ಸರಕಾರದ ಯೋಜನೆಗಳು ಬೀದಿ ನಾಟಕದಿಂದ ಪ್ರಚಾರ

ಲೋಕದರ್ಶನ ವದಿ

ಬೆಳಗಾವಿ 03: ಸರಕಾರದ ಯೋಜನೆಗಳು ಸಮರ್ಪಕವಾಗಿ ಜನ ಸಮಾನ್ಯರಿಗೆ ನೇರವಾಗಿ ಪಲುಪಿಸಲು ಯೋಜನೆಗಳು ತಿಳುವಳಿಕೆ ಮೂಡಿಸಲು ಸರಕಾರಗಳು ಬಗೆ ಬಗೆಯ ಕಾರ್ಯಕ್ರಮಗಳ ಮೂಲಕ ಪ್ರಚಾರ ಪಡಿಸುತ್ತಿವೆ. 

ಅದರಂತೆಯೇ ಕೆಲವು ಗ್ರಾಮಗಳನ್ನು ಆಯ್ದುಕೊಂಡು ಆ ಗ್ರಾಮಗಳಿಗೆ ಜನರಿಗೆ ತಿಳುವಳಿಕೆಯಿಂದ ತಿಳಿದುಕೊಳ್ಳಲು ಜನರ ಮನಸ್ಸಿಗೆ ನಾಟುವಂತೆ ಬೀದಿ ನಾಟಕ, ಜನಪದ ಗಾಯಣ ಕಾರ್ಯಕ್ರಗಳಂತಹ ಹಲವು ಬಗೆಯ ಕಾರ್ಯಕ್ರಮ ನೀಡಿ ಜನರ ಮನಸ್ಸಿನಲ್ಲಿ ಅಚ್ಚಾಗಿ ಉಳಿಯುವಂತೆ ಪ್ರಚಾರ ಪಡಿಸುತ್ತಿವೆ. 

ಹುಕ್ಕೇರಿ  ತಾಲೂಕಿನ  ಆಯ್ಕೆ  ಮಾಡಿದ   ಗ್ರಾಮವಾದ ಕಡಹಟ್ಟಿ  ಜಿಲ್ಲಾ  ಪಂಚಾಯತ್ ಆರೋಗ್ಯ  ಮತ್ತು   ಕುಟುಂಬ ಕಲ್ಯಾಣ  ಇಲಾಖೆ ,   ತಾಲೂಕಾ ಆರೋಗ್ಯ  ಇಲಾಖೆ  ಹಾಗೂ  ಗ್ರಾಮ ಪಂಚಾಯತ್  ಇವುಗಳ  ಸಹಯೋಗದಲ್ಲಿ  ಆರೋಗ್ಯ ಇಲಾಖೆಯ  ವಿವಿಧ  ಯೋಜನೆಗಳಾದ  ಗಭರ್ಿಣಿ  ಮಹಿಳೆಯರು ಆರೈಕೆ,   108  ಆರೋಗ್ಯ ಕವಚ,  ಜನನಿ  ಸುರಕ್ಷಾ  ಯೋಜನೆ,  ಹದಿ ಹರೆಯದವರು, ಮಾತೃಷಿ  ಯೋಜನೆ, ಬೇಟಿ ಬಚಾವೋ  ಬೇಟಿ  ಪಡಾವೋ, ಆಯುಷ್ಮಾನ ಭಾರತ  ಆರೋಗ್ಯ  ಕನರ್ಾಟಕ,  ಕ್ಷಯ ರೋಗ, ಕುಷ್ಠ ರೋಗ,   ಮುಂತಾದ ಯೋಜನೆಗಳ ಕುರಿತು ಬೀದಿ ನಾಟಕದ ಮೂಲಕ  ನಿಸರ್ಗ ಗ್ರಾಮೀಣ ಅಭಿವೃದ್ದಿ  ಸಂಸ್ಥೆ  ಚಿಂಚಲಿ  ತಂಡದ ಸದಸ್ಯರಾದ  ರಾಮಚಂದ್ರ  ಅ  ಕಾಂಬಳೆ, ಪ್ರಶಾಂತ  ಕಾಂಬಳೆ, ಶ್ಯಾಮ ಸುಂದರ  ಬ್ಯಾಕುಡೆ. ಅಕ್ಕ ಮಹಾದೇವಿ  ಜೋಕಾನಟ್ಟಿ.  ಮಹೇಶ  ಖೊಂಬೆ,  ಧನಂಜಯ  ಬಸನಾಯಿಕ,   ಚಿರಂಜೀವಿ ಕಾಂಬಳೆ, ಸಂತೋಷ ಕಾಂಬಳೆ ಇವರಿಂದ ಸಾರ್ವಜನಿಕರಲ್ಲಿ  ಬೀದಿ ನಾಟಕದ ಮೂಲಕ  ಜಾಗೃತಿ ಅರಿವು ಮುಗಿಸಲಾಯಿತು. ಈ ಸಂದರ್ಭದಲ್ಲಿ  ಗ್ರಾಮದ   ಆಶಾ ಕಾರ್ಯಕತರ್ೆಯರಾದ  ಆಲೂರು,  ಬಡಿಗೇರ  ಗ್ರಾಮದ ಮುಖಂಡರು  ಸಾರ್ವಜನಿಕರು ಭಾಗವಹಿಸಿದ್ದರು.