ಸರ್ಕಾರ ಬಡವರ ಕಣ್ಣೀರೊರಿಸುವ ಕಾರ್ಯ ಮಾಡಬೇಕು: ರಾಮಲಿಂಗಯ್ಯ ಮಹಾಸ್ವಾಮಿಗಳು

ಸರ್ಕಾರ ಬಡವರ ಕಣ್ಣೀರೊರಿಸುವ ಕಾರ್ಯ ಮಾಡಬೇಕು:  ರಾಮಲಿಂಗಯ್ಯ ಮಹಾಸ್ವಾಮಿಗಳು  

ತಾಳಿಕೋಟಿ 16 : ಪಟ್ಟಣದಲ್ಲಿ ತಮ್ಮ ಕುಲ ಕಸಬು ಮಾಡಿಕೊಂಡು ಬದುಕುತ್ತಿರುವ ಶ್ರೀ ಹರಳಯ್ಯ ಸಮಾಜದ ಬಾಂಧವರ ಡಬ್ಬಾ ಅಂಗಡಿಗಳನ್ನು ತೆರುವು ಗೊಳಿಸಿರುವುದರಿಂದ ಕೆಲಸವಿಲ್ಲದೆ ಇಂದು ಬೀದಿಗೆ ಬಂದಿದ್ದಾರೆ ಇದು ಮಾನವೀಯತೆಗೆ ವಿರುದ್ಧವಾದ ಕಾರ್ಯ,ಆಡಳಿತ ಸರ್ಕಾರ ಬಡವರ ಕಣ್ಣೀರೊರಿಸುವ ಕೆಲಸ ಮಾಡಬೇಕೆ ಹೊರತು ಕಣ್ಣೀರು ತರಿಸುವ ಕೆಲಸ ಅಲ್ಲ ಎಂದು ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರಾದ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು. ಶನಿವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ತಾಲೂಕ ಬೇಡ ಜಂಗಮ ಸಮಾಜದಿಂದ ಬೆಂಬಲವನ್ನು ಸೂಚಿಸಿ ಮಾತನಾಡಿದ ಅವರು  ದಲಿತ ಸಮುದಾಯದ ಶ್ರೀ ಹರಳಯ್ಯ ಸಮಾಜದವರ ಅಂಗಡಿಗಳನ್ನು ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಮಾಡದೆ ಏಕಾಏಕಿ ತೆರವು ಗೊಳಿಸಿದ್ದು ಸರಿಯಾದ ಕ್ರಮ ಅಲ್ಲ,ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಅವರಿಗೆ ಆದಷ್ಟು ಬೇಗ ನ್ಯಾಯ ಕೊಡುವ ಕೆಲಸ ಮಾಡಬೇಕು.ಅವರ ಕೆಲವು ಪ್ರಮುಖ ಬೇಡಿಕೆಗಳಿವೆ ಅಧಿಕಾರಿಗಳು ಅವುಗಳನ್ನು ಮನ್ನಿಸಬೇಕು.ಈ ಧರಣಿ ಹೀಗೆಯೇ  ಮುಂದುವರೆದಲ್ಲಿ ಇದು ಬೇರೆ ಸ್ವರೂಪವನ್ನು ತಾಳಬಹುದು ಇದಕ್ಕೆ ಅವಕಾಶ ಮಾಡಿಕೊಡಬಾರದು. ಪಟ್ಟಣದ ಶಾಂತಿ ಎಲ್ಲರಿಗೂ ಮುಖ್ಯವಾಗಬೇಕು ಎಂದ ಅವರು ಧರಣಿ ನಿರಿತ ಶ್ರೀ ಹರಳಯ್ಯ ಸಮಾಜದ ನ್ಯಾಯಪರ ಹೋರಾಟದಲ್ಲಿ  ಮುಂದೆಯೂ ನಾವು ಇರಲಿದ್ದೇವೆ ಎಂದರು. ಹರಳಯ್ಯ ಸಮಾಜದ ಮುಖಂಡ ರಾಘವೇಂದ್ರ ವಿಜಾಪುರ ಮಾತನಾಡಿ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ತಾಲೂಕ ಬೇಡ ಜಂಗಮ ಸಮಾಜದ ಹಿರಿಯರು ನಮ್ಮ ಈ ಹೋರಾಟಕ್ಕೆ ಬೆಂಬಲಿಸಿರುವುದು ನಮಗೆ ಆನೆ ಬಲ ತಂದು ಕೊಟ್ಟಿದೆ, ನಮ್ಮ ಈ ಹೋರಾಟ ಮುಗಿದು ನಮಗೆ ನ್ಯಾಯ ಸಿಗುವವರೆಗೂ ಪೂಜ್ಯರು ನಮ್ಮ ಜೊತೆಯಲ್ಲಿ ಇರಬೇಕೆಂದು ಬಯಸುತ್ತೇವೆ ಎಂದರು. ತಾಲೂಕ ಬೇಡ ಜಂಗಮ ಸಮಾಜದ ಅಧ್ಯಕ್ಷರಾದ ಶರಣಯ್ಯ ಹಿರೇಮಠ,ಕಾರ್ಯದರ್ಶಿ ಈರಯ್ಯ ಹಿರೇಮಠ,ಪ್ರಕಾಶ ಹಿರೇಮಠ,ಗಜದಂಡಯ್ಯ ಹಿರೇಮಠ, ಶ್ರೀ ಹರಳಯ್ಯ ಸಮಾಜದ ಅಧ್ಯಕ್ಷ ರಾಜಶೇಖರ ವಿಜಾಪುರ,ಗೋಪಾಲ ವಿಜಾಪುರ,ಶೌಕತ ಲಾಹೋರಿ, ಲಕ್ಷ್ಮಣ ವಿಜಾಪುರ, ಕೃಷ್ಣ ಮಬ್ರುಮಕರ,ಚಂದ್ರಶೇಖರ ವಿಜಾಪುರ,ರಾಜು ವಿಜಾಪುರ,ಪವನ ಅಗರವಾಲ,ಕಾಶಿನಾಥ ಮಬ್ರುಮಕರ, ಜಗದೀಶ ಬಿಜಾಪುರ,ಪರುಶುರಾಮ ವಿಜಾಪುರ, ರಾಮಕೃಷ್ಣ ಬಿಜಾಪುರ, ಬಸವರಾಜ ವಿಜಾಪುರ,ನಾಗರಾಜ ಬಿಜಾಪುರ,ಮದರೆಮ್ಮ ವಿಜಾಪುರ, ಸೌಮ್ಯ ವಿಜಾಪುರ,ಸುನಂದಾ ವಿಜಾಪುರ, ಪ್ರಿಯಾ ವಿಜಪುರ, ಮಂಜುಳಾ ಬೆನಕನಹಳ್ಳಿ, ನಾಗಮ್ಮ ಬಿಜಾಪುರ,ಯಮನವ್ವ ಬಿಜಾಪುರ, ನೀಲಮ್ಮ ದುತ್ತರಗಿ ಮತ್ತಿತರರು ಇದ್ದರು.