ನದಾಫ್‌- ಪಿಂಜಾರ ಸಮಾಜಕ್ಕೆ ಸರಕಾರ ಸ್ಪಂದಿಸುತ್ತಿಲ್ಲ: ಮುದ್ದಾಬಳ್ಳಿ

Government not responding to Nadaf-Pinjara community: Muddaballi

ನದಾಫ್‌- ಪಿಂಜಾರ ಸಮಾಜಕ್ಕೆ ಸರಕಾರ ಸ್ಪಂದಿಸುತ್ತಿಲ್ಲ: ಮುದ್ದಾಬಳ್ಳಿ 

ಕೊಪ್ಪಳ 13: ರಾಜ್ಯದ ನದಾಫ್‌- ಪಿಂಜಾರ ಸಮುದಾಯಕ್ಕೆ ಈ ಬಾರಿ ಬಜೆಟ್ ನಲ್ಲಿ ಯಾವುದೇ ಅನುದಾನ, ಆದ್ಯತೆ ನೀಡದೆ ಅನ್ಯಾಯ ಮಾಡಿದೆ, ಪಿಂಜಾರ್ ಸಮಾಜಕ್ಕೆ ಸರಕಾರ ಸ್ಪಂದಿಸುತ್ತಿಲ್ಲ ಎಂದು ಕೊಪ್ಪಳ ಜಿಲ್ಲಾ ನದಾಫ್ ಪಿಂಜಾರ ಸಮಾಜದ ಅಧ್ಯಕ್ಷ  ಕಾಶೀಂಅಲಿ ಮುದ್ದಾಬಳ್ಳಿ ಹೇಳಿದರು. ಅವರು ಗುರುವಾರದಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ ಪಿಂಜಾರ್ ನದಾಫ್ ಸಮಾಜ ಸುಮಾರು 25 ಲಕ್ಷ ಜನಸಂಖ್ಯೆ ಇದ್ದು , ನಮ್ಮ ಸಮಾಜ ಅರೆ ಅಲೆಮಾರಿಗಳಾಗಿದ್ದು, ಆರ್ಥಿಕವಾಗಿ, ಶೈಕ್ಷಣಿಕವಾಗಿ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು,  ಸರಕಾರ ವೃತ್ತಿ ಆಧಾರದ ಮೇಲೆ ಪ್ರವರ್ಗ-1ರಲ್ಲಿ ಮೀಸಲಾತಿಯನ್ನು ನೀಡಿದ್ದು, ಇತರೆ 117 ಜಾತಿಯರೊಂದಿಗೆ ಸ್ಪರ್ಧೆ ಮಾಡಿ ಶೇ.4ರ ಒಟ್ಟು ಮೀಸಲಾತಿಯಲ್ಲಿ ಸರ್ಕಾರಿ ಹುದ್ದೆಗೆ ಆಯ್ಕೆಯಾಗುವುದು ಕಷ್ಟ ಸಾಧ್ಯವಾಗಿರುತ್ತದೆ, ಕೆಪಿಎಸ್ಸಿಯಲ್ಲಿ ಪಿಂಜಾರ ಸಮಾಜದವರು ಆಯ್ಕೆಯಾಗಿರುವುದಿಲ್ಲ, ಸಮಾಜದವರು ಸತತವಾಗಿ ಮನವಿಗಳನ್ನು ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ,ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಪಟ್ಟ ಸಚಿವರುಗಳಿಗೆ ಖುದ್ದಾಗಿ ಭೇಟಿ ಮಾಡಿದರು ಸಹ ಸ್ಪಂದಿಸಿಲ್ಲ ಹೀಗಾಗಿ ಈ ಬಾರಿ ರಾಜ್ಯ ಸರ್ಕಾರ ನೀಡಿರುವ ಬಜೆಟ್ ನಲ್ಲಿ ಅನ್ಯಾಯವಾಗಿದೆ ಎಂದರು.  ಪಿಂಜಾರ್ ನದಾಫ್ ಸಮಾಜದ ರಾಜ್ಯ ಕೋಶಾಧ್ಯಕ್ಷ ಶಾಬುದ್ದೀನ್ ನೂರಬಾಷಾ ಮಾತನಾಡಿ ನದಾಫ್ ಪಿಂಜಾರ ಸಮಾಜದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಂದಿನ ವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.  ಸುದ್ದಿಗೋಷ್ಠಿಯಲ್ಲಿ ನದಾಫ್ ಪಿಂಜಾರ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಹೊನ್ನೂರ್ ಸಾಬ್ ಬೈರಾಪುರ, ಕೊಪ್ಪಳ ತಾಲೂಕು ಅಧ್ಯಕ್ಷ ಆಸ್ಮಾನ್ ಸಾಬ್ ಕರ್ಕಿಹಳ್ಳಿ, ಕೊಪ್ಪಳ ತಾಲೂಕ ಉಪಾಧ್ಯಕ್ಷರಾದ ಫಕ್ರುಸಾಬ್ ನದಾಫ್, ಮುರ್ತುಜಾಚುಟ್ಟಾದ್ ಉಪಸ್ಥಿತರಿದ್ದರು.