ವಿದ್ಯಾರ್ಥಿಗಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿ: ಮುನವಳ್ಳಿ

ಚಿಮ್ಮಡ07:  ಶಾಲೆಗಳು ವಿದ್ಯಾರ್ಥಿಗಳನ್ನು ಸಂಸ್ಕಾರವಂತರನ್ನಾಗಿ ಬೆಳೆಸುವ, ಅವರ ಭವಿಷ್ಯ ರೂಪಿಸುವ ಸಾಂಸ್ಕ್ರತಿಕ ಕೇಂದ್ರಗಳಾಗಬೇಕೆಂದು ಶಿಕ್ಷಣ ಇಲಾಖೆಯ ನಿವೃತ ಉಪ ನಿದರ್ೆಶಕ ಎಸ್.ಆರ್. ಮುನವಳ್ಳಿ ಹೇಳಿದರು. 

ಗ್ರಾಮದ ಹೆಣ್ಣುಮಕ್ಕಳ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಹಾಕವಿ ರನ್ನ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಖಾನಾ ಖಜಾನಾ, ಸೀರೆದಿನ ಹಾಗೂ ಎಂಟನೇ ವರ್ಗದ ವಿದ್ಯಾಥರ್ೀನಿಯರ ಬೀಳ್ಕೊಡುಗೆ ಸಮಾರಂಭದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಅವರು ಇಂದಿನ ಆಧುನಿಕತೆಯ ಭರಾಟೆಯಲ್ಲಿಯೂ ಚುತಿಯಿಲ್ಲದೆ ದೊರೆಯುತ್ತಿರುವ ದೈವದತ್ತ ಕೊಡುಗೆಗಳನ್ನು ಬಳಸಿಕೊಂಡು ಸುಂದರ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ, ಬೆವರು ಬುದ್ದಿಗೆ ಬೆಲೆ ಕಟ್ಟಲಾಗದು ಅಂಕಗಳಿಕೆಯ ಪೈಪೋಟಿಯೊಂದಿಗೆ ಪ್ರಕೃತಿಯಲ್ಲಿಯ ವೈವಿದ್ಯಗಳನ್ನೂ ಅನುಭವಿಸುವುದನ್ನು ಇಂದಿನ ವಿದ್ಯಾಥರ್ಿಗಳಿಗೆ ಕಲಿಸಬೇಕಾಗಿದೆಯಂದರು.

ಶೀಕ್ಷಣ ಸಂಯೋಜಕ ಎನ್.ವ್ಹಿ, ಬುಲರ್ಿ ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಕರು ಮಕ್ಕಳಿಗೆ ಅಕ್ಷರಜ್ಞಾನದೊಂದಿಗೆ ಸುಶೀಕ್ಷಿತರಾಗಿ ಬದುಕುವುದನ್ನೂ ಕಲಿಸಬೇಕಾಗಿದೆ ಎಂದರು

ಸಮಾರಂಭದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಭೀಮಸಿ ಅರುಟಗಿ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಗ್ರಾಂ.ಪಂ. ಅಧ್ಯಕ್ಷೆ ಶಾಂತವ್ವ ಮಾದರ, ಉಪಾದ್ಯಕ್ಷ ಗಿರಮಲ್ಲಪ್ಪಾ ಹಟ್ಟಿ, ಸಿಆರಸಿ ಪ್ರಶಾಂತ ಹೊಸಮನಿ, ಬಸವರಾಜ ಹಣಗಂಡಿ, ಐ.ಎ. ಡಾಂಗೆ, ಪ್ರಮುಖರಾದ ಎಸ್.ಎ.ಪಾಟೀಲ, ಆರ್. ವೈ. ಮುಗಳಖೋಡ, ಪ್ರಭು ನೇಸೂರ, ಬೀರಪ್ಪಾ ಹಳೆಮನಿ, ಪ್ರಭು ಮುಧೋಳ, ಸೇರಿದಂತೆ ಹಲವಾರು ಪ್ರಮುಖರು ಆಗಮಿಸಿದ್ದರು. 

ಇದೇ ಸಂಧರ್ಬದಲ್ಲಿ ವಿದ್ಯಾಥರ್ೀನಿಯರಿಗಾಗಿ ರಂಗೋಲಿ ಸ್ಪದರ್ೆ ಏರ್ಪಡಿಸಲಾಗಿತ್ತು ಹಾಗೂ ಹಲವಾರು ಸಾಧಕ ಗಣ್ಯರನ್ನೂ, ವಿದ್ಯಾಥರ್ಿಗಳನ್ನು ಸತ್ಕರಿಸಲಾಯಿತು. ಅಲ್ಲದೇ ಮಕ್ಕಳಿಂದಲೇ ತಯಾರಿಸಲಾಗಿದ್ದ 52 ಬಗೆಯ ವೈವಿದ್ಯಮಯ ಅಡುಗೆಯನ್ನು ಅಥಿತಿಗಳಿಗೆ ವಿದ್ಯಾಥರ್ಿಗಳೇ ಬಡಿಸಿ ಉನಿಸುವ 'ಖಾನಾ ಖಜಾನಾ' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಶಿಕ್ಷಕ ಬಿ.ಡಿ ನ್ಯಾಮಗೌಡ ಸ್ವಾಗತಿಸಿದರು, ಡಿ.ಪಿ.ಪರೀಟ ನಿರೂಪಿಸಿದರು, ಎ, ವೈ ಬಂಗಾರಿ ವಂದಿಸಿದರು.