ಹಾವೇರಿ: ಹಾವೇರಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಪೊಲೀಸ್ ಉಪಾಧೀಕ್ಷಕ ಸೋಮಲಿಂಗ.ಬಿ.ಕುಂಬಾರ, ಪೊಲೀಸ ನಿರೀಕ್ಷಕ ಶ್ರೀಶೈಲ ಜಿ ಚೌಗುಲಾ ಅವರು ಶನಿವಾರ ರಾಣೆಬೆನ್ನೂರ ತಹಶೀಲ್ದಾರ ಕಛೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರ ಕುಂದುಕೊರತೆಗಳನ್ನು ಆಲಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ, ಯಾವುದೇ ಲಂಚಗುಳಿ/ಭ್ರಷ್ಟ ಸಕರ್ಾರಿ ಅಧಿಕಾರಿ ಅಥವಾ ಸಿಬ್ಬಂದಿಗಳು ಸಕರ್ಾರಿ ಕೆಲಸ ಮಾಡಿಕೊಡಲು ಅನಗತ್ಯ ವಿಳಂಬ ಮಾಡಿದಲ್ಲಿ, ಕಿರುಕುಳ ನೀಡಿ ಲಂಚ ನೀಡುವಂತೆ ಯಾವುದೇ ಮಾರ್ಗದ ಮುಖಾಂತರ ಒತ್ತಾಯಿಸಿದಲ್ಲಿ ಹಾಗೂ ಭ್ರಷ್ಟಾಚಾರ ಸಂಭಂದ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದಲ್ಲಿ ಎಸಿಬಿ ಪೊಲೀಸ ಠಾಣೆಗೆ ಹಾಜರಾಗಿ ಲಿಖಿತ ರೂಪದ ದೂರುಗಳನ್ನು ನೀಡಬಹುದೆನ್ನುವ ಬಗ್ಗೆ ಹಾಗೂ ಯಾವುದೇ ಸಕರ್ಾರಿ ಅಧಿಕಾರಿ ಹಾಗೂ ಸಿಬ್ಬಂದಿಯು ತನ್ನ ನಿಗದಿತ ಆದಾಯಕ್ಕಿಂತ ಹೆಚ್ಚಿನ ಅಕ್ರಮ ಸಂಪತ್ತು ಗಳಿಸಿರುವ ಬಗ್ಗೆ ಮಾಹಿತಿ ಇದ್ದಲ್ಲಿ ಮಾಹಿತಿಯನ್ನು ನೀಡಲು ಮತ್ತು ಮಾಹಿತಿ ನೀಡಿದವರ ವಿವರ ಬಹಿರಂಗಗೊಳ್ಳದಂತೆ ಗೌಪ್ಯವಾಗಿ ಇಟ್ಟು ಸೂಕ್ತ ಕಾನೂನು ಕ್ರಮ ಜರುಗಿಸಲಾಗುವದೆನ್ನುವ ಬಗ್ಗೆ ಮಾಹಿತಿ ಹಾಗೂ ತಿಳುವಳಿಕೆ ನೀಡಲಾಯಿತು.
ಸಕರ್ಾರಿ ಕಚೇರಿಗೆ ಸಂಬಂಧಪಟ್ಟ ದೂರುಗಳೇನಾದರೂ ಇದಲ್ಲಿ ಸಾರ್ವಜನಿಕರು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ ಠಾಣೆ (ಎಸಿಬಿ) ಹಾವೇರಿಗೆ ಖುದ್ದಾಗಿ ಭೇಟಿ ನೀಡಿ ಅಥವಾ ಅಧಿಕಾರಿಗಳವರನ್ನು ದೂರವಾಣಿ ಮುಖಾಂತರ ಸಂಪಕರ್ಿಸಿ ಸಂಕ್ಷಿಪ್ತವಾಗಿ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯವ್ಯಾಪ್ತಿ ಮತ್ತು ಕಾರ್ಯವೈಖರಿಯ ಬಗ್ಗೆ ಮತ್ತು ಸಹಾಯವಾಣಿಯ ಬಗ್ಗೆ ಮಾಹಿತಿ ನೀಡಿ ಮಾಹಿತಿಯುಳ್ಳ ಭಿತ್ತಿ ಪತ್ರಗಳನ್ನು ಸಹ ಹಂಚಲಾಯಿತು.
ಸಾರ್ವಜನಿಕರ ಅಹವಾಲುಗಳಿಗೆ ಸಂಭಂದಿಸಿದಂತೆ ಸಂಭಂದಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಶೀಘ್ರವಾಗಿ ಕೆಲಸ ಮಾಡಿಕೊಡಲು ಸೂಚಿಸಲಾಯಿತು ಹಾಗೂ ಸದರಿ ಸ್ಥಳದಲ್ಲಿ ಕೆಲವೊಂದು ದೂರು ಅಜರ್ಿಗಳನ್ನು ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚಚರ್ಿಸಿ ಸಮಸ್ಯೆಗಳನ್ನು ಬಗೆಹರಿಸಿ ಅಜರ್ಿಗಳನ್ನು ವಿಲೇವಾರಿ ಮಾಡಲಾಯಿತು ಎಂದು ಕಚೇರಿ ಪ್ರಕಟಣೆ ತಿಳಿಸಿದೆ.