ಸಂಶೋಧನಾ ಕೇಂದ್ರದಲ್ಲಿ ನಡೆದ 2018ನೇ ವರ್ಷದ ವಿದ್ಯಾರ್ಥಿಗಳ ಘಟಿಕೋತ್ಸವದಲ್ಲಿ ಪದವಿ ಪ್ರಧಾನ

Graduate Principal at the 2018 Student Convocation held at the Research Centre

ಸಂಶೋಧನಾ ಕೇಂದ್ರದಲ್ಲಿ ನಡೆದ 2018ನೇ ವರ್ಷದ ವಿದ್ಯಾರ್ಥಿಗಳ ಘಟಿಕೋತ್ಸವದಲ್ಲಿ ಪದವಿ ಪ್ರಧಾನ

ವಿಜಯಪುರ 14: ಯುವ ವೈದ್ಯರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಮುಖಿ ಕೆಲಸ ಮಾಡಬೇಕು ಎಂದು ಬಿ.ಎಲ್‌.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ವಿಲಾಸ ಎಸ್‌. ಬಗಲಿ ಹೇಳಿದ್ದಾರೆ. 

ಇಂದು ಶನಿವಾರ ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ ಅಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ 2018ನೇ ವರ್ಷದ ವಿದ್ಯಾರ್ಥಿಗಳ ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಿ ಮಾತನಾಡಿದರು. 

ವೈದ್ಯರು ನ್ಯಾಯಯುತ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸುವುದರಿಂದ ರೋಗಿಗಳ ಜೊತೆಗೆ ಸಮಾಜದ ಆರೋಗ್ಯಕ್ಕೂ ಕೊಡುಗೆ ನೀಡಬಹುರು.  ಇದರಿಂದ ಹೆತ್ತ ಪೋಷಕರು ಮತ್ತು ಓದಿದ ಕಾಲೇಜಿನ ಹೆಸರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯ.  ಹೊಸದಾಗಿ ವೈದ್ಯಕೀಯ ಸೇವೆಗೆ ಕಾಲಿಡುತ್ತಿರುವ ಯುವ ವೈದ್ಯರು ಹಣಕ್ಕೆ ಗಮನ ನೀಡದೇ ಮಾನವೀಯ ನೆಲೆಯಲ್ಲಿ ಆರೋಗ್ಯ ಸೇವೆಗೆ ಒತ್ತು ನೀಡಿದರೆ ಅದರಿಂದ ಸಿಗುವ ಗೌರವಯುತ ಸ್ಥಾನಮಾನಗಳು ಬೇರೋಂದಿಲ್ಲ ಎಂದು ಅವರು ಹೇಳಿದರು. 

ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಯುವ ವೈದ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಿ.ಎ.ಎಂ.ಎಸ್ ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾದ ಡಾ. ವೈಷ್ಣವಿ ಗಣೇಶಕರ, ಡಾ. ಪ್ರಜ್ವಲ ಮಾಲಗತ್ತಿ ಮತ್ತು ಸ್ನಾತಕೋತ್ತರ ವಿಭಾಗದ ಡಾ. ಜ್ಯೋತಿ ಬಬಲಿ ಅವರಿಗೆ ನಗದು ಪಾರಿತೋಷಕ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಈ  ಸಮಾರಂಭದಲ್ಲಿ ಓಟ್ಟು 62 ವಿದ್ಯಾರ್ಥಿಗಳಿಗೆ ಪದವಿ ಮತ್ತು 5 ವಿದ್ಯಾರ್ಥಿಗಳಿಗೆ  ಸ್ನಾತಕೋತ್ತರ ಪದವಿ ಪ್ರಧಾನ ಮಾಡಲಾಯಿತು.  

ಉಪಪ್ರಾಚಾರ್ಯ ಡಾ. ಶಶಿಧರ ನಾಯಕ, ಪ್ರಾಧ್ಯಾಪಕಿ ಡಾ. ಕಸ್ತೂರಿ ಪಾಟೀಲ ಸ್ವಾಗತಿಸಿದರು.  ಡಾ. ಅನೀಸ ಮದನಿ ಮತ್ತು ಡಾ. ಮಾನಸಾ ಪಂಚಾಕ್ಷರಿಮಠ ನಿರೂಪಿಸಿದರು.  ಡಾ. ಜೋತ್ನಾ ಬರಗಿ ವಂದಿಸಿದರು. 

ಎ.ವಿ.ಎಸ್ ಕಾಲೇಜು ಘಟಿಕೋತ್ಸವ: ವಿಜಯಪುರ ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಎ.ವಿ.ಎಸ್‌.ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ 2018ನೇ ವರ್ಷದ ವಿದ್ಯಾರ್ಥಿಗಳ ಘಟಿಕೋತ್ಸವ ಕಾರ್ಯಕ್ರಮ ನಡೆಯಿತು.  ಈ ಸಂದರ್ಭದಲ್ಲಿ ಬಿ.ಎಲ್‌.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ವಿಲಾಸ ಎಸ್‌. ಬಗಲಿ ಪದವಿ ಪ್ರಧಾನ ಮಾಡಿದರು.  ಡಾ. ಸಂಜಯ ಕಡ್ಲಿಮಟ್ಟಿ, ಪದವಿ ಪುರಸ್ಕೃತ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.