ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಕರಬೂಜ ಪ್ರದರ್ಶನ, ಮಾರಾಟ ಮೇಳಕ್ಕೆ ಚಾಲನೆ

ಕೊಪ್ಪಳ 19: ಕೊಪ್ಪಳ ತೋಟಗಾರಿಕೆ ಇಲಾಖೆ, ಕನರ್ಾಟಕ ರಾಜ್ಯ ತೋಟಗಾರಿಕೆ ಮಾರಾಟ ಮಹಾ ಮಂಡಳಿ, ಬೆಂಗಳೂರು ಹಾಗೂ ಜಿಲ್ಲಾ ಹಾಪ್ಕಾಮ್ಸ್ ಇವರ ಸಹಯೋಗದಲ್ಲಿ ಇಂದಿನಿಂದ (ಫೆ. 19 ರಿಂದ 21 ರವರೆಗೆ) ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾದ ``ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ ಮತ್ತು ಕರಬೂಜ ಬೆಳೆಯ ಪ್ರದರ್ಶನ ಮತ್ತು ಮಾರಾಟ ಮೇಳ''ಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ರಿಬ್ಬನ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು.  

ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ ಮತ್ತು ಕರಬೂಜ ಬೆಳೆಯ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಉತ್ತಮ ಗುಣಮಟ್ಟದ ಬೆಳೆಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ತೋಟಗಾರಿಕೆ ಇಲಾಖೆಯಿಂದ ಆಯೋಜಿಸಲಾದ ಈ ಮೇಳವು ಸಹಕಾರಿಯಾಗಲಿದೆ.  ಅಲ್ಲದೇ ಯಾವುದೇ ಮಧ್ಯವತರ್ಿಗಳಿಲ್ಲದೇ ಸೂಕ್ತ ಬೆಲೆಯೊಂದಿಗೆ ರೈತರಿಗೆ ನೇರವಾಗಿ ಲಾಭ ದೊರೆಯಲಿದೆ ಎಂದರು. 

ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ ಮತ್ತು ಕರಬೂಜ ಬೆಳೆಯ ಕುರಿತಾದ ತಾಂತ್ರಿಕ ಮಾಹಿತಿ ಕೈಪಿಡಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಘುನಂದನ್ ಮೂತರ್ಿ ಬಿಡುಗಡೆಗೊಳಿಸಿದರು.  ತೋಟಗಾರಿಕೆ ಇಲಾಖೆ ಉಪನಿದರ್ೇಶಕ ಕೃಷ್ಣ ಉಕ್ಕುಂದ, ಹಿರಿಯ ಸಹಾಯಕ ತೋಟಗಾರಿಕೆ ನಿದರ್ೇಶಕ ನಜೀರ ಅಹ್ಮದ್, ಕೇಂದ್ರ ಸ್ಥಾನಿಕ ಸಹಾಯಕ ಮಂಜುನಾಥ ಲಿಂಗಣ್ಣನವರ, ಸಹಾಯಕ ತೋಟಗಾರಿಕೆ (ರಾಜ್ಯ ವಲಯ) ನಿದರ್ೇಶಕ ರಮೇಶ ಗುಡಸಲದ, ಮುನಿರಾಬಾದ್ ತರಬೇತಿ ಕೇಂದ್ರದ ಸಹಾಯಕ ತೋಟಗಾರಿಕೆ ನಿದರ್ೇಶಕ ಹನುಮೇಶ ನಾಯಕ, ವಿಷಯ ತಜ್ಞ ವಾಮನ ಮೂತರ್ಿ ಸೇರಿದಂತೆ ಇಲಾಖೆಯ ಸಿಬ್ಬಂದಿ ಹಾಗೂ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಸೆಲ್ಫಿ ಪಾಯಿಂಟ್: ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ ಮತ್ತು ಕರಬೂಜ ಬೆಳೆಯ ಪ್ರದರ್ಶನ ಮತ್ತು ಮಾರಾಟ ಮೇಳ ಅಂಗವಾಗಿ ದ್ರಾಕ್ಷಿ, ಕಲ್ಲಂಗಡಿ ಹಾಗೂ ಕರಬೂಜ ಹಣ್ಣುಗಳ ಮಾದರಿ ವಿನ್ಯಾಸದೊಂದಿಗೆ ``ಸೆಲ್ಫಿ ಪಾಯಿಂಟ್' ಅನ್ನು ಸ್ಥಾಪಿಸಲಾಗಿದ್ದು, ಇದನ್ನು ದ್ರಾಕ್ಷಿ, ಕಲ್ಲಂಗಡಿ ಹಾಗೂ ಕರಬೂಜ ಹಣ್ಣುಗಳು ಮತ್ತು ಅವುಗಳ ಬಳ್ಳಿಗಳಿಂದ ಶೃಂಗರಿಸಲಾಗಿದೆ.  ಜಿಲ್ಲೆಯ ಸಾರ್ವಜನಿಕರು ಈ ಮೇಳಕ್ಕೆ ಭೇಟಿ ನೀಡಿ ಸೆಲ್ಫಿಯನ್ನು ತೆಗೆದುಕೊಳ್ಳಬಹುದಾಗಿದೆ.   

