ಬಾಗಲಕೋಟೆ: ಹಿಂದಿನ ತಲೆಮಾರಿನ ಆರೋಗ್ಯದ ಗುಟ್ಟಾಗಿರುವ ಸಿರಿಧಾನ್ಯಗಳ ಬಳಕೆಗೆ ಹೆಚ್ಚಿನ ಜಾಗೃತಿ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಜಿಲ್ಲಾ ಕೃಷಿಕ ಸಮಾಜ, ಕೃಷಿ ತಂತ್ರಜ್ಞಾನ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರೈತ ದಿನಾಚರಣೆ, ಸಾವಯವ ಹಾಗೂ ಸಿರಿಧಾನ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ ತಲೆಮಾರಿನ ಹಿರಿಯವರು ಹೆಚ್ಚಾಗಿ ಸಿರಿಧಾನ್ಯಗಳನ್ನು ಬಳಸುತ್ತಿರುವುದರಿಂದ ನೂರು ವರ್ಷಗಳ ಕಾಲ ಬದುಕುತ್ತಿದ್ದರು ಎಂದರು.
ರಾಗಿ ತಿಂದವ ನಿರೋಗಿ-ಸದೃಡ ಆರೋಗ್ಯ, ಜೋಳ ತಿಂದವ ತೋಳ-ಬಲಿಷ್ಟ, ಅಕ್ಕಿ ತಿಂದವ ಹಕ್ಕಿ ಇದ್ದಹಾಗೆ ಎಂಬ ನಾನ್ನುಡಿಯಂತೆ ಸಾಂಪ್ರದಾಯಕ ಬೆಳೆಗಳಿಗೆ ಹೆಚ್ಚು ಒತ್ತು ನೀಡಿ ಜನತೆಗೆ ಹೆಚ್ಚಿನ ಉತ್ತಮ ಆರೋಗ್ಯ ಸಂರಕ್ಷಣೆಗೆ ನೆರವಾಗಬೇಕು. ರೈತರಿಗೆ ಸಕಾಲದಲ್ಲಿ ಮಾರ್ಗದರ್ಶನ ಅವಶ್ಯವಾಗಿದ್ದು, ಸಾವಯವ ಕೃಷಿಗೆ ನೆರವಾಗುವ ದೃಷ್ಠಿಯಿಂದ ಸರಕಾರ ಬರುವ ಏಪ್ರೀಲ್ನಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅಧಿಕಾರಿಗಳು ಯೋಜನೆಗಳು ರೈತರಿಗೆ ತಲುಪಿಸಲು ಕೃಷಿ ಅಧಿಕಾರಿಗಳು ಶ್ರಮಿಸಬೇಕು ಎಂದರು.ಉತ್ತರ ಕನರ್ಾಟಕದ ಭಾಗದಲ್ಲಿ ಕೈಯಿಂದ ಮಾಡಿದ ರೊಟ್ಟಿಗೆ ಹೆಚ್ಚಿನ ಬೇಡಿಕೆ ಇದ್ದು, ರೊಟ್ಟಿ ತಿನ್ನುವ ಸಂಸ್ಕೃತಿ ಹೆಚ್ಚಾಗಬೇಕು. ರೊಟ್ಟಿ ಈ ಭಾಗದ ಗಟ್ಟಿ ಆಹಾರವಾಗಿದೆ. ಆದರೆ ಪಾಶ್ಚಿಮಾತ್ಯ ಸಂಸ್ಕೃತಿಯ ಆಹಾರದಿಂದ ಜನರ ಆರೋಗ್ಯ ಅದೋಗತಿಗೆ ಹೋಗುತ್ತಿರುವುದನ್ನು ಕಂಡು ಕಳವಳ ವ್ಯಕ್ತಪಡಿಸಿದರು. ಬರುವ ಬಜೆಟ್ನಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಕೃಷಿ ಭೂಮಿ ಹೊಂದಿರುವ ಎಲ್ಲ ವರ್ಗದ ರೈತ ಕುಟುಂಬಕ್ಕೆ ವಾಷರ್ಿಕವಾಗಿ 6 ಸಾವಿರ ರೂ. ಹಾಗೂ ಇದಕ್ಕೆ ಬೆಂಬಲವಾಗಿ ರಾಜ್ಯ ಸರಕಾರದಿಂದ 4 ಸಾವಿರ ಸೇರಿ ಒಟ್ಟು 10 ಸಾವಿರ ರೂ.ಗಳ ನೀಡುವ ಯೋಜನೆ ಇದಾಗಿದ್ದು, ಈಗಾಗಲೇ ಕೇಂದ್ರ ಸರಕಾರದಿಂದ ಮೊನಲೇ ಕಂತು 1.77 ಲಕ್ಷ ರೈತ ಕುಟುಂಬಗಳಿಗೆ 35.59 ಕೋಟಿ ರೂ. ಎರಡನೇ ಕಂತಿನಲ್ಲಿ 1.74 ಲಕ್ಷ ರೈತ ಕುಟುಂಬಕ್ಕೆ 34.85 ಕೋಟಿ ರೂ, ಹಾಗೂ ಮೂರನೇ ಕಂತಿನಲ್ಲಿ 1.41 ಲಕ್ಷ ಕುಟುಂಬಗಳಿಗೆ 28.39 ಕೋಟಿ ರೂ.ಗಳನ್ನು ರೈತರ ಬ್ಯಾಂಕ್ ಖಾತೆಗೆಳಿಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದರು.