ಕರ್ನಾಟಕ ಪಶ್ಚಿಮ ಪದವೀಧರ ಮತ ಕ್ಷೇತ್ರ ಕ್ಕೆ ಪದವೀಧರ ಮತದಾರರ ನೋಂದಣಿ ಸೂಚನೆ

ಹಾವೇರಿ: ಕರ್ನಾಟಕ  ಪಶ್ಚಿಮ ಪದವೀಧರ ಮತ ಕ್ಷೇತ್ರದ ಕರ್ನಾಟಕ ವಿಧಾನ ಪರಿಷತ್ಗೆ 2020ರಲ್ಲಿ ನಡೆಯುವ ಚುನಾವಣೆಗೆ ಮತದಾರರ ಪಟ್ಟಿ ನೋಂದಣಿ ಕಾರ್ಯ ಆರಂಭಗೊಂಡಿದ್ದು ಎಲ್ಲ ಪದವೀಧರರು ಆಯಾ ತಹಶೀಲಾರ ಕಚೇರಿಯಲ್ಲಿ ನಿಗಧಿತ ಅರ್ಜಿ  ನಮೂನೆ ಭತರ್ಿಮಾಡಿ ನೋಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

ಶನಿವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪಶ್ಚಿಮ ಪದವೀಧರರ ಮತ ಕ್ಷೇತ್ರದ ವ್ಯಾಪ್ತಿಗೆ ಧಾರವಾಡ, ಹಾವ್ಭೆರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಒಳಗೊಂಡಿವೆ. ಇದೇ ಅ. 1 ರಿಂದ ಪದವೀಧರ ಮತದಾರರ ನೋಂದಣಿ ಕಾರ್ಯ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ನ. 15ರವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ನ. 21ಕ್ಕೆ ಮತದಾರರ ಕರಡು ಪ್ರತಿ ಪ್ರಕಟಿಸಲಾಗುವ್ಯದು. ಡಿ. 9ರವರೆಗೆ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗುವುದು. ಡಿ. 26ರವರೆಗೆ ಆಕ್ಷೇಪಣೆಗಳನ್ನು ಪರಿಶೀಲನೆ ನಡೆಸಿ 30 ಡಿಸೆಂಬರ್ 2019ಕ್ಕೆ ಅಂತಿಮ ಪದವೀಧರರ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.  ತಹಶೀಲ್ದಾರ ಕಚೇರಿಯಲ್ಲಿ ನಿಗಧಿ ಅರ್ಜಿ  ನಮೂನೆ-18ನ್ನು ಭರ್ತೆ ಮಾಡಿ ತಮ್ಮ ರಹವಾಸಿ ಹಾಗೂ ಪದವೀಧರರಾಗಿರುವ ದಾಖಲೆಗಳೊಂದಿಗೆ ಅಜರ್ಿ ಸಲ್ಲಿಸಲು ಕೋರಿದ್ದಾರೆ.

ನ. 01-ಮತದಾರರ ನೋಂದಣಿಗೆ ಅರ್ಹತಾ ದಿನಾಂಕವಾಗಿದ್ದು ಈ ದಿನಾಂಕಕ್ಕಿಂತ ಮೂರು ವರ್ಷಗಳ ಹಿಂದೆ ಪದವಿ ಪಡೆದವರು ಪದವಿ ಪ್ರಮಾಣಪತ್ರ ಹೊಂದಿದವರು ಮತದಾರರಾಗಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.

ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದರು ಈ ಹಿಂದಿನ ಪದವೀಧರರ ಕ್ಷೇತ್ರದಿಂದ  ಚುನಾವಣೆಯಲ್ಲಿ ಮತ ಚಲಾಯಿಸಿದ್ದರೂ ಮತ್ತೆ ಹೊಸದಾಗಿ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಹೊಸದಾಗಿ ಮತದಾರರ ಪಟ್ಟಿಯನ್ನು ತಯಾರಿಸಲಾಗುತ್ತಿದೆ. ಮತದಾರರ ನೋಂದಣಿ ಅಧಿಕಾರಿಗಳನ್ನಾಗಿ ಹಾವೇರಿ ಮತ್ತು ಸವಣೂರು ಉಪ ವಿಭಾಗಾಧಿಕಾರಿ, ಜಿಲ್ಲೆಯ ಎಂಟು ತಾಲೂಕಿನ ಚುನಾವಣಾ ತಹಶೀಲ್ದಾರ ಹಾಗೂ ತಹಶೀಲ್ದಾರ ಕಚೇರಿಗಳ ಶಿರಸ್ತೇದಾರರು ಹಾಗೂ ಹಾವೇರಿ ಮತ್ತು ರಾಣೇಬೆನ್ನೂರು ನಗರಸಭೆ ಪೌರಾಯುಕ್ತರನ್ನು ಗೊತ್ತುಪಡಿಸಲಾಗಿದೆ ಎಂದು ತಿಳಿಸಿದರು.

      ಪಶ್ಚಿಮ ಪದವೀಧರರ ಮತದಾರರ ನೋಂದಣಿ ಅಧಿಕಾರಿಯಾಗಿ ಪ್ರಾದೇಶಿಕ ಆಯುಕ್ತರನ್ನು ಹಾಗೂ ಸಹಾಯಕ ನೊಂದಣ ಅಧಿಕಾರಿಯಾಗಿ ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿದೆ. ಪದವೀಧರ ಮತದಾರರಾಗಿ ನೊಂದಾಯಿಸಿಕೊಳ್ಳಲು ಸರಳವಾದ ಅಜರ್ಿಯನ್ನು ಭತರ್ಿಮಾಡಿ ಸ್ವಯಂ ಘೋಷಣಾ ಪತ್ರ ಸಲ್ಲಿಕೆಮಾಡಬೇಕಾಗುತ್ತದೆ.ಅರ್ಜಿ ಯೊಂದಿಗೆ ಯಾವುದೇ ಪದವಿ ಪ್ರಮಾಣಪತ್ರ ಅಥವಾ ಅಂಕಟ್ಟಿ, ಪದವಿಗೆ ಸಮಾನವಾದ ಡಿಪ್ಲೋಮಾ ಪದವಿಯ ಅಂಕಪಟ್ಟಿ ಅಥವಾ ವಿವಿ ನೀಡಿದ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ.

ಇವಿಪಿ ವಿಸ್ತರಣೆ: 

  ಮತದಾರರ ಸ್ವಯಂ ಪರಿಶೀಲನಾ ಹಾಗೂ ಸ್ವಯಂ ದೃಢೀಕರಣ ಅವಧಿಯನ್ನು ಅ. 15 ರಿಂದ ನವಂಬರ್ 18ರವರೆಗೆ ವಿಸ್ತರಿಸಲಾಗಿದೆ. ಯಾವುದೇ ತಪ್ಪು ಇಲ್ಲದೆ ಶುದ್ಧವಾದ ಮತದಾರರ ಯಾದಿಯನ್ನು ತಯಾರಿಸಲು ಚುನಾವಣಾ ಆಯೋಗ ವಿಶೇಷ ಮತದಾರರ ಪಟ್ಟಿ ಪರಿಷ್ಕಣಾ ಕಾರ್ಯವನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ತಪ್ಪಾಗಿ ಮುದ್ರಿತವಾಗಿದ್ದರೆ ವಿಳಾಸ, ಇತರ ವಿವರಗಳು ತಪ್ಪಾಗಿದ್ದರೆ ಸರಿಪಡಿಸುವ ಅವಕಾಶ ಕಲ್ಪಿಸಲಾಗಿದೆ. ಸ್ವಯಂ ಮತದಾರರು ತಮ್ಮ ಮೊಬೈಲ್ಗಳಲ್ಲಿ ಓವರ್ ಹೆಲ್ಪಲೈನ್ ಬಳಸಿ ತಮ್ಮ ಹೆಸರುಗಳನ್ನು ತಾವೇ ತಿದ್ದುಪಡಿಮಾಡಿಕೊಳ್ಳಬಹುದು. ಅದು ಸಾಧ್ಯವಾಗದಿದ್ದರೆ ಬಿ.ಎಲ್.ಓ.ಗಳ ಮುಖಾಂತರ ಅಥವಾ ಯಾವುದೇ ಸೇವಾ ಕೇಂದ್ರಗಳ ಮೂಲಕ ಅಥವಾ ತಹಶೀಲ್ದಾರ ಕಚೇರಿಗಳಲ್ಲಿ ಆರಂಭಿಸಿರುವ ಮತದಾರರ ಸಹಾಯಕ ಕೇಂದ್ರದಲ್ಲಿ ಅಥವಾ ಮತದಾರರ ಸಹಾಯವಾಣಿ 1950ಕ್ಕೆ ಕರೆ ಮಾಡಿ  ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ. ರಾಜ್ಯದಲ್ಲಿ ಹಾವೇರಿ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮತದಾರರ ಸಹಾಯಕ ಕೇಂದ್ರಗಳ ಮೂಲಕ 376702, ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ 42,006, ಬಿಎಲ್.ಓ. ಆಪ್ ಮೂಲಕ 1,92,574, ಸಹಾಯವಾಣಿ 1950ನ್ನು ಸಂಪಕರ್ಿಸಿ 1,29,792 ಮತದಾರರು ವೋಟರ್ ಹೆಲ್ಪ್ ಲೈನ್ 34,643 ಮತದಾರರು ತಮ್ಮ ಹೆಸರುಗಳನ್ನು ಪರಿಶೀಲಿಸಿಕೊಂಡಿದ್ದಾರೆ. ಈ ಪೈಕಿ 86,573 ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿನ ದೋಷವಿದ್ದು ಸರಿಪಡಿಸಲು ಕೋರಿದ್ದಾರೆ. ದೋಷಗಳ ತಿದ್ದುಪಡಿ ಕಾರ್ಯ ಪ್ರಗತಿಯಲ್ಲಿದೆ. 

ಇವಿಪಿ ಕಾರ್ಯಕ್ರಮವನ್ನು ನವಂಬರ್ 18ರವರೆಗೆ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ನವಂಬರ್ 25ಕ್ಕೆ ಪರಿಷ್ಕರಣೆಯ ತಾತ್ಕಾಲಿಕ ಕರಡು ಪ್ರಕಟಿಸಲಾಗುವುದು. 2019 ಡಿಸೆಂಬರ್ 24ರವರೆಗೆ  ಪ್ರಕಟಿತ ಮತದಾರರ ಪಟ್ಟಿಯ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿದೆ. 15 ದಿನಗಳವರೆಗೆ ಆಕ್ಷೇಪಣೆಗಳನ್ನು ವಿಲೇವಾರಿಮಾಡಿ ಜನವರಿ 2020 ಜನವರಿ 20ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ವಿವರಿಸಿದರು.

ಉಪ ಚುನಾವಣೆಗೆ ಸಿದ್ಧತೆ:

 ನ. 11ರಿಂದ ರಾಣೇಬೆನ್ನೂರು, ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬರಲಿದೆ. ಈಗಾಗಲೇ ಬ್ಯಾಲೇಟ್ ಹಾಗೂ ಕಂಟ್ರೋಲ್ ಯುನಿಟ್ಗಳ ಪರಿಶೀಲನೆ ಕಾರ್ಯ ಮುಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.

      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ ಅವರು ಮಾತನಾಡಿ, ಚುನಾವಣೆ ದಿನ ಮತದಾರ ಪಟ್ಟಿಯಲ್ಲಿ ನ್ಯೂನ್ಯತೆಗಳು ಕಂಡಬರದಹಾಗೆ ಮೊದಲೇ ಮತದಾರರ ಪಟ್ಟಿ ಪರಿಶೀಲನೆ ಕಾರ್ಯ ಹಮ್ಮಿಕೊಳ್ಳಲಾಗಿದೆ.

     ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮತದಾರ ಪಟ್ಟಿ ಪರಿಶೀಲನೆಗೆ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಹಿರೇಕೆರೂರಿಗೆ 22 ಹಾಗೂ ರಾಣೇಬೆನ್ನೂರಿಗೆ 26 ಸೆಕ್ಟರ್ ಅಧಿಕಾರಿಗಳನ್ನು ನೇಮಕಮಾಡಿ ಇವಿಎಂ ಬಳಸಿ ಮತದಾನ ಮಾಡುವ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಕ್ಷೇತ್ರವಾರು ಹಮ್ಮಿಕೊಳ್ಳಲಾಗಿದೆ. 

           ಬ್ಯಾಕ್ ಕಮೀಟಿ ಮೂಲಕ ಆಶಾ, ಅಂಗನಾಡಿ ಕಾರ್ಯಕರ್ತರು, ಪಿಡಿಒಗಳನ್ನು ಬಳಸಿಕೊಂಡು ಕರಪತ್ರ ಹಂಚಿಕೆ ಸೇರಿದಂತೆ ಮತದಾರರ ವ್ಯವಸ್ಥಿತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ವಿವರಿಸಿದರು.

     ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಜಾಫರ ಸುತಾರ ಉಪಸ್ಥಿತರಿದ್ದರು.