ಸರಕಾರದ ನಿರ್ಲಕ್ಷ್ಯ: ಸೌಧ ಈಗ ಹಾಳು ಕೊಂಪೆ

ಪಾರೇಶ ಭೋಸಲೆ  

ಬೆಳಗಾವಿ ; ಉತ್ತರ ಕನರ್ಾಟಕದ ಹೆಬ್ಬಾಗಿಲು ಎಂದು ಕರೆಯಲಾಗುತ್ತಿದ್ದ ಬೆಳಗಾವಿಯ ಸುವರ್ಣ ವಿಧಾನ ಸೌಧವು ರಾಜ್ಯ ಸರಕಾರದ ನಿರ್ಲಕ್ಷದಿಂದ ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ಇಂದು ಹಾಳು ಕೊಂಪೆಯಾಗಿ ಮಾರ್ಪಡುತ್ತಿರುವದು ಈ ಭಾಗದ ದುದರ್ೆವದ ಸಂಗತಿಯಾಗಿದೆ. 

ಈ ಹಿಂದಿನ ರಾಜ್ಯ ಸರಕಾರಗಳು ಇಲ್ಲಿ ವರ್ಷಕ್ಕೆ ಎಂಟು ದಿನಗಳ ಕಾಲ ಅಧಿವೇಶನವನ್ನು ಹಮ್ಮಿಕೊಳ್ಳುವದನ್ನು ಹೊರತುಪಡಿಸಿದರೆ ಯಾವದೇ ಕಚೇರಿಗಳನ್ನು ಇಲ್ಲಿನ ಸುವರ್ಣ ಸೌಧಕ್ಕೆ ಸ್ಥಳಾಂತರಿಸಿ ಸೌಧವು ಸದಾ ಚಟುವಟಿಕೆಯಿಂದ ಕಾರ್ಯ ಮಾಡಲು ಅನುವು ಮಾಡಿಕೊಡದೆ ಇರುವದು ಈ ಭಾಗದ ದುರಂತವಾಗಿದೆ. ಈ ಹಿಂದೆ ಅಧಿಕಾರದಲ್ಲಿ ಇದ್ದ ಮುಖ್ಯಮಂತ್ರಿಗಳಾಗಲಿ ಅಥವಾ ಸಚಿವರುಗಳಾಗಲಿ ಬೆಳಗಾವಿಗೆ ಕಾರ್ಯಕ್ರಮಗಳಿಗೆ ಆಗಮಿಸಿ ಪ್ರಮುಖ ಕಚೇರಿಗಳನ್ನು ಸೌಧಕ್ಕೆ ಸ್ಥಳಾಂತರಿಸುವ ಭರವಸೆಗಳನ್ನು ನೀಡಿರುವದನ್ನು ಬಿಟ್ಟರೆ ಯಾವ ಕಾರ್ಯ ಮಾಡಲಿಲ್ಲ.

ಈಗ ಸದ್ಯ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ಇಲ್ಲಿನ ಸುವರ್ಣ ಸೌಧದಲ್ಲಿ ನಡೆಸಬೇಕಿದ್ದ ಚಳಿಗಾಲ ಅಧಿವೇಶನವನ್ನು ಉತ್ತರ ಕನರ್ಾಟಕ ಪ್ರವಾಹದ ನೆಪ ನೀಡಿ ಅಧಿವೇಶನವನ್ನು ಬೆಂಗಳೂರಿಗೆ ಸ್ಘಳಾಂತರ ಮಾಡಿದರು. ಅಲ್ಲದೆ ಸುವರ್ಣ ಸೌಧ ನಿರ್ವಹಣೆಗೆ ಕೂಡಾ ಮೀನಾಮೇಷ ಮಾಡುತ್ತಿರುವದರಿಂದ ಇಲ್ಲಿನ ಸುವರ್ಣ ಸೌಧವು ತುಕ್ಕು ಹಿಡಿದಿದೆ. ಅಲ್ಲದೆ ಸೌಧಕ್ಕೆ ಬೆಳಕು ಹರಿಸಬೇಕಿದ್ದ ವಿದ್ಯುತ್ ತಂತಿ ಹರಿದು ನೇತಾಡುತ್ತಿವೆ.

ಈ ಕುರಿತು ಈ ನಿರ್ವಹಣೆಯ ಹೊಣೆಯನ್ನು ನೋಡಿಕೊಳ್ಳುತ್ತಿರುವ ಅಧಿಕಾರಿಗಳು ಮಾತ್ರ ನಮಗೆ ನಿರ್ವಹಣೆಗೆ ಅನುದಾನ ಸರಿಯಾಗಿ ಸಿಗುತ್ತಿಲ್ಲ ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸುವರ್ಣ ವಿಧಾನ ಸೌಧವು ಧೂಳು ತುಂಬಿದ ಗೋದಾಮು ಆಗಿ ಪರಿವರ್ತನೆಯಾಗಿರುವದು ದುರಂತ ಎನ್ನಲಾಗಿದೆ.

ಇನ್ನೆನು ಉತ್ತರ ಕನರ್ಾಟಕದ ಸಕ್ಕರೆ ಜಿಲ್ಲೆ ಎನಿಸಿಕೊಂಡಿರುವ ಬೆಳಗಾವಿಯಲ್ಲಿ ಸುವರ್ಣ ವಿಧಾನ ಸೌಧವು ನಿಮರ್ಾಣವಾಗಿದೆ. ಇಲ್ಲಿ ಸರಕಾರ ಅಧಿವೇಶದೊಂದಿಗೆ ಕಾರ್ಯ ಚಟುವಟಿಕೆ ನಡೆಸಿ ಈ ಭಾಗದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ ಎಂದು ಹೊಂದಿದ್ದ ಆಶಾಭಾವನೆಯು ಸರಕಾರ ನಿರ್ಲಕ್ಷ ನಡೆಯಿಂದ ಹುಸಿಯಾಗಿದೆ. ಸರಕಾರದ ಕೆಲಸ ದೇವರ ಕೆಲಸ ಎಂಬ ನುಡಿಗೆ ವಿರುದ್ದವಾಗಿ ನಡೆದಿರುವದನ್ನು ನೋಡಿದರೆ ಸರಕಾರದ ಕೆಲಸ ಸೌಧದ ನಿರ್ಲಕ್ಷದ ಕೆಲಸ ಎಂಬಂತೆ ಪರಿವರ್ತನೆಗೊಂಡತಾಗಿದೆ.

ಉತ್ತರ ಕನರ್ಾಟಕದ ಅಭಿವ್ರದ್ದಿಗೆ ಆಶಾಕಿರಣವಾಗಬೇಕಿದ್ದ ಸುವರ್ಣ ಸೌಧವು ಸರಕಾರದ ನಿರ್ಲಕ್ಷ ದೋರಣೆಯಿಂದ ನಿರ್ವಹಣೆಯಾಗದೆ ಹಾಳುಕೊಂಪೆಯಾಗಿರುವದು ಈಭಾಗದ ದುರಂತ ಎನ್ನಲಾಗುತ್ತಿದೆ.