ನವದೆಹಲಿ,
ಡಿ 20 ಟರ್ಕಿಯಿಂದ ಹೆಚ್ಚುವರಿ 12,500 ಮೆಟ್ರಿಕ್ ಟನ್ ಈರುಳ್ಳಿ ಖರೀದಿಸಲು ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು
ಜನವರಿಯಿಂದ ಈರುಳ್ಳಿ ಭಾರತಕ್ಕೆ ರವಾನೆಯಾಗಲಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯ ಬೆಲೆ ಸ್ಥಿರೀಕರಣ ನಿಧಿ ನಿರ್ವಹಣಾ ಸಮಿತಿಯ ನಿರ್ದೇಶನದನ್ವಯ
ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹೆಚ್ಚುವರಿ ಆಮದು
ಸೇರಿದಂತೆ ಒಟ್ಟು ಈರುಳ್ಳಿ ಆಮದಿನ ಪ್ರಮಾಣ 42,500 ಮೆಟ್ರಿಕ್ ಟನ್ ಗೆ ಹೆಚ್ಚಳವಾಗಿದೆ. ಈ ತಿಂಗಳಾಂತ್ಯದೊಳಗೆ 12 ಸಾವಿರ ಮೆಟ್ರಿಕ್ ಟನ್ ಈರುಳ್ಳಿ
ಭಾರತಕ್ಕೆ ಬರಲಿದ್ದು, ವಿವಿಧ ರಾಜ್ಯಗಳಿಗೆ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗಲಿದೆ. ಇದರಿಂದ ಒಟ್ಟಾರೆ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬರಲಿದೆ
ಮತ್ತು ಲಭ್ಯತೆ ಸುಧಾರಣೆಯಾಗಲಿದೆ ಎಂದು ಹೇಳಲಾಗಿದೆ.