ಸಮಾನತೆ ಸಾರಿದ ಧರ್ಮವೇ ದೊಡ್ಡದ್ದು

ಲೋಕದರ್ಶನ ವರದಿ

ಗೋಕಾಕ: ನಾವು 21ನೇ ಶತಮಾನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಪಾರ ಪ್ರಗತಿ ಸಾಧಿಸಿದ್ದಾಗಲೂ ಸಹ ಸಮಾಜದಲ್ಲಿ ಜಾತಿ, ಬೇಧ ಹಾಗೂ ಅಸಮಾನತೆ ಇರುವುದು ಖೇಧಕರ ಸಂಗತಿ, ಹಾಗಾಗಿ ಸಮಾನತೆಯನ್ನು ಸಾರಿದ ಧರ್ಮವೇ ದೊಡ್ಡದ್ದು ಎಂದು ಬೆಳಗಾವಿಯ ಇತಿಹಾಸ ಸಂಶೋದಕಿ ಡಾ: ಬಿ.ಆರ್.ರಾಧಾ ಅಭಿಪ್ರಾಯಪಟ್ಟರು.

ಅವರು ನಗರದ ಶೂನ್ಯ ಸಂಪಾದನಾ ಮಠದಲ್ಲಿ ಜರುಗಿದ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ವಚನ ಸಾಹಿತ್ಯ ಚಿಂತನ-ಮಂಥನ ವೇದಿಕೆ, ವೀರಶೈವ ಜಾಗೃತ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ 140ನೇ ಶಿವಾನುಭವಗೋಷ್ಠಿ ಚಿಂತನಕಾರರಾಗಿ ಭಾಗವಹಿಸಿ ಮಾತನಾಡಿದರು.

ಆತ್ಮವಂಚನೆ, ಆಷಾಢಭೂತಿತನ ಸಲ್ಲದು ಅತಿಯಾದ ದೇಹ ದಂಡನೆಯೂ ಸೂಕ್ತವಲ್ಲ ಕಾರ್ಯ(ಶರೀರ)ವೇ ಪ್ರಸಾರವಾಗಿದು ಅದಕ್ಕೆ ಜ್ಞಾನ ಮತ್ತು ಯೋಗವು ಅವಶ್ಯಕವಾಗಿದೆ ಎಂದರು.

ಸಾನಿಧ್ಯ ವಹಿಸಿದ್ದ ಶೂನ್ಯ ಸಂಪಾದನಮಠದ ಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಮಾತನಾಡಿ ಬರುವ ಫೆಬ್ರುವರಿ ತಿಂಗಳಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವದಲ್ಲಿ ಕಾಯಕ ಶ್ರೀ ಪ್ರಶಸ್ತಿಯಂತೆ ಸಾಧಕ ಮಹಿಳೆಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷ ಪ್ರಶಸ್ತಿ ಸ್ಥಾಪಿಸಲಾಗುವುದು. 

ಅದರಲ್ಲಿ ಒಂದು ಲಕ್ಷ ರೂ.ನಗದು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು. ಈಗಾಗಲೇ ಎಲ್ಲ ಸಿದ್ದತೆಗಳು ಪ್ರಾರಂಭಗೊಂಡಿವೆ ಜನತೆ ಮತ್ತು ಭಕ್ತರು ಪಾಲ್ಗೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸನಗೌಡ ಪಾಟೀಲ ವಹಿಸಿದ್ದರು. ವೇದಿಕೆ ಮೇಲೆ ಡಾ: ಸಿ.ಕೆ.ನಾವಲಗಿ, ರಾಜೇರ್ಶವರಿ ಬೆಟ್ಟದಗೌಡರ, ವೀಣಾ ಹಿರೇಮಠ, ಮಹಾದೇವಿ ಕಿರಗಿ, ಮಹಾಲಿಂಗಪ್ಪ ನೇಗಿನಹಾಳ ಇದ್ದರು. ಕಾರ್ಯಕ್ರಮವನ್ನು ಶಿಕ್ಷಕ ಆರ್.ಎಲ್.ಮಿಜರ್ಿ ನಿರೂಪಿಸಿದರು. ಎಸ್.ಕೆ.ಮಠದ ವಂದಿಸಿದರು.