ಉಪ್ಪಿನ ಬೆಟಗೇರಿಯಲ್ಲಿ ಗ್ರಾಮವಾಸ್ತವ್ಯ: ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತ ಸಿದ್ಧ ಚೋಳನ್

ಧಾರವಾಡ 04: ಹುಬ್ಬಳ್ಳಿಯ ನೂಲ್ವಿ ಹಾಗೂ ಕಲಘಟಗಿ ಹಿರೇಹೊನ್ನಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಹಾಗೂ ಜನಸಂಪರ್ಕ ಸಭೆ ನಡೆಸಿ ಅಲ್ಲಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಾಗಿದೆ. ಹಾಗೇಯೆ ಉಪ್ಪಿನಬೇಟಗೇರಿ ಗ್ರಾಮದ ಸಮಸ್ಯೆಗಳನ್ನು ಗ್ರಾಮವಾಸ್ತವ್ಯದಲ್ಲಿ ಬಗೆಹರಿಸಲು ಜಿಲ್ಲಾಡಾಳಿತ ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಉಪ್ಪಿನ ಬೆಟಗೇರಿ ವಿರೂಪಾಕ್ಷೇಶ್ವರ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ಗ್ರಾಮ ವಾಸ್ತವ್ಯ ಮತ್ತು ಜನಸಂಪರ್ಕ ಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಉಪ್ಪಿನಬೆಟಗೇರಿ ಧಾಮರ್ಿಕ ಸಹಿಷ್ಣುತೆಗೆ ಹೆಸರಾಗಿದೆ. ಈ ಗ್ರಾಮದಲ್ಲಿ ಕುಡಿಯುವ ನೀರು, ವಾಟರ್ ಟ್ಯಾಂಕ್, ಶೌಚಾಲಯ ಸಮಸ್ಯೆಗಲು ಇರುವ ಬಗ್ಗೆ  ಮಾದ್ಯಮಗಳ ವರದಿ ಇಂದ ತಿಳಿದು ಬಂದಿದೆ. ಧಾರವಾಡ ಜಿಲ್ಲೆಯ ಇತರ ಗ್ರಾಮಗಳಿಗಿಂತ ಉಪ್ಪಿನಬೆಟಗೇರಿ ಭಿನ್ನವಾಗಿದ್ದು ಲಿಂಗಾನುಪಾತ ಹೆಚ್ಚಾಗಿದೆ. ಗ್ರಾಮದಲ್ಲಿ ಸ್ವಚ್ಚತೆಯ ಅರಿವು ಮೂಡಿಸುವ ಸಲುವಾಗಿ ಶ್ರಮದಾನವನ್ನು ಮಾಡಲಾಗುವುದು. ಗ್ರಾಮಸ್ಥರು ಇದಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಡಿದ ಶಾಸಕ ಅಮೃತ ದೇಸಾಯಿವರು ಉಪ್ಪಿನ ಬೇಟಗೇರಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ, ಮಲಪ್ರಭಾ ನದಿ ನೀರನ್ನು ಒದಗಿಸಲಾಗುತ್ತಿದೆ. ಆದರೆ ಹೆಚ್ಚಿನ ನೀರಿನ ಒತ್ತಡ ಇಲ್ಲದ ಕಾರಣ ಗ್ರಾಮಕ್ಕೆ ಸರಿಯಾಗಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಸಮರ್ಪಕ ಕುಡಿಯುವ ನೀರು ಒದಗಿಸಲು 1.5 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ತಯಾರಿಸಿ ಸಕರ್ಾರ ಅನುಮೋದನೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿಗಳು ಈ ಕುರಿತು ಸಕರ್ಾರದೊಂದಿಗೆ ವ್ಯವಹರಿಸಿ ಯೋಜನೆ ಶೀಘ್ರ ಅನುಮೋದನೆ ಪಡೆಯುವಂತೆ ಮಾಡಬೇಕು ಎಂದು ಹೇಳಿದರು. 

