ಲೋಕದರ್ಶನವರದಿ
ರಾಣೇಬೆನ್ನೂರು14: ಸುತ್ತಮುತ್ತಲ ಪರಿಸರ ವಿನಾಶದಿಂದಾಗಿ ಇಂದು ಮಾನವರು ಅನೇಕ ಸಮಸ್ಯಗಳನ್ನು ಎದುರಿಸುವಂತಾಗಿದೆ. ಪರಿಸರ ಸಮಲತೋಲನ ತರಬೇಕಾದರೆ, ಪ್ರತಿಯೊಬ್ಬರೂ ಜಲ ಶಕ್ತಿಯ ಅಭಿಯಾನದ ಮೂಲಕ ಜಾಗೃತರಾಗಿ ಅಂತರ್ಜಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂದಿನಿಂದಲೇ ಪ್ರತಿಜ್ಞೆ ಮಾಡಬೇಕಾಗಿದೆ ಎಂದು ನಗರಸಭೆ ಪೌರಾಯುಕ್ತ ಡಾ|| ಮಹಾಂತೇಶ್ ಎನ್. ಕರೆನೀಡಿದರು.
ಅವರು ಶುಕ್ರವಾರ ನಗರದಲ್ಲಿ ನಗರಸಭೆ ಭಾರತ್ ಸ್ಕೌಟ್ಸ್-ಗೌಡ್ಸ್ ಮತ್ತಿತರ ಸಂಘಟನೆಗಳು ಸಂಯುಕ್ತವಾಗಿ ಆಯೋಜಿಸಿದ್ದ, ಜಲಶಕ್ತಿ ಅಭಿಯಾನ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಸಹಸ್ರಾರು ವಿಧ್ಯಾಥರ್ಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಿ ಮಾತನಾಡಿದರು.
ಸತತ ಮಳೆ ಕೊರತೆ, ಭೀಕರ ಬರಗಾಲ ಸ್ವಾರ್ಥ ಲಾಲಸೆಗೆ ಮಾನವ ಅನುಸರಿಸಿದ ಗಿಡ-ಮರಗಳ ವಿನಾಶ ಇದರ ಪರಿಣಾಮ ನಾವೆಲ್ಲರೂ ಇಂದು ಅಂತರ್ಜಲ ಕ್ಷಾಮವನ್ನು ಎದುರಿಸುವಂತಾಗಿದೆ. ಇದೇ ರೀತಿ ಮುಂದುವರೆದರೆ, ಭವಿಷ್ಯದ ದಿನಗಳಲ್ಲಿ ನಾವೆಲ್ಲರೂ ನೀರಿಗಾಗಿ ಯುದ್ಧವನ್ನೇ ಮಾಡಬೇಕಾಗುತ್ತದೆ. ಅದಕ್ಕಾಗಿ ಕೇಂದ್ರ ಸಕರ್ಾರವು ಅಭಿಯಾನದ ರೂಪದಲ್ಲಿ ಜಲಶಕ್ತಿ ಯೋಜನೆ ಜಾರಿಗ ತಂದಿದೆ. ಇದರ ಅನುಷ್ಠಾನಕ್ಕೆ ಎಲ್ಲ ವಿದ್ಯಾಥರ್ಿಗಳು, ನಾಗರೀಕರು ಜಾಗೃತಿಗೋಳಿಸಿ ಜಲಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಪ್ರಕಾಶ ಪೂಜಾರ, ಸಿದ್ಧು ಚಿಕ್ಕಬಿದರಿ, ಆರೋಗ್ಯಾಧಿಕಾರಿ ಜಗದೀಶ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ತಾಲೂಕಾ ಕಾರ್ಯದಶರ್ಿ ಎಸ್.ಟಿ.ಕೋಟಿಹಾಳ, ಅಧ್ಯಕ್ಷ ಸಿ.ಎಸ್.ಕುಲಕಣರ್ಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಆರ್.ಡಿ.ಹೊಂಬರಡಿ, ಖಜಾಂಚಿ ಪಿ.ಕೆ.ಗಿಡ್ಡಪ್ಪಳವರ, ಸಹಕಾರ್ಯದಶರ್ಿ ಅನ್ನಪೂರ್ಣ ಕಟಗಿ, ಭಾರತೀಯ ವಿಧ್ಯಾಶಾಲೆ, ಎಚ್.ಪಿ.ಎಸ್. ನಂ.15, 7, 16 ಶಾಲೆಯ ಶಿಕ್ಷಕಿಯುರ ಮತ್ತು ಮಕ್ಕಳು ಸೇರಿದಂತೆ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಪಾಲ್ಗೊಂಡಿದ್ದರು.