಿಯ ಸರಕಾರಿ ಪ್ರೌಢಶಾಲೆಯಲ್ಲಿ ಇಚೇಗೆ ನಡೆದ ಬಸವನ ಬಾಗೇವಾಡಿ ತಾಲೂಕಾ ದೈಹಿಕ ಶಿಕ್ಷಣ ಶಿಕ್ಷಕರ ಒಂದು ದಿನದ ವಿಷಯ ವೇದಿಕೆ ಕಾಯರ್ಾಗಾರದಲ್ಲಿ ಮುಖ್ಯ ಅತಿಧಿಗಳಾಗಿ ಅವರು ಮಾತನಾಡಿದರು.

ಕ್ರೀಡಾಕೂಟಗಳಲ್ಲಿ ಶಾಲಾ ಮಕ್ಕಳನ್ನು ಹೊರತು ಪಡಿಸಿ ಹೊರಗಿನ ಮಕ್ಕಳನ್ನು ಯಾವ ಕಾರಣಕ್ಕೂ ಭಾಗವಹಿಸದಂತೆ ನೋಡಿಕೊಳ್ಳಬೇಕು. ಏಕೆಂದರೆ ಉತ್ತಮ ಆಟಗಾರನಿಗೆ ಪ್ರತಿಭಾವಂತ ಕ್ರೀಡಾಪಟುವಿಗೆ ನಾವು ಅನ್ಯಾಯಮಾಡಿದಂತಾಗುತ್ತದೆ. ಆ ದೃಷ್ಠಿಯಿಂದ ನಿಜವಾದ ಕ್ರಿಡಾಪಟುಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂದಾಗಬೇಕು. ವೃತ್ತಿ ನಿಷ್ಠೆ ದೈಹಿಕ ಶಿಕ್ಷಕರ ಜೀವಾಳ, ಕ್ರೀಡಾಸಕ್ತಿಯ ಹಂಬಲ ಮಕ್ಕಳಲ್ಲಿ ಬೆಳೆಸಿ. ಎಂದು ಅವರು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರುಮಾತೆ ಎಸ್.ಎನ್.ಒಡೆಯರ್, ಆಂತರಿಕವಾಗಿ ಬಹಳಷ್ಠು ಮಕ್ಕಳು ಆಧುನಿಕ ಒತ್ತಡಕ್ಕೆ ಒಳಗಾಗುತ್ತಲಿದ್ದಾರೆ. ಶಿಸ್ತುಬದ್ದ ವ್ಯಕ್ತಿತ್ವ ಅಂಕುರಗೊಳಿಸುವುದರ ಜೊತೆಗೆ ಪ್ರತಿಯೊಬ್ಬ ಮಗು ಕ್ರೀಡಾ ಚಟುವಟಿಕೆಯಲ್ಲಿ ಸಂತಸದಿಂದ ತೊಡಗುವಂತೆ ನೋಡಿಕೊಳ್ಳಬೇಕಾಗಿದೆ. ನಮ್ಮಲ್ಲಿ ಇಂತಹ ದೈಹಿಕ ಶಿಕ್ಷಣ ಶಿಕ್ಷಕರ ಕಾಯರ್ಾಗಾರ ಸಂಯೋಜಿಸಿರುವುದು ಜೌಚಿತ್ಯಪೂರ್ಣವಾಗಿದೆ ಎಂದರು.

       ಸಂಪನ್ಮೂಲ ವ್ಯಕ್ತಿ ದೈಹಿಕ ಶಿಕ್ಷಕ ಶಂಕರ ಚವ್ಹಾಣ, ಆಧುನಿಕ ದಿನಮಾನದಲ್ಲಿಂದು ದೇಶಿಯ ಕ್ರೀಡೆ ಕಬಡ್ಡಿ ಸೇರಿದಂತೆ ವಿವಿಧ ಆಟೋಟಗಳಲ್ಲಿನ ನಿಯಮಾವಳಿಗಳು ಬದಲಾಗುತ್ತಲಿವೆ.

      ಪ್ರೋ ಕಬಡ್ಡಿಯಲ್ಲಿ ಆಡಿಸುವ ನಿಯಮಾವಳಿಗಳು,  ಶಾಲೆಯಲ್ಲಿ ಮಕ್ಕಳಿಗೆ ಆಡಿಸುವ ಕಬಡ್ಡಿ ಆಟದಲ್ಲಿನ ನಿಯಮಾವಳಿಗಳ ಅಜಾಗಜಾಂತರ ವ್ಯತ್ಯಾಸವಿರುವುದು ಕಾಣಬಹುದು. ಆ ದಿಸೆಯಲ್ಲಿ ದೈಹಿಕ ಶಿಕ್ಷಣ ಪಠ್ಯಕ್ರಮದಲ್ಲಿನ ಕಬಡ್ಡಿ ಆಟದ ನಿಯಮಗಳ ಬಗ್ಗೆ ಪ್ರೌಢಶಾಲಾ ಶಿಕ್ಷಕರಿಗಾಗಿ ಕ್ರೀಡಗಳಲ್ಲಿನ ರೂಲ್ಸ್ಗಳನ್ನು ಅರಿಯುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಕಾರ್ಯಗಾರದ ಸದುಪಕಯೋಗವನ್ನು ದೈಹಿಕ ಶಿಕ್ಷಣ ಶಿಕ್ಷಕರು ಪಡೆದುಕೊಳ್ಳಬೇಕು. ಆಟೋಟಗಳ ನಿಯಾಮವಳಿಗಳನ್ನು ಸರಿಯಾಗಿ ಅಥರ್ೈಸಿಕೊಂಡು ಚಿಂತನ ಮಂತನ ನಡೆಸಬೇಕು. ಪಾರದರ್ಶಕ ಕರ್ತವ್ಯಗೈದು ವೃತ್ತಿಗೌರವಕ್ಕೆ ಬದ್ಧತೆಯ ತರಬೇಕೆಂದು ಹೇಳಿದರು.

ಜಿ.ಎಂ.ಹಿರೇಮಠ, ಆರೋಗ್ಯ ಸಂಪತ್ತು ಕಾಪಾಡಿಕೊಳ್ಳುವುದು ಬಹುಮುಖ್ಯ ಲವಲವಿಕೆ ಚೇತನಭರಿತ ಉತ್ಸಾಹಕ್ಕೆ ಕ್ರೀಡೆಯೊಂದೇ ಮದ್ದು.ಇದು ಯಾರಲ್ಲಿತ್ತೋ ಅವರೆಲ್ಲ ನೆಮ್ಮದಿ,ಆರೋಗ್ಯ ಸಂಪತ್ತಿನ ಕಣ ನೆಲೆಸಿರುತ್ತದೆ ಎಂದರು.

ತಾಲೂಕಿನ ವಿವಿಧ ಶಾಲೆಯ 50 ಕ್ಕೂ ಹೆಚ್ಚು ದೈಹಿಕ ಶಿಕ್ಷಕರು ಕಾಯರ್ಾಗಾರದಲ್ಲಿ ಪಾಲ್ಗೊಂಡಿದ್ದರು.