ಕೆರೆ ಪುನಶ್ಚೇತನದಿಂದ ಅಂತರ್ಜಲ ಮಟ್ಟ ಹೆಚ್ಚಳ ,ಮಹಿಳೆಯರ ಸಬಲೀಕರಣವೇ ಧ್ಯೇಯ ಧರ್ಮಸ್ಥಳ ಧಮರ್ಾಧಿಕಾರಿ ಡಾ.ವೀರೆಂದ್ರ ಹೆಗ್ಗಡೆ ಅಭಿಮತ

ಲೋಕದರ್ಶನ ವರದಿ

ಬೆಳಗಾವಿ, 28:  ಹಾಲಗಿಮರಡಿ ಗ್ರಾಮದಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಪುನಶ್ಚೇತನಗೊಳಿಸದ ಕೆರೆಯನ್ನು ಡಾ.ಡಿ ವೀರೆಂದ್ರ ಹೆಗ್ಗಡೆಯವರು ಹಸ್ತಾಂತರಿಸಿದರು.

ಸಮೀಪದ ಹಾಲಗಿಮರಡಿ ಗ್ರಾಮದ ಕೆರೆ ಹಸ್ತಾಂತರ ಹಾಗೂ ಸ್ವ-ಸಹಾಯ ಸಂಘಗಳ ಗಳ ಪ್ರಗತಿ ಚಿಂತನಾ ಸಮಾವೇಶ  ಬುಧವಾರ ಜರುಗಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಸಿ ಟ್ರಸ್ಟ್ ಬೆಳಗಾವಿ ಇವರ ವತಿಯಿಂದ "ನಮ್ಮ ಊರು ನಮ್ಮಕೆರೆ" ಕಾಯಕ್ರಮದನ್ವಯ ಈ ಕೆರೆಯನ್ನು ಪುನಶ್ಚೇತನಗೊಳಿಸಲಾಗಿತ್ತು. ಈ ವೇಳೆ ಮಾತನಾಡಿದ ಧರ್ಮಸ್ಥಳದ ಧಮರ್ಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು "ಕಾರ್ಯಕ್ರಮ ಉದ್ಘಾಟಿಸಿ ಜೀವಜಲ ನೀರನ್ನು ಮಿತವಾಗಿ ಬಳಸಬೇಕಾದ ಅನಿವಾರ್ಯತೆ ಇದೆ, ಕೆರೆಯನ್ನು ಪುನಶ್ಚೇತನಗೊಳಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುವುದಲ್ಲದೇ ಜನ, ಜಾನುವಾರಗಳ ಉಪಯೋಗಕ್ಕೆ ಸಹಕಾರಿಯಾಗುತ್ತದ". ಎಂದು ಹೇಳಿದರು. ಹಾಗೂ  ಚಿಕ್ಕಮುನವಳ್ಳಿಯ ಆರೂಢಮಠದ ಶ್ರೀ ಶಿವಪುತ್ರ ಸ್ವಾಮೀಜಿ ಆಶೀವರ್ಚನ ನೀಡಿದರು, ಸಂಸದ ಸುರೇಶ ಅಂಗಡಿ ಮಾತನಾಡಿಕೆರೆ, ಕಟ್ಟೆ ಬಾವಿಗಳಿಲ್ಲಿ ನೀರನ್ನಿ ದೀರ್ಘಕಾಲದವರೆಗೆ ಕಾಯ್ದುಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಡಾ. ಡಿ ವೀರೇಂದ್ರ ಹೆಗ್ಗಡೆಯವರು ಕೆರೆಗೆ ಬಾಗಿನ ಅಪರ್ಿಸಿದರು ತದನಂತರ ನಿರ್ಗತಿಕರಿಗೆ ಮಾಶಾಸನ, ವಿದ್ಯಾಥರ್ಿಗಳಿಗೆ ಶಿಷ್ಯವೇತನ, ಜನಮಂಗಲ ಕಾರ್ಯಕ್ರಮದಡಿ ಆಟೋರಿಕ್ಷಾ ವಿತರಣೆ ಮಾಡಿದರು. ಜಿಪಂ ಸದಸ್ಯರಾದರಮೇಶ ಗೋರಲ್, ಪ್ರಾದೇಶಿಕ ನಿದರ್ೇಶಕರಾದ ಸೀತಾರಾಮ ಶೆಟ್ಟಿ ತಾಪಂ ಅಧ್ಯಕ್ಷ ಶಂಕರಗೌಡಾ ಪಾಟೀಲ, ಜಿಪಂ ಉಪಾಧ್ಯಕ್ಷರಾದ ಸುನೀಲ ನಂದಿ, ತಾಪಂ ಸದಸ್ಯಕಲ್ಲಪ್ಪ ಸಂಪಗಾವಿ, ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇಮನಗೌಡ ಪಾಟೀಲ, ಗೌರವಾಧ್ಯಕ್ಷ ನಾಗನಗೌಡ ಪಾಟೀಲ, ಮೃಣಾಲ ಹೆಬ್ಬಾಳ್ಕರ, ರಾಜು ದೊಡ್ಡಣ್ಣವರ, ಚಾರುಕೀತರ್ಿ ಸೈಬಣ್ಣವರ, ಜೀವನಧರಕುಮಾರ, ಅರವಿಂದ ಪಾಟೀಲ, ಗ್ರಾಮಾಭಿವೃದ್ಧಿ ಯೋಜನೆಯ ಬೆಳಗಾವಿ ಜಿಲ್ಲಾ ನಿದರ್ೇಶಕ ಶೀನಪ್ಪ ಎಂ,ಪ್ರಭಾಕರ, ನಾಮದೇವ, ಸುರೇಶ, ನವಜೀವನ ಸಮೀತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘದ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು. ಶೀನಪ್ಪ ಎಂ ಸ್ವಾಗತಿಸಿದರು.