ಸಾನಿಧ್ಯ ಮಾತನಾಡಿದ ಉಪ್ಪಿನ ಬೇಟಗೇರಿ ಮೂರು ಸಾವಿರ ವಿರಕ್ತಮಠ ಕುಮಾರ ವಿರೂಪಾಕ್ಷ ಮಹಾಸ್ವಾಮಿಯವರು ಜಿಲ್ಲಾಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಜಿಲ್ಲಾಡಳಿತ ಗ್ರಾಮದ ಸಮಸ್ಯೆಗಳನ್ನು ಪರಿಹರಿಸಲು ಬಂದಿದೆ. ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಸೀಮಾ ಮಸುತಿ ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಪುಡಕಲಕಟ್ಟಿ, ಸದಸ್ಯೆ ಶಾಂತವ್ವ ಮ.ಸಂಕಣ್ಣವರ,ಸಿಇಓ ಡಾ.ಬಿ.ಸಿ.ಸತೀಶ ಕುಮಾರ್, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಜಿ.ಪಂ ಉಪಕಾರ್ಯದಶರ್ಿ ಎಸ್ ಜಿ ಕೊರವರ, ಉಪ ವಿಭಾಗಾಧಿಕಾರಿ ಗೀತಾಕೌಲಗಿ, ಧಾರವಾಡ ತಹಶಿಲ್ದಾರ ಪ್ರಕಾಶ್ ಕುದರಿ, ಧಾರವಾಡ ಇ.ಓ.ಎಸ್ ಎಸ್ ಕಾದ್ರೋಳ್ಳಿ, ಗ್ರಾ.ಪಂ ಅಧ್ಯಕ್ಷ ಮಹಾವೀರ ಪಾ ಅಷ್ಟಗಿ, ಉಪಾಧ್ಯಕ್ಷೆ ರತ್ನವ್ವ ಶಿ ವಿಜಾಪುರ, ವಿದ್ಯಾದಾನ ಸಮಿತಿ ವ್ಯವಸ್ಥಾಕ ಮಂಡಳಿ ಅಧ್ಯಕ್ಷ ವಿ.ಆರ್.ಪರಾಂಡೆ, ಗೌರವ ಕಾರ್ಯದಶರ್ಿ ಜಿ.ಆರ್.ಜವಳಿ ಮುಂತಾದವರು ಉಪಸ್ಥಿತರಿದ್ದರು.

ಗಭರ್ಿಣಿ ಸ್ತ್ರೀಯರಿಗೆ ಶ್ರೀಮಂತಕಾರ್ಯ ನೆರವೇರಿಸಿ ಮಕ್ಕಳಿಗೆ ಅನ್ನಪ್ರಾಶಾನ ಮಾಡಲಾಯಿತು.

ಉಪ್ಪಿನ ಬೇಟಗೇರಿ ಗ್ರಾಮಸ್ಥರಿಂದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಅದ್ದೂರಿ ಸ್ವಾಗತ

ಗ್ರಾಮ ವಾಸ್ತವ್ಯಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡದೊಂದಿಗೆ ಧಾರವಾಡದಿಂದ ಉಪ್ಪನಬೆಟಗೇರಿ ಆಗಮಿಸಿದ ಜಿಲ್ಲಾಧಿಕಾರಿ ದೀಪಾ ಚೊಳನ್ ಅವರಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ನೀಡಲಾಯಿತು.

ಗ್ರಾಮದ ಗಡಿಯಲ್ಲಿ ಆರತಿ ಬೆಳಗಿ ಮಹಿಳೆಯರು ಜಿಲ್ಲಾಧಿಕಾರಿಯನ್ನು ಸ್ವಾಗತಿಸಿದರು. ಪೂರ್ಣ ಕುಂಬ ಹೊತ್ತ ಮಹಿಳೆಯರು, ಕೋಲಟದ ತಂಡಗಳು, ಶಾಲಾ ಮಕ್ಕಳು, ವಿವಿಧ ಸ್ತ್ರೀ ಶಕ್ತಿ ಸಂಘ ಸಂಸ್ಥೆಗಳು ಸದಸ್ಯರು ಗ್ರಾಮದ ಮುಖ್ಯ ರಸ್ತೆಗಳಿಲ್ಲಿ ಮರವಣಿಗೆ ನಡೆಸುವುದರ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಎಸ್.ಜಿ.ವ್ಹಿ. ಸಂಯುಕ್ತ ಪದವಿ-ಪೂರ್ವ ಕಾಲೇಜು ಆವರಣ ತಲುಪಿದರು.