ಕೂಕನಪಳ್ಳಿ ಗ್ರಾಮದಲ್ಲಿ ಅದ್ಧೂರಿ ಜಾತ್ರೆ-37 ಜೋಡಿ ಉಚಿತ ಸಾಮೂಹಿಕ ವಿವಾಹ

Grand fair-37 couples free mass marriage in Kookanapalli village

ಕೂಕನಪಳ್ಳಿ ಗ್ರಾಮದಲ್ಲಿ ಅದ್ಧೂರಿ  ಜಾತ್ರೆ-37 ಜೋಡಿ ಉಚಿತ ಸಾಮೂಹಿಕ ವಿವಾಹ  

ಕೊಪ್ಪಳ 03: ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಕಾರ್ತಿಕ ಮಾಸ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವು ಡಿಸೆಂಬರ್ 2 ರಂದು ಸೋಮವಾರ ಸಂಜೆ ಅದ್ದೂರಿಯಾಗಿ ಗ್ರಾಮದ ಪ್ರಸಿದ್ಧ ಪವಾಡ ಪುರುಷ ಬೆಟ್ಟದಲಿಂಗೇಶ್ವರರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಅಂದು ಬೆಳಗ್ಗೆ ಬೆಟ್ಟದಲಿಂಗೇಶ್ವರನ ಮೂರ್ತಿಗೆ ವಿಶೇಷ ಪೂಜಾ ಕಾರ್ಯದೊಂದಿಗೆ ಜಾತ್ರೆಗೆ ಚಾಲನೆ ನೀಡಲಾಯಿತು.  

ನಂತರ ಬೆಳಗ್ಗೆ 11 ಗಂಟೆಗೆ ಗ್ರಾಮದ ಬೆಟ್ಟದಲಿಂಗೇಶ್ವರನ ದೇವಸ್ಥಾನದಲ್ಲಿ 37 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಧ್ಯಾಹ್ನ 12 ಗಂಟೆಗೆ ಗ್ರಾಮದ ದೇವಸ್ಥಾನದ ಬಳಿ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಅಚ್ಚುಕಟ್ಟಾಗಿ ಜರಗಿತು. ಪ್ರಸಾದ ವ್ಯವಸ್ಥೆಗೆ  ಮೆಚ್ಚುಗೆ ಬೆಟ್ಟದಲಿಂಗೇಶ್ವರನ ಜಾತ್ರಾ ಮಹೋತ್ಸವಕ್ಕೆ ಹಾಗೂ ಉಚಿತ ಸಾಮೂಹಿಕ ವಿವಾಹ ವಿವಾಹದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆಯನ್ನ ಅಚ್ಚುಕಟ್ಟಾಗಿ ಮಾಡಲಾಗಿದೆ. ಜಿಲಾಬಿ, ಮಾದಲಿ, ತುಪ್ಪ, ಹಾಲು, ಮೊಸರು, ಕೆಂಪು ಚಟ್ನಿ, ರೊಟ್ಟಿ,ಪಲ್ಯ, ಅನ್ನ ಸಾಂಬಾರ್, ಸೊಂಡಗಿ, ಕಡ್ಲಿ ಪುಡಿ, ಸೇರಿದಂತೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನ ಮಾಡಲಾಗಿತ್ತು.  

