ಲೋಕದರ್ಶನವರದಿ
ಬ್ಯಾಡಗಿ01: ಭಾರತದಂತ ಸಾಂಸ್ಕೃತಿಕ ಹಿನ್ನೆಲೆಯುಳ್ಳ ದೇಶಕ್ಕೆ ಆಧ್ಯಾತ್ಮಿಕತೆ ಹಾಗೂ ಧಾರ್ಮಿಕ ವಿಚಾರಗಳು ಆಸರೆಯಾಗಿ ನಿಂತಿವೆ, ದೇವಾನುದೇವತೆಗಳು ಅನುಗ್ರಹದಿಂದ ವಿಶ್ವದ ಇನ್ನಿತರ ರಾಷ್ಟ್ರಗಳಿಗಿಂತ ನಮ್ಮ ದೇಶದ ಜನರು ಬಹಳಷ್ಟು ಸುಭೀಕ್ಷವಾಗಿದ್ದಾರೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಪಟ್ಟಣದಲ್ಲಿ ಇಂದಿನಿಂದ ಏಳು ದಿನಗಳ ಕಾಲ ನಡೆಯಲಿರುವ ಗ್ರಾಮದೇವತೆ (ದ್ಯಾಮವ್ವದೇವಿ) ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯನಿಗೆ ಧರ್ಮ ಮತ್ತು ಅಧರ್ಮಗಳ ಅರಿವಿದೆ ಹೀಗಾಗಿಯೇ ಪ್ರಾಮಾಣಿಕ ಜನರಿಗೆ ಇಲ್ಲಿ ಕೊರತೆಯಿಲ್ಲ ಧರ್ಮ ಮಾರ್ಗದಲ್ಲಿಯೇ ದೇಶಕ್ಕೆ ಸ್ವಾತಂತ್ರ್ಯ ಪಡೆದುಕೊಂಡಿದ್ದೇವೆ, ಸಾವಿರಾರು ವರ್ಷಗಳ ಹಿಂದೆ ಹೇಳಿದಂತೆ ದಾರ್ಶನಿಕರ ವಿಚಾರಗಳು ಹರಿದಾಡುತ್ತಿವೆ, ಹಬ್ಬಹರಿದಿನ ಜಾತ್ರೆ ಇನ್ನಿತರ ಧಾಮರ್ಿಕ ಸಂಪ್ರ ದಾಯಗಳು ಇಂದಿಗೂ ನಿರಂತರವಾಗಿ ನಡೆಯುತ್ತಾ ಬಂದಿವೆ ಎಂದರು.
ಜಾಗಕೊಡಿಸಲು ಪ್ರಾಮಾಣಿಕ ಪ್ರಯತ್ನ: ಪಟ್ಟಣದ ಎಪಿಎಂಸಿ ಬಳಿ ಗ್ರಾಮದೇವತೆಯ ಹೆಸರಿಗೆ ಮೀಸಲಿಟ್ಟಿರುವ ಸುಮಾರು 18 ಗುಂಟೆ ಜಾಗೆಯನ್ನು ದೇವಸ್ಥಾನ ಸಮಿತಿಯ ಹೆಸರಿಗೆ ಮಾಡಿಕೊಡಿಸುವುದೂ ಸೇರಿದಂತೆ, ಅದಕ್ಕೆ ಅವಶ್ಯವಿರುವ ಅನುದಾನ ನೀಡುವ ಮೂಲಕ ನಿರಂತರ ಆದಾಯ ಬರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಮೋಜು ಮಸ್ತಿಗೆ ಸೀಮಿತವಾಗದಿರಲಿ: ಹಾವೇರಿ ಶಾಸಕ ನೇಹರು ಓಲೇಕಾರ ಮಾತನಾಡಿ, ಜಾತ್ರೆಗಳೆಂದರೆ ಸಾಮರಸ್ಯದ ಸಂಕೇತ ಅವುಗಳ ಪಾವಿತ್ರ್ಯತೆಗೆ ಧಕ್ಕೆ ತರುವಂತಗಹ ಕೆಲಸ ಯಾರಿಂದಲೂ ಆಗಬಾರದು, ಇತ್ತೀಚಿನ ದಿನಗಳಲ್ಲಿ ತಮ್ಮ ಮೋಜುಮಸ್ತಿಗೆ ಜಾತ್ರೆಗಳನ್ನು ಬಳಸಿಕೊಳ್ಳುತ್ತಿರುವುದು ಖೇದಕರ ಸಂಗತಿ ಇನ್ನಾದರೂ ಯುವ ಜನತೆ ಧಾರ್ಮಿಕ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಹಿರಿಯರೊಂದಿಗೆ ಬರೆತು ಕಾರ್ಯ ನಿರ್ವಹಿಸುವಂತೆ ಮನವಿ ಮಾಡಿದರು.
