ನಿರುದ್ಯೋಗಿ ಸಂಗೀತ ಶಿಕ್ಷಕರಿಗೆ ನೇಮಕಾತಿಗೆ ಸಕರ್ಾರ ಮುಂದಾಗಬೇಕು :ಮಲ್ಲಿಕಾಜರ್ುನ ಶ್ರೀ

ಧಾರವಾಡ ಜು.3: ಸಂಗೀತ ಶಿಕ್ಷಕರಾಗುವ ಕನಸು ಹೊತ್ತು ಬಿ.ಎ. ಮ್ಯೂಜಿಕ್, ಎಂ.ಎ. ಮ್ಯೂಜಿಕ್ ಹಾಗೂ ಸೀನಿಯರ್ ಪದವಿ ಪಡೆದು ಸಾವಿರಾರು ಯುವಕ ಯುವತಿಯರು ನೇಮಕಾತಿ ನಡೆಯದೆ ಇರುವುದರಿಂದ ನಿರುದ್ಯೋಗಿಗಳಾಗಿದ್ದಾರೆ. ಇದರಿಂದ ಅವರ ಬದುಕು ದುಸ್ತರವಾಗಿದೆ. ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಾಗಿ ಅಲೆದಾಡುವಂತಹ ಪರಿಸ್ಥಿತಿ ಬಂದಿದೆ. ಈಗಲಾದರೂ ಸಕರ್ಾರ ಸಂಗೀತ ಶಿಕ್ಷಕರ ನೇಮಕಾತಿಗೆ ನೆರವಾಗಲು ಮುಂದಾಗಬೇಕು ಎಂದು ಮುರುಘಾಮಠದ  ಮಲ್ಲಿಕಾಜರ್ುನ ಶ್ರೀಗಳು ಹೇಳಿದರು.   

ಸಂಗೀತ ಶಿಕ್ಷಕರನ್ನು ನೇಮಕಾತಿಗೊಳಿಸಲು ಅಖಿಲ ಕನರ್ಾಟಕ ಗಾನಯೋಗಿ ಸಂಗೀತ ಪರಿಷತ್ತಿನ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಘಟಕದಿಂದ ನಿರುದ್ಯೋಗಿ ಸಂಗೀತ ಶಿಕ್ಷಕರ ನೇಮಕಾತಿ ಮಾಡಲು ನಗರದಲ್ಲಿನ ಮುರುಘಾಮಠದ ಮಲ್ಲಿಕಾಜರ್ುನ ಶ್ರೀಗಳ ಮುಖಾಂತರ ಮುಖ್ಯಮಂತ್ರಿ   ಬಿ.ಎಸ್. ಯಡಿಯೂರಪ್ಪರವರಿಗೆ ಸಂಗೀತ ಶಿಕ್ಷಕರ ನೇಮಕಾತಿ ಮನವಿಯನ್ನು ಸಲ್ಲಿಸಲಾಗಿದೆ.                                               

ಅದೇ ರೀತಿ ಸಂಗೀತ ಪರಿಷತ್ತಿನ ಜಿಲ್ಲಾ ಸಂಘಟನ ಕಾರ್ಯದಶರ್ಿ ಯಮನಪ್ಪ ಜಾಲಗಾರ ಮಾತನಾಡಿ ಈಗಾಗಲೇ ರಾಜ್ಯದ ಬಹುತೇಹ ತಾಲೂಕ ತಹಶೀಲ್ದಾರರ ಮೂಲಕ ಮತ್ತು ಬಹುತೇಕ ಜಿಲ್ಲೆಗಳಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಸಕರ್ಾರದಿಂದ ಇದೂವರೆಗೆ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ.   ಆದ್ದರಿಂದ ಮಠಾಧೀಶರ ಮುಖಾಂತರ  ಹು-ಧಾ ಜಿಲ್ಲಾ ಸಂಘಟನಾ ಪರಿಷತ್ತಿನ ಕಾರ್ಯದಶರ್ಿ   ಯಮನಪ್ಪ ಜಾಲಗಾರ, ನಿವೃತ್ತ ಆಮರ್ಿ ಅಧಿಕಾರಿ   ಬಿ.ಬಿ ಚಕ್ರಸಾಲಿ,  ಎ.ಎಮ್. ಅರುಣಕುಮಾರ, ಹಾಗೂ  ಫಕ್ಕೀರಪ್ಪ ಮಾದನಭಾವಿ, ಹಾಗೂ ಪರಿಷತ್ತಿನ ಪದಾಧಿಕಾರಿಗಳು ಪೂಜ್ಯರಿಗೆ ಮನವಿ ಪತ್ರ ಸಲ್ಲಿಸಿದರು.