ಸರ್ಕಾರಿ ಸೇವೆ ಶಾಶ್ವತ ಮೌಲ್ಯದದು: ಬಿ.ಆರ್. ರವಿ ಹಿರೇಮಠ
Government service is of enduring value: B.R. Ravi Hiremath
ನೇಸರಗಿ 07: ಸರಕಾರಿ ನೌಕರರಾಗಿ ಮಾಡಿದ ಸೇವೆಯೆ ಚಿರಸ್ಥಾಯಿಯಾಗಿ ಉಳಿಯಬಲ್ಲದು ಎಂದು ಬಿಆರಿ್ಸ ರವಿ ಹಿರೇಮಠ ಹೇಳಿದರು.ಸಮೀಪದ ಹೊಸಕೋಟಿಯ ಸರಕಾರಿ ಮಾದರಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ನಿವೃತ್ತರಾದ ಎಸ್.ಐ.ಮಿರಜನ್ನವರ ಪ್ರಯುಕ್ತ ಅವರನ್ನು ಸನ್ಮಾನಿಸಿ ಅವರು ಮಾತನಾಡಿ, ಮಿರಜನ್ನವರ ಶಿಕ್ಷಕರು ತಮ್ಮ ಶಿಕ್ಷಕರ ಅವಧಿಯಲ್ಲಿ ಉತ್ಸಾಹದಿಂದ ಮಕ್ಕಳ ಶ್ರೇಯೋಭಿವೃದ್ದಿಗೆ ಶ್ರಮಿಸಿದ್ದಾರೆಂದರು. ಬೈಲಹೊಂಗಲ ತಾಲೂಕ ಪ್ರಾಥಮಿಕ ಶಿಕ್ಷಕರ ಸಂಘ ಅಧ್ಯಕ್ಷ ಎಸ್.ಡಿ ಗಂಗಣ್ಣವರ ಮಾತನಾಡಿ, ಕಳೆದ 30 ವರ್ಷಗಳಿಂದ ಎಸ್.ಎನ್. ಮಿರ್ಜನ್ನವರ ಶಿಕ್ಷಕರು ಉತ್ತಮ ಸೇವೆ ಸಲ್ಲಿಸಿದ್ದಾರೆ.
ಪ್ರಾರಂಭದಲ್ಲಿ ಇಂಚಲ ಶಿವಾನಂದ ಭಾರತಿ ಶಿಕ್ಷ ಣ ಸಂಸ್ಥೆಯಲ್ಲಿ 6 ವರ್ಷ ಸಹ. ಶಿಕ್ಷಕ ರಾಗಿ ಸೇವೆ ಪ್ರಾರಂಭಿಸಿ, ವಣ್ಣೂರ ಪ್ರಾಥಮಿಕ ಶಾಲೆಯಲ್ಲಿ ಸುದಿರ್ಘ 26 ವರ್ಷ ಸೇವೆ ಸಲ್ಲಿಸಿದ್ದಾರೆ.4 ವರ್ಷದಿಂದ ಹೊಸಕೋಟಿ ಸರಕಾರಿ ಮಾದರಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ನಿವೃತ್ತರಾಗುತ್ತಿದ್ದಾರೆ. ಇವರು ದೈಹಿಕ ಶಿಕ್ಷಣ ಶಿಕ್ಷಕ ಸಂಘ ತಾಲೂಕ ಅದ್ಯಕ್ಷರಾಗಿ 4 ವರ್ಷ, ರಾಜ್ಯ ಸರಕಾರಿ ನೌಕರ ಸಂಘ ತಾಲೂಕ ಉಪಾಧ್ಯಕ್ಷರಾಗಿ 5 ವರ್ಷ, ದೈಹಿಕ ಶಿಕ್ಷಣ ಶಿಕ್ಷಕ ಸಂಘ ತಾಲೂಕ ಕಾರ್ಯದರ್ಶಿಯಾಗಿ 5 ವರ್ಷ ಸೇವೆ ಮಾಡಿದ್ದಾರೆಂದರು. ಇದೇ ಸಂದರ್ಭದಲ್ಲಿ ನಿವೃತ್ತರಾದ ಮುಖ್ಯೋಪಾಧ್ಯಾಯ ಎಸ್.ಟಿ.ಹೊಸಮನಿ, ಬೇರೆ ಕಡೆ ವರ್ಗಾವಣೆಗೊಂಡ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಹೊಸಕೋಟಿಯ ಬರಮನ್ನಾ ಶ್ರೀಗಳು ಸಾನಿದ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿಆರಿ್ಪಗಳಾದ ಎಸ್.ಬಿ.ಸಂಗನಗೌಡರ, ರಮೇಶ ಇಂಗಳಗಿ, ರಾಜು ಹಕ್ಕಿ, ಶಿಕ್ಷಕರಾದ ಎ.ಎಸ್.ಉಳವಿ, ಬಿ.ಕೆ.ಪೂಜೇರಿ, ಎಂ.ಜಿ.ಕಿರಗಿ, ಎಂ.ಎಸ್. ಬಾಗೇವಾಡಿ ಚಿದಾನಂದ ವಾರಿ, ರಮೇಶ ದೊಡಗೌಡರ, ಶಿವಾನಂದ ಗಾಣಗಿ, ಸಂತೋಷ ಪಾಟೀಲ, ಆನಂದ ಖೋದಾನಪೂರ, ರಾಮಚಂದ್ರ ತಳವಾರ, ದೇಮಪ್ಪ ಮುಂಡಗಿ, ಇದ್ದರು. ಎಸ್.ಎಸ್.ಬಾಳಿಗಟ್ಟಿ ಸ್ವಾಗತಿಸಿದರು. ಶ್ರೀದರ ವಾರಿ ನಿರೂಪಿಸಿದರು.
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ 