ಅಕ್ಕಮಹಾದೇವಿ ಮಹಿಳಾ ಮಂಡಳಿಗೆ ಸರ್ಕಾರದ ರಾಜ್ಯ ಮಟ್ಟದ ಪ್ರಶಸ್ತಿ

Govt State Level Award to Akkamahadevi Mahila Mandal

ಕೊಪ್ಪಳ 30: ಮಕ್ಕಳ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಗಣ್ಣರಿಗೆ ಮತ್ತು ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರಿಗೆ ರಾಜ್ಯ ಮಟ್ಟದ ಪ್ರಶಸ್ತಿ  ನೀಡಿ ಸನ್ಮಾನಿಸಲಾಯಿತು, ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕೋಮಲಾ ಕುದುರಿಮೋತಿ ನೇತೃತ್ವದ ಕೊಪ್ಪಳದ ಅಕ್ಕಮಹಾದೇವಿ ಮಹಿಳಾ ಮಂಡಳದ ಅತ್ಯುತ್ತಮ ಸೇವೆಗಾಗಿ ಮಹಿಳಾ ಮತ್ತು ಮಕ್ಕಳ ಕ್ಷೇತ್ರದಲ್ಲಿನ ಉತ್ತಮ ಸೇವೆಯನ್ನು ಪರಿಗಣಿಸಿ ರಾಜ್ಯಮಟ್ಟದ ಪ್ರಶಸ್ತಿ ವಿತರಿಸಿ ಮಂಡಳಿಯ ಅಧ್ಯಕ್ಷರಾದ ಕೋಮಲಾ ಕುದುರಿಮೋತಿಯವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ರವರು ಪ್ರಶಸ್ತಿ ಪ್ರಧಾನ ಮಾಡಿ ಸತ್ಕರಿಸಿದರು. 

 ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಇತರ ಜನ ಪ್ರತಿನಿಧಿಗಳು ಪಾಲ್ಗೊಂಡಿದ್ದರು, ಇದೆ ವೇಳೆ ಧೈರ್ಯ ಸಾಹಸ ಸಮಯಪ್ರಜ್ಞೆ ಜೀವ ಕಾಪಾಡಿದ ಮಕ್ಕಳಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸಿದ ಸಂಘ ಸಂಸ್ಥೆಗಳ ಮುಖ್ಯಸ್ಥರಿಗೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಸರ್ಕಾರದ ವತಿಯಿಂದ ವಿತರಣೆ ಮಾಡಿ ಅವರೆಲ್ಲರನ್ನು ಸನ್ಮಾನಿಸಲಾಯಿತು ಕೋಮಲಾ ಕುದುರಿಮೋತಿ ಯವರ ನೇತೃತ್ವದ ನಮ್ಮ ಕೊಪ್ಪಳದ ಅಕ್ಕಮಹಾದೇವಿ ಮಹಿಳಾ ಮಂಡಳದ ಅತ್ಯುತ್ತಮ ಸೇವೆಗಾಗಿ  ರಾಜ್ಯಮಟ್ಟದ ಪ್ರಶಸ್ತಿ ಬಂದಿರುವುದಕ್ಕೆ ಕೊಪ್ಪಳ ಜಿಲ್ಲೆಯ ವಿವಿಧ ಸಂಘಟನೆಗಳು ಮಹಿಳೆಯರು ಹರ್ಷ ವ್ಯಕ್ತಪಡಿಸಿ ಸಂಭ್ರಮಿಸಿ ಅಭಿನಂದಿಸಿದ್ದಾರೆ.