ವಿವಿಧ ತಳಿಯ ಹಣ್ಣುಗಳು: ಮೇಳದಲ್ಲಿ ವಿವಿಧ ರೀತಿಯ ದ್ರಾಕ್ಷಿ ತಳಿಗಳಾದ ತಾಮ್ಸಾನ್ ಸೀಡ್ಲೆಸ್, ಕಾಜು ಸೋನಾಕಾ, ಸೋನಾಕಾ, ಸೂಪರ ಸೋನಾಕಾ, ಮಾಣಿಕ್ ಚಮನ್, ಶರತ್ ಸೀಡ್ಲೆಸ್ (ಕಪ್ಪು ದ್ರಾಕ್ಷಿ), ದಾಳಿಂಬೆ ಭಗವಾ (ಕೇಸರ), ಸೂಪರ್ ಭಗವಾ, ಕಲ್ಲಂಗಡಿ ತಳಿಗಳಾದ ಸರಸ್ವತಿ, ಕಿರಣ, ಕಿರಣ-2, ಅನ್ಮೋಲ, ವಸುಧಾ, ವಿಶಾಲಾ, ಜನ್ನತ್, ಆರೋಹಿ, ಭೀಮ್, ಮಧುಶ್ರೀ, ನಾಮಧಾರಿ, ಶುಗರ್ ಬೇಬಿ, ಕರಬೂಜ ತಳಿಗಳಲ್ಲಿ ಮಧುಮತಿ, ಮೃದುಲಾ, ಮಾಧುರಿ, ಸಾನ್ವಿ, ಮುಸ್ಕಾನ್ ಮತ್ತು ಸ್ವಾತಿ ಸೇರಿದಂತೆ ವಿವಿಧ ತಳಿಯ ಹಣ್ಣುಗಳನ್ನು ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಇಡಲಾಗಿದೆ.  

ಮೇಳದಲ್ಲಿ: ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ ಮತ್ತು ಕರಬೂಜ ಬೆಳೆಯ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಒಟ್ಟು 8 ಜನ ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು ಭಾಗವಹಿಸಿದ್ದಾರೆ. ಹಾಗೂ 3 ರೈತ ಉತ್ಪಾದಕ ಕಂಪನಿಗಳು ಮತ್ತು ಒಂದು ಜಿಲ್ಲಾ ಹಾಫ್ಕಾಂ ಸಂಸ್ಥೆಯಿಂದ ಹಣ್ಣುಗಳನ್ನು ಮಾರಾಟಕ್ಕೆ ಇರಿಸಲಾಗಿದೆ. ಮೌಲ್ಯವಧರ್ಿತ ಉತ್ಪನ್ನಗಳನ್ನು ಸಹ ಪ್ರದರ್ಶನಕ್ಕೆ ಹಾಗೂ ಮಾರಾಟಕ್ಕೆ ಇಡಲಾಗಿದೆ.  ಸಾರ್ವಜನಿಕರ ಉಪಯೋಗಕ್ಕಾಗಿ ತೋಟಗಾರಿಕೆ ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸಿದ ಸಸಿ-ಕಸಿಗಳನ್ನು ಕೂಡ ಮಾರಾಟಕ್ಕೆ ಇರಿಸಲಾಗಿದೆ.  ವಿಶೇಷವಾಗಿ ದ್ರಾಕ್ಷಿ ಬೆಳೆಗಾರರಿಗೆ ಅನುಕೂಲವಾಗುವಂತೆ ಮಾದರಿ ಒಣ ದ್ರಾಕ್ಷಿ ಘಟಕವನ್ನು ಸ್ಥಾಪಿಸಲಾಗಿದೆ.  ಅಲ್ಲದೇ ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ ಮತ್ತು ಕರಬೂಜ ಹಣ್ಣುಗಳನ್ನು ಸೇವಿಸುವುದರಿಂದ ನಮಗೆ ಸಿಗುವ ಲಾಭಗಳ ಕುರಿತು ಮಾಹಿತಿ ಫಲಕಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.  ಜಿಲ್ಲೆಯ ರೈತರು, ಸಾರ್ವಜನಿಕರು ಈ ಮೇಳಕ್ಕೆ ಭೇಟಿ ನೀಡಿ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.