ದೇವಸ್ಥಾನ ಶಕ್ತಿ ಕೇಂದ್ರ: ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಜಾತ್ರೆಗಳಿಂದ ಸಮಾಜಗಳನ್ನು ಒಗ್ಗೂಡಿಸುವ ಕೆಲಸವಾಗುತ್ತಿದೆ, ಶತ ಶತಮಾನಗಳಿಂದ ಭಾರತೀಯ, ಸಂಪ್ರದಾಯ ಮತ್ತು ಸಂಸ್ಕೃತಿ ಆಚಾರ, ವಿಚಾರ, ಉಳಿಸುವ ನಿಟ್ಟಿನಲ್ಲಿ ಜಾತ್ರೆಗಳು ಪ್ರಮುಖ ಶಕ್ತಿ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.
ಆಡಂಬರಕ್ಕಿಂದ ಭಕ್ತಿ ಮುಖ್ಯ: ಜಾತ್ರಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಜಾತ್ರೆಗಳು ಆಡಂಭರದ ವಸ್ತುವಾಗಬಾರದು, ಧಾಮರ್ಿಕತೆಯ ಸಂಕೇತವಾಗಿರುವ ಜಾತ್ರೆಗಳಲ್ಲಿ ಭಕ್ತಿ ಕಾರ್ಯಗಳು ಮುಖ್ಯವಾಗ ಬೇಕು ಅಂದಾಗ ಮಾತ್ರ ಜಾತ್ರೆಗಳ ಹಿಂದಿನ ಉದ್ದೇಶ ಸಾಕಾಋಗೊಳ್ಳಲಿದೆ ಎಂದರು.
ಶಾಂತಿ ನೆಮ್ಮದಿಗೆ ಜಾತ್ರೆ: ಕಾರ್ಯಕ್ರಮದ ಸಾನಿಧ್ಯವನ್ನು ಮುಪ್ಪಿನೇಶ್ವರ ಮಠದ ಚೆನ್ನಮಲ್ಲಿಕಾರ್ಜುನ ನ ಶ್ರೀಗಳು ಮಾತನಾಡಿ, ಶಕ್ತಿ ದೇವತೆಗಳ ಆರಾಧನೆಯಿಂದ ಪಟ್ಟಣದಲ್ಲಿ ಶಾಂತಿ ನೆಲೆಗೊಳ್ಳಲಿದೆ, ಎಲ್ಲರ ಮನೆಯಲ್ಲ್ಲೂ ನೆಮ್ಮದಿಯಾಗಿ ಜನರು ಜೀವನ ನಡೆಸಲಿದ್ದಾರೆ ಅದಕ್ಕಾಗಿಯೇ ಪ್ರತಿ 5 ವರ್ಷಕ್ಕೊಮ್ಮೆ ಇಂತಹ ಮಹಾತ್ಕಾರ್ಯಗಲು ನಡೆಯುತಾ ಬಂದಿವೆ ಎಂದರು.
ಇದಕ್ಕೂ ಮುನ್ನ ಗಂಗಣ್ಣ ಎಲಿ ಪ್ರಾಸ್ತಾವಿಕವಾಗಿ ಮಾತನಾಡಿದರು, ವೇದಿಕೆಯಲ್ಲಿ ರಾಣೆಬೆನ್ನೂರ ಶಾಸಕ ಅರುಣಕುಮಾರ ಪೂಜಾರ ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ, ವೇದಮೂತರ್ಿ ಜಿ.ಸಿ.ಹಿರೇಮಠ, ಕುಮಾರೇಶ್ವರ ಪಾಠಶಾಲೆಯ ರಾಚಯ್ಯನವರು ಓದಿಸೋಮಠ, ವರ್ತಕ ಶಂಭಣ್ಣ ಶಿರೂರ, ರೈತ ಮುಖಂಡ ಅಡಿವೆಪ್ಪ ಎಲಿ, ಪುರಸಬೆ ಸದಸ್ಯ ಬಿ.ಎಂ.ಛತ್ರದ, ಚಂದ್ರಣ್ಣ ಶೆಟ್ಟರ, ಈರಣ್ಣ ಬಣಕಾರ, ಕಲಾವತಿ ಬಡಿಗೇರ, ಗಾಯತ್ರಿ ರಾಯ್ಕರ, ಕವಿತಾ ಸೊಪ್ಪಿನಮಠ, ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ನಾಗರಾಜ ದೇಸೂರ, ಬಿ.ಡಿ.ಮಾಳೇನಹಳ್ಳಿ, ಬಸವರಾಜ ಸಂಕಣ್ಣನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಂಭು ಮಠದ ಸ್ವಾಗತಿಸಿದರು.
ಡಿ.ಬಿ.ಕುಸಸೂರ ನಿರೂಪಿಸಿದರು, ಜೀವರಾಜ ಛತ್ರದ ವಂದಿಸಿದರು.