ಬಾಗಲಕೋಟೆ: ಜಿಲ್ಲೆಯಲ್ಲಿ ಹಿಂದೆಂದು ಕಂಡರಿಯದ ಪ್ರವಾಹ ಬಂದಿದ್ದು, ಸಂತ್ರಸ್ತರಾದ ಕುಟುಂಬಗಳಿಗೆ ಸುರಕ್ಷಿತ ಸ್ಥಳದಲ್ಲಿ ಶಾಶ್ವತ ಮನೆ ನಿಮರ್ಾಣಕ್ಕೆ ಸರಕಾರ ಬದ್ದವಾಗಿರುವುದಾಗಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜಿಲ್ಲೆಯ ಪ್ರವಾಹ ಸಂತ್ರಸ್ತರ ಸಮಸ್ಯೆಗಳ ಹಾಗೂ ಬೆಳೆ ಹಾನಿ ಪರಿಹಾರ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ 2009ರಲ್ಲಿ ಆದ ಪ್ರವಾಹದಲ್ಲಿ 65 ಗ್ರಾಮಗಳು ಜಲಾವೃತಗೊಂಡಿದ್ದರೆ, ಈಗ ಸಂಭವಿಸಿದ ಪ್ರವಾಹದಿಂದ 194 ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿರುತ್ತವೆ. ಆದ್ದರಿಂದ ಸಂಪೂರ್ಣ ಸ್ಥಳಾಂತರಕ್ಕೆ ಗ್ರಾಮಸ್ಥರು ಒಪ್ಪಿದ್ದಲ್ಲಿ ಪ್ರವಾಹದಿಂದ ಮುಳುಗಡೆ ಹೊಂದುವ ಗ್ರಾಮಗಳನ್ನು ಸಂಪೂರ್ಣ ಸ್ಥಳಾಂತರಗೊಳಿಸಿ ಶಾಶ್ವತ ಮನೆ ನಿಮರ್ಿಸಿ ಕೊಡಲು ಸರಕಾರ ತಿಮರ್ಾನಿಸಿದೆ ಎಂದರು.
ಜಿಲ್ಲೆಯಲ್ಲಿ ಈಗ ಸಂಭವಿಸಿರುವ ಪ್ರವಾಹದಿಂದ 40292 ಜನ ಸಂತ್ರಸ್ಥರಾಗಿದ್ದಾರೆ. ಇವರ ಜೊತೆ ಜಾನುವಾರುಗಳು ಸಹ ಸಂಕಷ್ಟಕ್ಕೀಡಾಗಿದ್ದು, ತುತರ್ಾಗಿ ಪರಿಹಾರ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಪ್ರವಾಹದಿಂದ ಟಿಸಿ ಹಾಗೂ ವಿದ್ಯುತ್ ಕಂಬಗಳು ಹಾಳಾಗಿದ್ದು, ಅವುಗಳ ದುರಸ್ಥಿ ಹಾಗೂ ಟಿಸಿ ಬದಲಾವಣೆಗೆ ತುತರ್ು ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ 5 ವಿದ್ಯುತ್ ಕಂಪನಿಗಳಿದ್ದು, ಬೇರೆ ಕಂಪನಿಯ ಸಿಬ್ಬಂದಿಗಳನ್ನು ನೇಮಿಸಿಕೊಂಡು ಕೆಲಸ ನಿರ್ವಹಿಸಲು ತಿಳಿಸಿದರು. ಅಧಿಕಾರಿಗಳು ಮಾನವೀಯತೆ ದೃಷ್ಠಿಯಿಂದ ಕೆಲಸ ಮಾಡಬೇಕು ಎಂದರು.
ಸಂತ್ರಸ್ತರ ಮನೆ ನಿಮರ್ಾಣಕ್ಕೆ ಸ್ಥಳ ಗುರುತಿಸುವ ಕಾರ್ಯ ಯುದ್ದೋಪಾದಿಯಲ್ಲಿ ನಡೆಯಬೇಕು. ಸರಕಾರಿ ಜಾಗ ಸಿಗದ ಪಕ್ಷದಲ್ಲಿ ಖಾಸಗಿ ಅವರಿಂದ ಜಮೀನು ಖರೀದಿಸಲು ಕೆಲಸವಾಗಬೇಕು ಎಂದರು. ಒಂದೇ ಕುಟುಂಬದಲ್ಲಿ 3 ರಿಂದ 4 ಕುಟುಂಬಗಳು ವಾಸಿಸುತ್ತಿದ್ದರೆ ಪರಿಶೀಲಿಸಿ ಅವರಿಗೂ ಪರಿಹಾರ ನೀಡುವ ಕಾರ್ಯವಾಗಬೇಕು. 8-10 ದಿನಗಳಲ್ಲಿ ಮನೆ ಹಾನಿ ಹಾಗು ಬೆಳೆ ಹಾನಿ ಕುರಿತು ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ನಿಯಮಾನುಸಾರ ಪರಿಹಾರ ಕಾರ್ಯವಾಗಬೇಕು. ಸಂತ್ರಸ್ತರ ಬದುಕು ವ್ಯವಸ್ಥಿತ ರೀತಿಯಲ್ಲಿ ರೂಪಿಸುವ ಕೆಲಸವಾಗಲಿ ಎಂದರು.
ಸಚಿವರಾದ ಕೆ.ಎಸ್.ಈಶ್ವರಪ್ಪ ಮಾತನಾಡಿ ಸರಕಾರ ಸಂತ್ರಸ್ತರಿಗೆ ಕೊಡಮಾಡುವ ತುತರ್ು ಪರಿಹಾರದ ಮೊತ್ತ 10 ಸಾವಿರ ರೂ.ಗಳನ್ನು 3-4 ದಿನಗಳಲ್ಲಿ ಆರ್.ಟಿ.ಜಿ.ಎಸ್ ಮೂಲಕ ಜಮಾ ಮಾಡಬೇಕು. ಮಣ್ಣಿನ ಮನೆಗಳು ಬಾಗಶಃ ಗೋಡೆಗಳು ಕುಸಿದಿದ್ದರೆ ಇನ್ನು ಬೀಳುವ ಸಂಭವಿರುತ್ತವೆ. ಆದ್ದರಿಂದ ಸವರ್ೆ ಮಾಡುವಲ್ಲಿ ಅವುಗಳಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡುವ ಕೆಲಸವಾಗಬೇಕು. ಬೆಳೆ ಸಮೀಕ್ಷೆಯನ್ನು 10 ದಿನಗಳಲ್ಲಿ ಮುಗಿಸಿ ತುತರ್ಾಗಿ ಪರಿಹಾರ ನೀಡುವಂತಾಗಬೇಕು ಎಂದರು.
ಶಾಲೆಗಳು ಪುನರ್ ಆರಂಭವಾಗಬೇಕು. ಪ್ರವಾಹದಿಂದ ಶಾಲೆಯ ಕಟ್ಟಡಗಳು ಶೀಥಿಲಗೊಂಡಿರುವದರಿಂದ ಅವುಗಳನ್ನು ಪರಿಶೀಲಿಸಬೇಕು. ಗೋಡೆ ಬಿದ್ದು ಮಕ್ಕಳಿಗೆ ಪ್ರಾಣಿ ಹಾನಿಯಾದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಜನರಿಗ ಶಾಶ್ವತ ಸೂರು ನೀಡುವ ಕಾರ್ಯ ಸರಕಾರದ ಉದ್ದೇಶವಾಗಿದೆ. ಆದ್ದರಿಂದ ಪರಿಹಾರ ಕಾರ್ಯದಲ್ಲಿ ಹಣದ ಕೊರತೆ ಇರುವದಿಲ್ಲ. ಕೇಂದ್ರದಿಂದ 1025 ಕೋಟಿ ರೂ. ಬಂದಿರುವುದಾಗಿ ತಿಳಿಸಿದರು.
ಶಾಸಕರಾದ ವೀರಣ್ಣ ಚರಂತಿಮಠ, ಸಿದ್ದು ಸವದಿ, ಆನಂದ ನ್ಯಾಮಗೌಡರ, ದೊಡ್ಡನಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಎಸ್.ಆರ್.ಪಾಟೀಲ, ಹಣಮಂತ ನಿರಾಣಿ ಮಾತನಾಡಿ ತಮ್ಮ ತಮ್ಮ ಕ್ಷೇತ್ರದ ಪ್ರವಾಹದಿಂದ ಉಂಟಾದ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದರು.
ಮುಳುಗಡೆ ಗ್ರಾಮಗಳ ಸಂಪೂರ್ಣ ಸ್ಥಳಾಂತರಿಸುವ ಕ್ರಮಕೈಗೊಳ್ಳುವಂತೆ ಸಚಿವರಲ್ಲಿ ಕೇಳಿಕೊಂಡರು. ಜಿಲ್ಲಾಧಿಕಾರಿ ಆರ್.ರಾಂಚಂದ್ರನ್ ಅವರು ಪ್ರವಾಹದಿಂದ ಜಿಲ್ಲೆಯಲ್ಲಾದ ಹಾನಿ, ಸಮೀಕ್ಷೆ ಕಾರ್ಯ ಹಾಗೂ ಪರಿಹಾರದ ವಿತರಣೆ ಬಗ್ಗೆ ವಿವರವಾಗಿ ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ತುಷಾರ ಗಿರಿನಾಥ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ದುಗರ್ೇಶ ರುದ್ರಾಕ್ಷಿ, ಸೇರಿದಂತೆ ಉಪವಿಭಾಗಾಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.