ಬಡವರ ಕಲ್ಯಾಣ, ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಬದ್ಧ-ರಾಷ್ಟ್ರಪತಿ ರಾಮನಾಥ್ ಕೋವಿಂದ್

ನವದೆಹಲಿ, ಜ 31, ಆಯುಷ್ಮಾನ್ ಭಾರತ್‌ ಯೋಜನೆಯ ಪರಿಣಾಮವನ್ನು ದೇಶದ ಜನರ ಆರೋಗ್ಯದಲ್ಲಿ ಕಾಣಬಹುದಾಗಿದ್ದು, ಈ ಯೋಜನೆಯಡಿ 75 ಲಕ್ಷ ಬಡವರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಶುಕ್ರವಾರ ಹೇಳಿದ್ದಾರೆ. ಸಂಸತ್ ನ ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಕೋವಿಂದ್, ಕೇಂದ್ರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಡಿ 75 ಲಕ್ಷಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ.  27,000 ಕ್ಕೂ ಹೆಚ್ಚು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

ದೇಶದ ಮಹಿಳೆಯರನ್ನು ಸಬಲೀಕರಣಗೊಳಿಸಲು ಸರ್ಕಾರ ಹಲವು ಕ್ರಮಗಳು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ ಎಂದು ರಾಷ್ಟ್ರಪತಿ ಹೇಳಿದರು. ‘ಪರಸ್ಪರ ಚರ್ಚೆಗಳು ಮತ್ತು ಸಮಾಲೋಚನೆಗಳು ಪ್ರಜಾಪ್ರಭುತ್ವವನ್ನು  ಮತ್ತಷ್ಟು ಬಲಪಡಿಸುತ್ತವೆ ಎಂಬ ಅಭಿಪ್ರಾಯ ಸರ್ಕಾರ ಹೊಂದಿದೆ. ಆದರೆ, ಇದೇ ಸಮಯದಲ್ಲಿ, ಪ್ರತಿಭಟನೆಯ ಹೆಸರಿನಲ್ಲಿ ಯಾವುದೇ ರೀತಿಯ ಹಿಂಸಾಚಾರ ಸಮಾಜ ಮತ್ತು ದೇಶವನ್ನು ದುರ್ಬಲಗೊಳಿಸುತ್ತದೆ.’ ಎಂದು ಅವರು ಹೇಳಿದರು.