ಲೋಕದರ್ಶನ ವರದಿ
ಮೋಳೆ 18: ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಎನ್.ಸಿ.ಸಿ ಘಟಕವು ಹತ್ತಾರು ವಿಧಾಯಕ ಕಾರ್ಯಗಳನ್ನು ಯಶಸ್ವಿಗೊಳಿಸುತ್ತಾ ಪ್ರಶಂಸೆಗೆ ಪಾತ್ರವಾಗಿದೆ. ಪ್ರತಿ ವರ್ಷ ಸರಾಸರಿ ಆರೇಳು ಕೆಡೆಟ್ಗಳು ಸೈನ್ಯಕ್ಕೆ ಮತ್ತು ವಿವಿಧ ಹುದ್ದೆಗಳಿಗೆ ಆಯ್ಕೆಯಾಗುತ್ತಿದ್ದು, ಅದು ತನ್ನ ಗೌರವ ಹೆಚ್ಚಿಸಿಕೊಂಡಿದೆ.
ಇದು ಮಹತ್ತರ ಕೊಡುಗೆಯಾಗಿದೆ. ಇದಕ್ಕೆ ಇನ್ನೊಂದು ಸಾಕ್ಷಿಯೆಂದರೆ ಈ ವರ್ಷ ಕುಮಾರಿ. ಆರತಿ ತಳವಾರ ಸೈನ್ಯದ ಪೋಲಿಸ್ ಹುದ್ದೆಗೆ ಆಯ್ಕೆಯಾದ ಪ್ರಥಮ ಮಹಿಳೆಯಾಗಿದ್ದಾಳೆ. ಅಲ್ಲದೆ, ಜಿನಶ್ರೀ ಗಣೆ ರಾಷ್ಟ್ರ ಮಟ್ಟದಲ್ಲಿ ಫೈರಿಂಗ್ದಲ್ಲಿ ಪ್ರಶಂಸಾ ಪತ್ರ ಪಡೆದಿದ್ದಾಳೆ. ಇಬ್ಬರೂ ಬಿ.ಕಾಂ. ವ್ಯಾಸಂಗದಲ್ಲಿರುವರು ವಿಶೇಷವೆಂದು ಪ್ರಾಚಾರ್ಯ ಡಾ.ಎಸ್.ಓ.ಹಲಸಗಿಯವರು ಹೇಳಿದರು.
ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಎನ್.ಸಿ.ಸಿ.ಯ ಎಪ್ಪತ್ತೊಂದನೆಯ ವಷರ್ಾಚರಣೆಯ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಮುಂದುವರೆದು, ಎನ್.ಸಿ.ಸಿ. ಕೆಡೆಟ್ಗಳು ಉತ್ತಮ ಅಂಕಗಳನ್ನು ಸಾಧಿಸಿದರೆ ರಾಷ್ಟ್ರಮಟ್ಟದಲ್ಲಿ ಅಗ್ರರಾಗಿ ಗುರುತಿಸಿಕೊಳ್ಳುವ ಸಾಧ್ಯತೆಯಿದೆ. ಅದರಿಂದ ಸಂಸ್ಥೆ ಹೆಮ್ಮೆ ಪಡುತ್ತದೆಯೆಂದು ಹೇಳಿದರು.
ಕಾಗವಾಡ ಸಮುದಾಯ ಆರೋಗ್ಯ ಕೇಂದ್ರದ ನೇತ್ರತಜ್ಞ ಡಾ.ವಿಶಾಲ ಮಾಳವದಕರ್ ಮುಖ್ಯ ಅತಿಥಿಗಳಾಗಿ ಆಗಮಿಸಿ, ತಮ್ಮ ವಿದ್ಯಾಥರ್ಿ ಜೀವನದ ಎನ್.ಸಿ.ಸಿ ಅನುಭವ ಹಂಚಿಕೊಂಡರು. ಈ ಕೆಡೆಟ್ಗಳ ಸಮವಸ್ತ್ರವು ಅವರ ಶಿಸ್ತು ಮತ್ತು ದಕ್ಷತೆಯನ್ನು ಸೂಚಿಸುವ ಸಂಕೇತವೆಂದು ಹೇಳಿದರು. ಎನ್.ಸಿ.ಸಿ ವಿದ್ಯಾಥರ್ಿಗಳು 'ಬಿ' ಮತ್ತು 'ಸಿ' ಪರೀಕ್ಷೆಗಳನ್ನು ಯಶಸ್ವಿಯಾಗಿ ತೇರ್ಗಡೆಗೊಂಡರೆ ವಿಫುಲ ಅವಕಾಶಗಳು ಲಭ್ಯವಾಗುತ್ತವೆಯೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸೈನ್ಯಕ್ಕೆ ಭತರ್ಿಯಾದ ಕಾಶಿಲಿಂಗ್ ಮತ್ತು ಮಲ್ಲಪ್ಪಾ ಚಂದೂರೆ ಹಾಗೂ ಸಾಗರ ಹೆಳವಿ ಇವರನ್ನು ಸತ್ಕರಿಸಲಾಯಿತು. ಅದರಂತೆ ವೈಭವ ಧೋತ್ರೆ ಹಾಗೂ ಅಮೃತಾ ಪವಾರ ತಮ್ಮ ಅನುಭವ ಹಂಚಿಕೊಂಡರು. ಇವರ ಜೊತೆಗೆ ವಿವಿಧ ಶಿಬಿರಗಳಲ್ಲಿ ಸುವರ್ಣ, ಬೆಳ್ಳಿ ಹಾಗೂ ಕಂಚಿನ ಪದಕ ವಿಜೇತ ಕೆಡೆಟ್ಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಾರಂಭದಲ್ಲಿ ಪ್ರಿಯಂಕಾ ಬಡಚಿ ಹಾಗೂ ಸಂಗಡಿಗರು ಸ್ವಾಗತಗೀತೆ ಹೇಳಿದರು. ಎನ್.ಸಿ.ಸಿ ಅಧಿಕಾರಿ ಮೇಜರ್ ವ್ಹಿ.ಎಸ್.ತುಗಶೆಟ್ಟಿಯವರು ಸ್ವಾಗತಿಸಿ, ಆಮಂತ್ರಿತರ ಪರಿಚಯ ನೀಡಿ, ಪ್ರಾಸ್ತಾವಿಕವಾಗಿ ಎನ್.ಸಿ.ಸಿ ಘಟಕ ಕುರಿತು ಮಾತನಾಡಿದರು. ಕೆಡೆಟ್ ಪೂಜಾ ತೇಲಿ ವರದಿ ವಾಚಿಸಿದರು.
ಕೊನೆಯಲ್ಲಿ ಪ್ರಿಯಂಕಾ ಬಡಚಿ ವಂದಿಸಿದರು. ಡಾ.ಎಸ್.ಎ.ಕಕರ್ಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆ ಮೇಲೆ ಪ್ರೊ. ಎಸ್.ಎಸ್.ಬಾಗನೆ ಮತ್ತು ಕಾರ್ಯಕ್ರಮದಲ್ಲಿ ವೃಷಭ ಚೌಗಲಾ, ಧೋತ್ರೆ ಮುಂತಾದವರು ಉಪಸ್ಥಿತರಿದ್ದರು.