ಪ್ರಸಾದ ಸವಿದ  ಭಕ್ತರು ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ಜನರು ಪ್ರಸಾದ ವ್ಯವಸ್ಥೆಯನ್ನ ಮೆಚ್ಚಿಕೊಂಡಿದ್ದಾರೆ. ಇನ್ನೂ ಸರಿಸುಮಾರು 8 ಸಾವಿರ  ಜನರು ಪ್ರಸಾದ ಸ್ವೀಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.*ಉಚಿತ ರಕ್ತದಾನ ಶಿಬಿರದ ಜಾಗೃತ ಬೆಟ್ಟದಲಿಂಗೇಶ್ವರ ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಗ್ರಾಮದ ಎಲ್ಲಾ ಜನರು ಅನ್ನದಾನಕ್ಕಿಂತ ರಕ್ತದಾನ ಶ್ರೇಷ್ಠ ಎಂಬಂತೆ ದೇವಸ್ಥಾನದ ಬಳಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನೇತೃತ್ವದಲ್ಲಿ ದೇವಸ್ಥಾನದ ಬಳಿ ಸಾರ್ವಜನಿಕರಿಗಾಗಿ ಉಚಿತ ರಕ್ತದಾನ ಶಿಬಿರ ಹಾಗೂ ರಕ್ತದಾನದ ಮಹತ್ವ ತಿಳಿಸುವ ಕಾರ್ಯ ಮಾಡಿದರು.  

ಅದ್ದೂರಿಯಾಗಿ ರಥೋತ್ಸವಕ್ಕೆ ಚಾಲನೆ ಸಂಜೆ 6 ಗಂಟೆಗೆ ಗ್ರಾಮದ ಬೆಟ್ಟದಲಿಂಗೇಶ್ವರನ ದೇವಸ್ಥಾನದ ಬಳಿ ಕೊಪ್ಪಳ ಮಾಜಿ ಸಂಸದರಾದ ಸಂಗಣ್ಣ ಕರಡಿ ರವರು ಮಾತನಾಡಿ, ಜೀವನದಲ್ಲಿ ಸುಖ ದುಃಖ, ಏರು ಇಳಿತ ಬರುವದು ಸಹಜ. ಸಮಸ್ಯೆಗಳನ್ನು ಮೆಟ್ಟಿ ನಿಂತು ಛಲದಿಂದ ಬಾಳಿ ಸಾಧಿಸಿ ತೋರಿಸಬೇಕು. ಇದನ್ನು ನವವಿವಾಹಿತರು ಅರಿತುಕೊಳ್ಳಬೇಕು ಎಂದ ಅವರು, ಬಾಸಿಂಗ ಬಲ, ಕಷ್ಟ ಬಂದರೂ ತಾಳ್ಮೆ ಬೇಕು ಎಂದು ಸೂಚಿಸುವ ತಾಳಿ, ಕುಂಕುಮ, ಕಾಲುಂಗರದ ಓಚಿತ್ಯದ ಹಿನ್ನಲೆ ವಿಶ್ಲೇಷಿಸಿದರು. ನಂತರ ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು ಮೈನಹಳ್ಳಿ ಮಠದ ಶ್ರೀಗಳು ಮಾತನಾಡಿ, ಕೂಕನಪಳ್ಳಿ ಗ್ರಾಮದಲ್ಲಿ ಸರ್ವ ಜನಾಂಗದವರಿದ್ದಾರೆ. ಒಗ್ಗಟ್ಟಿನೊಂದಿಗೆ ಸಮಾಜಮುಖಿಯಾಗಿ ಕಾರ್ಯ ಮಾಡುತ್ತಾರೆ.  

ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಎರಿ​‍್ಡಸಿ ಬಡವರಿಗೆ ಆಗುವ ಆಥಿರ್ಕ ಹೊರೆಯನ್ನು ನೀಗಿಸಿದ್ದಾರೆ.ಗ್ರಾಮದ ಹಿರಿಯರ ಮಾರ್ಗದರ್ಶನ ಸಾರ್ಥಕತೆ ಪಡೆದಿದೆ ಎಂದರು. ಮಹಾ ರಥೋತ್ಸವಕ್ಕೆ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.ಕೂಕನಪಳ್ಳಿ, ಅಬ್ಬಿಗೇರಿ, ವನಬಳ್ಳಾರಿ, ಇಂದರಗಿ, ಧನಕನದೊಡ್ಡಿ, ಬೂದುಗುಂಪ, ಕಾಮನೂನುರ, ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಬೆಟ್ಟದಲಿಂಗೇಶ್ವರ ಭಕ್ತರು ಆಗಮಿಸುವ ಮೂಲಕ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದಾರೆ.